ಸೋಗಾನೆ ಜೈಲಿನ ಮೇಲೆ ಪೊಲೀಸರ ದಾಳಿ*

*ಸೋಗಾನೆ ಜೈಲಿನ ಮೇಲೆ ಪೊಲೀಸರ ದಾಳಿ*

ಭಾನುವಾರ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ಮಾರ್ಗದರ್ಶನದಲ್ಲಿ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತೃತ್ವದ ಬಾಬು ಆಂಜನಪ್ಪ, ಡಿವೈಎಸ್.ಪಿ, ಶಿವಮೊಗ್ಗ –ಎ ಉಪವಿಭಾಗ, ಕೃಷ್ಣ ಮೂರ್ತಿ, ಡಿವೈಎಸ್.ಪಿ, ಡಿ.ಎ.ಆರ್, ಶಿವಮೊಗ್ಗ, ಸಿದ್ದೇಗೌಡ, ಪೊಲೀಸ್ ನಿರೀಕ್ಷಕರು, ಜಯನಗರ ಪೊಲೀಸ್ ಠಾಣೆ, ಭರತ್, ಪೊಲೀಸ್ ನಿರೀಕ್ಷಕರು, ಮಹಿಳಾ ಪೊಲೀಸ್ ಠಾಣೆ, ಅಶ್ವಥ್ ಗೌಡ, ಪೊಲೀಸ್ ನಿರೀಕ್ಷಕರು, ತುಂಗಾ ನಗರ ಪೊಲೀಸ್ ಠಾಣೆ ಪ್ರಭಾರ, ಹರೀಶ್ ಕೆ ಪಾಟೀಲ್, ಪೊಲೀಸ್ ನಿರೀಕ್ಷಕರು, ಕುಂಸಿ ಪೊಲೀಸ್ ಠಾಣೆ ಮತ್ತು ಶ್ರೀಮತಿ ಚಂದ್ರಕಲಾ, ಪೊಲೀಸ್ ನಿರೀಕ್ಷಕರು, ವಿನೋಬಾನಗರ ಪೊಲೀಸ್ ಠಾಣೆ ಹಾಗೂ 10 ಜನ ಪಿಎಸ್ಐ ಮತ್ತು 50 ಜನ ಪೊಲೀಸ್ ಸಿಬ್ಬಂಧಿಗಳ ತಂಡವು ಶಿವಮೊಗ್ಗ ಸೋಗಾನೆಯ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ, ಮಹಿಳಾ ಬ್ಯಾರಾಕ್ ಗಳನ್ನು ಸೇರಿದಂತೆ ಕೇಂದ್ರ ಕಾರಾಗೃಹವನ್ನು ಪರಿಶೀಲನೆ ನಡೆಸಿದರು.