ಬಾಲಕಿಗೆ ಲೈಂಗಿಕ ದೌರ್ಜನ್ಯ;* *73 ವರ್ಷದ ಮುದುಕನಿಗೆ ಶಿಕ್ಷೆ ಘೋಷಿಸಿದ ಕೋರ್ಟ್**ಏನು ಶಿಕ್ಷೆ ನೀಡಿತು ನ್ಯಾಯಾಲಯ?*
*ಬಾಲಕಿಗೆ ಲೈಂಗಿಕ ದೌರ್ಜನ್ಯ;*
*73 ವರ್ಷದ ಮುದುಕನಿಗೆ ಶಿಕ್ಷೆ ಘೋಷಿಸಿದ ಕೋರ್ಟ್*
*ಏನು ಶಿಕ್ಷೆ ನೀಡಿತು ನ್ಯಾಯಾಲಯ?*
ಹತ್ತು ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ 73 ವರ್ಷ ವಯಸ್ಸಿನ ಶಿವಮೊಗ್ಗ ತಾಲ್ಲೂಕಿನ ವೃದ್ಧ ವ್ಯಕ್ತಿಗೆ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-1 ನಲ್ಲಿ ವಿಚಾರಣೆ ನಡೆದು, ಆರೋಪಿಯ ವಿರುದ್ಧ ಆರೋಪ ದೃಢ ಪಟ್ಟಿರುವುದರಿಂದ 2.50 ಲಕ್ಷ ರೂ. ದಂಡ ಹಾಗೂ ದಂಡ ಕಟ್ಟಲು ವಿಫಲವಾದಲ್ಲಿ 1 ವರ್ಷದ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.
ದಂಡದ ಹಣದಲ್ಲಿ 2 ಲಕ್ಷ ರೂ ಹಾಗೂ ಸರ್ಕಾರದಿಂದ 6 ಲಕ್ಷ ರೂ ಗಳನ್ನು ನೊಂದ ಬಾಲಕಿಗೆ ಪರಿಹಾರ ರೂಪದಲ್ಲಿ ನೀಡಲು ಆದೇಶವಾಗಿದೆ.
ಹೊಳೆಹೊನ್ನೂರಿನ ಪೊಲೀಸ್ ಠಾಣೆಯಲ್ಲಿ ಕಲಂ 376(ಎ)(ಬಿ), 323,506 ಐಪಿಸಿ ರೀತ್ಯಾ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆಗಿನ ತನಿಖಾಧಿಕಾರಿ ಪೊಲೀಸ್ ಇನ್ಸ್ ಪೆಕ್ಟರ್ ಆರ್.ಎಲ್.ಲಕ್ಷ್ಮೀಪತಿ ಪ್ರಕರಣದ ತನಿಖೆ ಮಾಡಿ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹೆಚ್.ಆರ್.ಶ್ರೀಧರ್ ವಾದ ಮಂಡಿಸಿದ್ದರು.