ಗಾಂಜಾ ಮಾರಾಟದ ಭೀಕರ ಕೊಲೆ;ಕೊಲೆಯಾಗಿದ್ದವನು ಟ್ವಿಸ್ಟ್ ಇರ್ಫಾನ್7 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್ಇರ್ಫಾನ್ ಹೆಂಡತಿಗೆ 30 ಸಾವಿರ ರೂ.ಗಳ ಪರಿಹಾರ
ಗಾಂಜಾ ಮಾರಾಟದ ಭೀಕರ ಕೊಲೆ;
ಕೊಲೆಯಾಗಿದ್ದವನು ಟ್ವಿಸ್ಟ್ ಇರ್ಫಾನ್
7 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್
ಇರ್ಫಾನ್ ಹೆಂಡತಿಗೆ 30 ಸಾವಿರ ರೂ.ಗಳ ಪರಿಹಾರ
ಗಾಂಜಾ ಮಾರಾಟದ ವಿಚಾರದಲ್ಲಿ ನಡೆದ ಶಿವಮೊಗ್ಗ ಅಣ್ಣಾನಗರದ 36 ವರ್ಷ ವಯಸ್ಸಿನ ಇರ್ಫಾನ್ @ ಟ್ವಿಸ್ಟ್ ಇರ್ಫಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ಶಿವಮೊಗ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 5ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
18-09-2021 ರಂದು ರಾತ್ರಿ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟಿಪ್ಪುನಗರ 7ನೇ ಮುಖ್ಯ ರಸ್ತೆಯ 4ನೇ ಕ್ರಾಸ್ ನ ಹತ್ತಿರ ಲತೀಫ್, ಫರ್ವೇಜ್, ಸೈಯದ್ ಜಿಲಾನ್, ಜಾಫರ್ ಸಾದಿಕ್ @ ಚುವಾ, ರಾಜಿಕ್, ಶಾಬು @ ಶಾಬಾಜ್, ಶಾಬಿರ್ ಮತ್ತು ತಸ್ಮೀಂ ರವರುಗಳು ಗಾಂಜಾ ಮಾರಾಟದ ವಿಚಾರವಾಗಿ ಇರ್ಫಾನ್ @ ಟ್ವಿಸ್ಟ್ ಇರ್ಫಾನ್ 36 ವರ್ಷ, ಅಣ್ಣಾ ನಗರ ಶಿವಮೊಗ್ಗ ಟೌನ್ ಈತನೊಂದಿಗೆ ಜಗಳ ತೆಗೆದು ಇರ್ಫಾನ್ @ ಟ್ವಿಸ್ಟ್ ಇರ್ಫಾನ್* ನನ್ನು ಚಾಕುವಿನಿಂದ ಚುಚ್ಚಿ ಕೊಲೆ* ಮಾಡಿರುತ್ತಾರೆಂದು ಮೃತನ ಸಹೋದರ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0296/2021 ಕಲಂ 143, 144, 147, 148, 302 ಸಹಿತ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ದೀಪಕ್ ಎಂ, ಪಿಐ ತುಂಗಾನಗರ ಪೊಲೀಸ್ ಠಾಣೆ ರವರು ಪ್ರಕರಣದ ತನಿಖೆ ಪೂರೈಸಿ ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ಪಿ. ಓ. ಪುಷ್ಪಾ,ಸರ್ಕಾರಿ ಅಭಿಯೋಜಕರು, ಪ್ರಕರಣದ ವಾದ ಮಂಡಿಸಿದ್ದು, ಘನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಪ್ರಕರಣದ ಆರೋಪಿಗಳಾದ *1) ಲತೀಫ್, 20 ವರ್ಷ, RML ನಗರ ಶಿವಮೊಗ್ಗ ಟೌನ್, 2) ಫರ್ವೇಜ್ @ ಪರ್ರು, 23 ವರ್ಷ, ಟಿಪ್ಪುನಗರ ಶಿವಮೊಗ್ಗ ಟೌನ್, 3) ಸೈಯದ್ ಜಿಲಾನ್ @ ಜೀಲಾ, 19 ವರ್ಷ, ಟಿಪ್ಪುನಗರ ಶಿವಮೊಗ್ಗ ಟೌನ್, 4) ಜಾಫರ್ ಸಾದಿಕ್, 20 ವರ್ಷ, ಟಿಪ್ಪುನಗರ ಶಿವಮೊಗ್ಗ ಟೌನ್, 5) ಸೈಯದ್ ರಾಜೀಕ್ @ ರಾಜಿಕ್ 28 ವರ್ಷ, ಟಿಪ್ಪುನಗರ ಶಿವಮೊಗ್ಗ ಟೌನ್, 6) ಮೊಹಮ್ಮದ್ ಶಾಬಾಜ್ @ ಶಾಬು 19 ವರ್ಷ, ಟಿಪ್ಪುನಗರ ಶಿವಮೊಗ್ಗ ಟೌನ್, 7) ಅಬ್ದುಲ್ ಶಾಬೀರ್ @ ಶಾಬಿರ್ 24 ವರ್ಷ, ಟಿಪ್ಪುನಗರ ಶಿವಮೊಗ್ಗ ಟೌನ್, 8) ತಸ್ಲೀಂ @ ಮೊಹಮ್ಮದ್ ಯೂಸೂಫ್, 26 ವರ್ಷ, ಟಿಪ್ಪುನಗರ ಶಿವಮೊಗ್ಗ ಟೌನ್* ಇವರುಗಳ ವಿರುದ್ಧ ಆರೋಪ ದೃಡಪಟ್ಟಿದ್ದು, *5ನೇ ಆರೋಪಿ ಸೈಯದ್ ರಾಜೀಕ್ @ ರಾಜಿಕ್ ಈತನು ಮೃತಪಟ್ಟಿರುತ್ತಾನೆ.* ಉಳಿದ 7 ಜನ ಆರೋಪಿತರಿಗೆ ನ್ಯಾಯಾಧಿಶರಾದ ಶ್ರೀಮತಿ ಪಲ್ಲವಿ ಬಿ.ಆರ್ ರವರು* ದಿನಾಂಕ:- 09-08-2024 ರಂದು ಜೀವಾವಧಿ ಶಿಕ್ಷೆ ಮತ್ತು ತಲಾ ರೂ 5,000/- ದಂಡ ವಿಧಿಸಿದ್ದು,* ಮೃತ ಇರ್ಫಾನ್ @ ಟ್ವಿಸ್ಟ್ ಇರ್ಫಾನ್ ನ ಹೆಂಡತಿಗೆ ದಂಡದ ಮೊತ್ತದಲ್ಲಿ ರೂ 30,000/- ಗಳನ್ನು ನೀಡಲು ಆದೇಶಿಸಿದ್ದಾರೆ.