ಜೈಲರ್ ಕೊಂದಿದ್ದ ಹೆಂಡತಿ ಮತ್ತು ನಾಲ್ವರಿಗೆ 5 ವರ್ಷ ಕಠಿಣ ಸಜೆಏನಿದು ಪ್ರಕರಣ?ಜೈಲರ್ ಹೆಣ ಎಲ್ಲಿ ಎಸೆದಿತ್ತು ಹಂತಕ ಪಡೆ?
ಜೈಲರ್ ಕೊಂದಿದ್ದ ಹೆಂಡತಿ ಮತ್ತು ನಾಲ್ವರಿಗೆ 5 ವರ್ಷ ಕಠಿಣ ಸಜೆ
ಏನಿದು ಪ್ರಕರಣ?
ಜೈಲರ್ ಹೆಣ ಎಲ್ಲಿ ಎಸೆದಿತ್ತು ಹಂತಕ ಪಡೆ?
ತನ್ನ ಗಂಡನನ್ನೇ ದೊಣ್ಣೆಯಿಂದ ಬಡಿದು ಕೊಲೆ ಮಾಡಿದ್ದಲ್ಲದೇ ಶವವನ್ನು ನಾಲ್ವರ ಸಹಾಯದಿಂದ ವಾಹನವೊಂದರಲ್ಲಿ ಸವಳಂಗ ರಸ್ತೆ ಕಡೆ ಎಸೆದು ಪರಾರಿಯಾಗಿದ್ದ ಐದು ಜನ ಆರೋಪಿಗಳಿಗೆ 5 ವರ್ಷ ಕಠಿಣ ಸಜೆ ಹಾಗೂ ತಲಾ 20 ಸಾವಿರ ರೂ.ಗಳ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ವಿವರ;
*ಸಂತೋಷ @ ಜೈಲರ್, 34 ವರ್ಷ, ಹನುಮಂತನಗರ, ಶಿವಮೊಗ್ಗ* ಮತ್ತು ಆತನ ಹೆಂಡತಿ ನಾಗವೇಣಿಗೆ ಆಗಾಗ್ಗೆ ಕೌಟುಂಬಿಕ ಕಲಹ ನಡೆಯುತ್ತಿದ್ದು, ದಿನಾಂಕ : 12-02-2018 ರಂದು ಇಬ್ಬರೂ ಜಗಳ ಮಾಡಿಕೊಳ್ಳುತ್ತಿದ್ದ ಸಮಯದಲ್ಲಿ *ನಾಗವೇಣಿ ಮತ್ತು ಜಹೀರಾಬೀ* ಇಬ್ಬರೂ *ಯಾವುದೋ ದೊಣ್ಣೆಯಿಂದ ಸಂತೋಷನಿಗೆ ಹೊಡೆದು ಕೊಲೆ* ಮಾಡಿದ್ದು, ನಂತರ *ಚಂದ್ರು, ರಾಕಿ, ಇಮ್ರಾನ್ ಮತ್ತು ಜಬೀ* ರವರುಗಳು ಜಹೀರಾಬೀ ಮನೆಯಲ್ಲಿರುವ *ಓಮಿನಿ ವಾಹನದಲ್ಲಿ ಸಂತೋಷನ ಮೃತ ದೇಹವನ್ನು* ಸಾಗಿಸಿ ಸವಳಂಗ ರಸ್ತೆಯ ಕಡೆಗೆ ಎಸೆದಿರುತ್ತಾರೆಂದು ಮೃತನ ಸಹೋದರ ನೀಡಿದ ದೂರಿನ ಮೇರೆಗೆ *ಜಯನಗರ* ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0090/2018 *ಕಲಂ 302, 201 ಸಹಿತ 149 ಐಪಿಸಿ ರೀತ್ಯಾ ಕೊಲೆ ಪ್ರಕರಣ* ದಾಖಲಿಸಲಾಗಿದೆ.
ಪ್ರಕಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಜಿ. ದೇವರಾಜ್, ಸಿ.ಪಿ.ಐ, ಕೋಟೆ* ವೃತ್ತ ರವರು ಪ್ರಕರಣದ ತನಿಖೆ ಪೂರೈಸಿ *ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು* ಸಲ್ಲಿಸಿರುತ್ತಾರೆ.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ * ಸುರೇಶ್ ಕುಮಾರ್ ಎ. ಎಂ.* ಸರ್ಕಾರಿ ಅಭಿಯೋಜಕರವರು, ಪ್ರಕರಣದ ವಾದ ಮಂಡಿಸಿದ್ದು, *ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ* ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, * ನ್ಯಾಯಾಧಿಶರಾದ ಮಂಜುನಾಥ್ ನಾಯಕ್* ರವರು ದಿನಾಂಕಃ 23-08-2024 ರಂದು *ಆರೋಪಿತರಾದ 1) ನಾಗವೇಣಿ,* 27 ವರ್ಷ, ಹನುಮಂತನಗರ, ಶಿವಮೊಗ್ಗ ಮತ್ತು *2) ಜಹೀರಾಬಿ,* 41 ವರ್ಷ, ಹನುಮಂತನಗರ, ಶಿವಮೊಗ್ಗ ರವರಿಗೆ *ಜೀವಾವಧಿ ಶಿಕ್ಷೆ ಮತ್ತು ತಲಾ ರೂ 25,000/- ದಂಡ,* ದಂಡ ಕಟ್ಟಲು ವಿಫಲರಾದಲ್ಲಿ *ಹೆಚ್ಚುವರಿ 04 ತಿಂಗಳು ಸಾಧಾ ಕಾರಾವಾಸ* ಶಿಕ್ಷೆ ಮತ್ತು *ಆರೋಪಿ 3) ಜಬೀವುಲ್ಲಾ,* 23 ವರ್ಷ, ಹನುಮಂತನಗರ, ಶಿವಮೊಗ್ಗ, *4) ಮೊಹಮ್ಮದ್ ಇಮ್ರಾನ್,* 25 ವರ್ಷ, ಹನುಮಂತನಗರ, ಶಿವಮೊಗ್ಗ ಮತ್ತು *5) ಚಂದ್ರಕುಮಾರ್,* 24 ವರ್ಷ, ಹನುಮಂತನಗರ, ಶಿವಮೊಗ್ಗ, ಇವರುಗಳಿಗೆ *05 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ತಲಾ ರೂ 20,000/- ದಂಡ,* ದಂಡ ಕಟ್ಟಲು ವಿಫಲರಾದಲ್ಲಿ *ಹೆಚ್ಚುವರಿ 03 ತಿಂಗಳು ಸಾಧಾ ಕಾರಾವಾಸ ಶಿಕ್ಷೆ* ವಿಧಿಸಿ ಆದೇಶಿಸಿರುತ್ತಾರೆ.