ಆರೋಗ್ಯ ಸೌಧದಲ್ಲಿ ದಿನೇಶ್ ಗುಂಡೂರಾವ್- ಮಧು ಬಂಗಾರಪ್ಪ ಚರ್ಚೆಶಿವಮೊಗ್ಗ ಜಿಲ್ಲೆಯ ಯಾವ ಯಾವ ಆರೋಗ್ಯದ ವಿಷಯಗಳ ಚರ್ಚೆ ನಡೆಯಿತು? ಇಲ್ಲಿದೆ ಮಾಹಿತಿ…
ಆರೋಗ್ಯ ಸೌಧದಲ್ಲಿ ದಿನೇಶ್ ಗುಂಡೂರಾವ್- ಮಧು ಬಂಗಾರಪ್ಪ ಚರ್ಚೆ
ಶಿವಮೊಗ್ಗ ಜಿಲ್ಲೆಯ ಯಾವ ಯಾವ ಆರೋಗ್ಯದ ವಿಷಯಗಳ ಚರ್ಚೆ ನಡೆಯಿತು? ಇಲ್ಲಿದೆ ಮಾಹಿತಿ…
ಇಂದು ಬೆಂಗಳೂರಿನ “ಆರೋಗ್ಯ ಸೌಧ”ದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ “ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಆರೋಗ್ಯ ಇಲಾಖೆಗೆ ಸಂಬಂಧಿಸಿದ” ಪ್ರಮುಖ ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಿ, ಆರೋಗ್ಯ ಇಲಾಖೆಯಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಮಾತನಾಡಿದರು.
ಸಭೆಯಲ್ಲಿ ಚರ್ಚಿಸಲಾದ ವಿಷಯಗಳು
♦️ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯನ್ನು ಸುಧಾರಣೆ ಮಾಡುವ ಕುರಿತು.
♦️ ಆಸ್ಪತ್ರೆಗಳಲ್ಲಿ ಎಂ.ಆರ್.ಐ ಮತ್ತು ಸಿಟಿ ಸ್ಕ್ಯಾನಿಂಗ್ ವ್ಯವಸ್ಥೆ ಕಲ್ಪಿಸುವ ಕುರಿತು.
♦️ಸೊರಬ ಸಾರ್ವಜನಿಕ ಆಸ್ಪತ್ರೆಗೆ ಮೂಲಸೌಕರ್ಯ ಮತ್ತು ಸಿಬ್ಬಂದಿಗಳ ವ್ಯವಸ್ಥೆ ಕಲ್ಪಿಸುವ ಕುರಿತು.
♦️ಆನವಟ್ಟಿ ಆಸ್ಪತ್ರೆಯನ್ನು ಮೇಲ್ದರ್ಜೆಗೆರಿಸುವ ಕುರಿತು.
♦️ಸಾಗರ ಆಸ್ಪತ್ರೆಗೆ ಕಟ್ಟಡ ವ್ಯವಸ್ಥೆ ಕಲ್ಪಿಸುವ ಕುರಿತು.
♦️ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಹೊಸ ಆಸ್ಪತ್ರೆಗಳ ಮಂಜೂರಾತಿ ನೀಡುವ ಕುರಿತು.
♦️ಶಿವಮೊಗ್ಗದಲ್ಲಿ ಆಯುಷ್ ವಿಶ್ವವಿದ್ಯಾಲಯ ಮತ್ತು ಆಯುಷ್ ಆಸ್ಪತ್ರೆ ಮಂಜೂರಾತಿ ನೀಡುವ ಕುರಿತು.
♦️ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿ, ಶಿಕಾರಿಪುರ, ಭದ್ರಾವತಿ, ಸೊರಬ ಹಾಗೂ ಸಾಗರ ತಾಲೂಕುಗಳಲ್ಲಿರುವ ಆರೋಗ್ಯ ಇಲಾಖೆಗಳನ್ನು ಅಭಿವೃದ್ಧಿಗೆ ಸಂಬಂಧಿಸಿದಂತೆ ಇತರೆ ಆರೋಗ್ಯ ಇಲಾಖೆಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲಾಯಿತು.
ಈ ವೇಳೆ ಆರೋಗ್ಯ ಇಲಾಖೆಗೆ ಸಂಬಂಧಪಟ್ಟ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.