70 ವರ್ಷದ ವೃದ್ಧನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ!ಪೋಕ್ಸೋ ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ ಕೋರ್ಟ್
70 ವರ್ಷದ ವೃದ್ಧನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ!
ಪೋಕ್ಸೋ ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ ಕೋರ್ಟ್
ಪೋಕ್ಸೋ ಪ್ರಕರಣವೊಂದರಲ್ಲಿ ಸುಮಾರು 70 ವರ್ಷ ವಯಸ್ಸಿನ ವೃದ್ಧನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-1 ವು 20 ವರ್ಷದ ಕಠಿಣ ಜೈಲು ಶಿಕ್ಷೆ, 2.10 ಲಕ್ಷ ರೂ., ದಂಡ, ದಂಡ ಕಟ್ಟಲು ವಿಫಲವಾದಲ್ಲಿ ಒಂದು ವರ್ಷದ ಸಾದಾ ಸಜೆಯನ್ನು ನೀಡಿ ಆದೇಶಿಸಿದೆ.
*2023ನೇ ಸಾಲಿನಲ್ಲಿ* ಭದ್ರಾವತಿ ತಾಲ್ಲೂಕಿನ *70 ವರ್ಷದ ವ್ಯಕ್ತಿಯು 09 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ* ವೆಸಗಿರುತ್ತಾನೆಂದು ನೊಂದ ಬಾಲಕಿಯ ತಾಯಿಯು ನೀಡಿದ ದೂರಿನ ಮೇರೆಗೆ ಶಿವಮೊಗ್ಗ *ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಕಲಂ 376 (ಎ) (ಬಿ), 506 ಐಪಿಸಿ ಮತ್ತು 4, 6 ಪೋಕ್ಸೋ ಕಾಯ್ದೆ* ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ.
ಪ್ರಕರಣದ ತನಿಖಾಧಿಕಾರಿಗಳಾದ ಲಕ್ಷ್ಮಿಪತಿ ಆರ್. ಎಲ್, ಪಿಐ ಹೊಳೆಹೊನ್ನೂರು* ಪೊಲೀಸ್ ಠಾಣೆ ರವರು ಪ್ರಕರಣದ ತನಿಖೆ ಪೂರೈಸಿ, *ಘನ ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ದೋಷಾರೋಪಣಾ* ಪತ್ರವನ್ನು ಸಲ್ಲಿಸಿರುತ್ತಾರೆ.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಧರ್ ಹೆಚ್. ಆರ್, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು, ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ *FTSC-1 ಶಿವಮೊಗ್ಗದಲ್ಲಿ* ಪ್ರಕರಣದ ವಿಚಾರಣೆ ನಡೆದು, ಆರೋಪಿಯ ವಿರುದ್ಧ ಆರೋಪ ದೃಡ ಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧೀಶರಾದ ಮೋಹನ್ ಜೆ. ಎಸ್ ರವರು ದಿನಾಂಕಃ 13-09-2024 ರಂದು ಪ್ರಕರಣದ *ಆರೋಪಿ ಭದ್ರಾವತಿ ತಾಲ್ಲೂಕಿನ 70 ವರ್ಷದ ವ್ಯಕ್ತಿಗೆ 20 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ರೂ 2,10,000/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ 01 ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿದ್ದು,* *ಪರಿಹಾರ ರೂಪವಾಗಿ ದಂಡದ ಮೊತ್ತದಲ್ಲಿ 2 ಲಕ್ಷ ಮತ್ತು ಸರ್ಕಾರದಿಂದ 2 ಲಕ್ಷರೂಗಳನ್ನು ನೊಂದ ಬಾಲಕಿಗೆ* ನೀಡಲು ಆದೇಶಿಸಿದ್ದಾರೆ.