ಮಾಜಿ ಶಾಸಕರೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷರೂ ಆದ ಕೆ.ಬಿ.ಪ್ರಸನ್ನ ಕುಮಾರ್ ಪತ್ರಿಕಾಗೋಷ್ಠಿ ಮುಖ್ಯಾಂಶಗಳು…ಪೌರಕಾರ್ಮಿಕ ಗೃಹಭಾಗ್ಯ, ಸಮುದಾಯ ಭವನದಲ್ಲಿ ಗೋಲ್ ಮಾಲ್ಗುತ್ತಿಗೆದಾರ ಕಣ್ಮರೆ! ಪೌರಾಡಳಿತ ಮೌನವೇಕೆ?

ಮಾಜಿ ಶಾಸಕರೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷರೂ ಆದ ಕೆ.ಬಿ.ಪ್ರಸನ್ನ ಕುಮಾರ್ ಪತ್ರಿಕಾಗೋಷ್ಠಿ ಮುಖ್ಯಾಂಶಗಳು…

ಪೌರಕಾರ್ಮಿಕ ಗೃಹಭಾಗ್ಯ, ಸಮುದಾಯ ಭವನದಲ್ಲಿ ಗೋಲ್ ಮಾಲ್

ಗುತ್ತಿಗೆದಾರ ಕಣ್ಮರೆ! ಪೌರಾಡಳಿತ ಮೌನವೇಕೆ?

ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆ ತಂದಿದ್ದೆ. ಚುನಾವಣೆ ನಂತರ ಬೇರೆ ಸರ್ಕಾರ ಬಂತು. ಕಾರ್ಯ ರೂಪಕ್ಕೆ ಬರಲ. 169 ಮನೆ ನೀಡೋ ಯೋಜನೆ ಇದು. ಜಿ+2 ನಲ್ಲಿ ನಾಲ್ಕು ಪ್ಯಾಕೇಜ್ ಮಾಡಿ, 17 ಕೋಟಿ ಪ್ರಾಜೆಕ್ಟ್ ಕೂಡ ಆಯ್ತು. ಟೆಂಡರ್ ಪಡೆದ ವ್ಯಕ್ತಿ 26/3/2021ಕ್ಕೆ ಟೆಂಡರ್ ಪಡೆದ ವ್ಯಕ್ತಿ ಸಂಪೂರ್ಣ ಕೆಲಸ ಮುಗಿಸಿ ಕೊಡುವ ಮಾತಾಗಿತ್ತು.
11% ಗಿಂತ ಹೆಚ್ಚು ಹಣ ಕೂಡ 17 ಕೋಟಿ ರೂ., ಗಳ ಮೇಲೆ ನೀಡಲಾಗಿದೆ.
ಈಗ ಮೂರು ವರ್ಷಗಳೇ ಕಳೆದಿವೆ. ಜೆಎನ್ ಎನ್ ಸಿ ಹಿಂಭಾಗ ಆರೂವರೆ ಎಕರೆ ಜಾಗ ಹಾಗೇ ಬಿದ್ದಿದೆ. ಪೌರ ಕಾರ್ಮಿಕರ ಸಭಾ ಭವನ ಕೂಡ ಪೆಂಡಿಂಗ್ ಇದೆ. ಶೇ.50 ರಷ್ಟು ಕೆಲಸ ಆಗದಿದ್ದರೂ ಶೇ. 50 ರಷ್ಟು ಹಣ ಗುತ್ತಿಗೆದಾರನಿಗೆ ಸಂದಾಯವಾಗಿದೆ. ಸಮುದಾಯ ಭವನದ ಕೆಲಸ ಮುಕ್ಕಾಲು ಭಾಗವಷ್ಟೇ ಆಗಿದೆ.
ಪೌರ ಅಧಿಕಾರಿಗಳು ನೋಟಿಸ್ ಕೊಟ್ಟಿರೋ ವಿಚಾರ ಮಾತ್ರ ಹೇಳುತ್ತಿದ್ದಾರೆ.ಜನಪ್ರತಿನಿಧಿಗಳು, ಅಧಿಕಾರಿಗಳೇಕೆ ಮಾತಾಡುತ್ತಿಲ್ಲ? ಪೌರ ಕಾರ್ಮಿಕರು ಅನ್ನೋ ನಿರ್ಲಕ್ಷ್ಯವೇ?

ಜೆಡಿಎಸ್ ಪಕ್ಷ ಈ ಪೌರಕಾರ್ಮಿಕರಿಗೆ ಬೆನ್ನೆಲುಬಾಗಿ ನಿಲ್ಲಲಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಆಗಿರುವ ಸಂಪೂರ್ಣ ಕಳಪೆ ಕಾಮಗಾರಿ ಬಗ್ಗೆ ತನಿಖೆ ಮಾಡಬೇಕು. ಬಹಳ ಜನ ಪೌರ ಕಾರ್ಮಿಕರು ಮನೆ ಆಸೆ ಇಟ್ಟುಕೊಂಡೇ ಸತ್ತಿದ್ದಾರೆ. ಕೆಲವರು ನಿವೃತ್ತರಾಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು.

ಪೌರ ಕಾರ್ಮಿಕರು ಮುಷ್ಕರ ಹೂಡಿಬಿಟ್ಟರೆ ಶಿವಮೊಗ್ಗ ಕಸಮಯ ಆಗಿಬಿಡುತ್ತೆ. ಹಿಂದೆಲ್ಲ ಇಂಥ ಸಂದರ್ಭಗಳು ಘಟಿಸಿವೆ. ಆದರೆ, ಇಂಥ ಪೌರ ಕಾರ್ಮಿಕರಿಗೆ ಮೋಸ ಮಾಡುತ್ತಿದ್ದೇವಾ?

ಪೌರ ಕಾರ್ಮಿಕರಿಗೆ ಮನೆ ಕನಸು ನನಸಾಗಿಸುವ, ಅವರ ಸಭಾ ಭವನ ನಿರ್ಮಿಸಿಕೊಡುವವರೆಗೆ ಜೆಡಿಎಸ್ ಹೋರಾಟ ಮಾಡಲಿದೆ.

ಉಪಸ್ಥಿತಿ;
ದೀಪಕ್ ಸಿಂಗ್, ಸಿದ್ದಪ್ಪ, ಹೆಚ್.ಎಂ.ಸಂಗಯ್ಯ, ಸಂಜಯ್ ಕಶ್ಯಪ್ ಸೇರಿದಂತೆ ಜೆಡಿಎಸ್ ನಾಯಕರು…