*ಕವಿಸಾಲು*
1.
ಓದಿ ಬಿಸಾಡುವಷ್ಟು
ಸುಲಭವಲ್ಲ;
ನಾನು
ಅಕ್ಷರಗಳ ಪುಸ್ತಕವಲ್ಲ…
ಭಾವಗಳ
ಜೀವಕೋಶ!
2.
ಅನಿವಾರ್ಯವಾಗಿ
ಅತ್ತುಬಿಡುವ
ಮತ್ತು
ಕಣ್ಣೀರು ಕಾಣದಂತೆ
ನೋಡಿಕೊಳ್ಳುವ
ಸಂದರ್ಭವೊಂದು
ಬಂದೇ ಬರುತ್ತೆ
ನಿನಗೂ
ಮತ್ತು
ನನಗೂ…
3.
ಬಣ್ಣಗಳ
ನೋಡಿ
ಆನಂದಿಸಬಾರದು…
ಜೊತೆಗಿರುವವರ
ನಿಜಬಣ್ಣ
ಅರ್ಥವಾಗುವವರೆಗೆ!
– *ಶಿ.ಜು.ಪಾಶ*
8050112067
(6/10/24)