ಹಿಂದೂ ನಾಯಕ ಶಾಸಕರಾದ ಚನ್ನಿ- ಪಾಲಿಕೆ ಆಯುಕ್ತೆ ಕವಿತಾರಿಗೆ ಬಿಸ್ಲರಿ ವಾಟರ್…**ಶಿವಮೊಗ್ಗದ ಜನರಿಗೆ ಕೊಳಕಾತಿ ಕೊಳಕು ನೀರು…**ಅಶುದ್ಧ ನೀರಿನ ದಸರಾ!*

*ಹಿಂದೂ ನಾಯಕ ಶಾಸಕರಾದ ಚನ್ನಿ- ಪಾಲಿಕೆ ಆಯುಕ್ತೆ ಕವಿತಾರಿಗೆ ಬಿಸ್ಲರಿ ವಾಟರ್…*

*ಶಿವಮೊಗ್ಗದ ಜನರಿಗೆ ಕೊಳಕಾತಿ ಕೊಳಕು ನೀರು…*

*ಅಶುದ್ಧ ನೀರಿನ ದಸರಾ!*

ಹಿಂದೂಗಳ ವಿಶೇಷ ಹಬ್ಬ ದಸರೆಗೆ ಹಿಂದೂ ನಾಯಕರೆಂದೇ ಕರೆಸಿಕೊಳ್ಳುವ ಶಾಸಕ ಚನ್ನಬಸಪ್ಪ @ ಚನ್ನಿ ಕೊಳಕು ಕುಡಿಯುವ ನೀರು ಸರಬರಾಜಾಗುತ್ತಿದ್ದರೂ ಮೌನವಾಗಿರುವುದೇಕೆ?

ಸಂತೋಷದಿಂದಲೇ ನವರಾತ್ರಿ ಹಬ್ಬ ಆಚರಿಸಲು ಸಿದ್ಧರಾದ ಶಿವಮೊಗ್ಗದ ಜನತೆಗೆ ಕೊಳಕು ನೀರನ್ನು ಸರಬರಾಜು ಮಾಡುತ್ತಿದೆ. ಈ ನೀರು ಎಷ್ಟು ಕೊಳಕಿದೆ ಎಂದರೆ, ಸ್ನಾನ ಕೂಡ ಮಾಡಲು ಸಾಧ್ಯವಿಲ್ಲದಷ್ಟು- ಇನ್ನು ಈ ನೀರು ಕುಡಿದುಬಿಟ್ಟರೆ ದೇವರೇಗತಿ; ಆ ನವದುರ್ಗೆಯರೇ ಕಾಪಾಡಬೇಕು!

ಶಿವಮೊಗ್ಗ ನಗರ ನೀರು ಸರಬರಾಜು ವ್ಯವಸ್ಥೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ನಿರ್ವಹಿಸಲಾಗುತ್ತಿದ್ದು, ಅ.8ರಂದು ಬಂದ ಮಳೆಯಿಂದಾಗಿ ಗಾಜನೂರು ಡ್ಯಾಂ ಮತ್ತು ತುಂಗಾ ನದಿಯ ನೀರಿನಲ್ಲಿ ಕೆಂಪು ಬಣ್ಣವು (ಟರ್ಬಿಡಿಟಿ) ಹೆಚ್ಚಾಗಿದ್ದು, ನೀರನ್ನು ಸಾರ್ವಜನಿಕರು ಕುದಿಸಿ, ಆರಿಸಿ ಕುಡಿಯುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿ ಅದೇ ನೀರಲ್ಲಿ ಕೈತೊಳೆದುಕೊಂಡು ಕಾಣೆಯಾಗಿದ್ದಾರೆ.

ಈ ಕೊಳಕು ನೀರು ಇಡೀ ಶಿವಮೊಗ್ಗಕ್ಕೆ ವಿತರಣೆಯಾಗುತ್ತಿದೆ. ಶಾಸಕ ಚನ್ನಿ, ಆಯುಕ್ತೆ ಕವಿತಾ ಯೋಗಪ್ಪನವರ್, ನೀರು ಸರಬರಾಜು ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಮನೆಗೂ ಇದೇ ಕೊಳಕು ನೀರು ಸರಬರಾಜಾಗುತ್ತಿದೆಯಾ? ಹಾಗೆ ಆಗುತ್ತಿದ್ದರೆ, ಹಿಂದೂಗಳ ವಿಶೇಷ ಹಬ್ಬ ದಸರಾ ಕೊಳಕು ನೀರಲ್ಲೇ ನಡೆಯುತ್ತಿರುವುದೇಕೆ? ಶಾಸಕ ಚನ್ನಿಯವರು ದಸರಾ ಕಾರ್ಯಕ್ರಮಗಳಲ್ಲಿ ಮುಳುಗಿ ಹೋಗಿದ್ದಾರೆ. ಅವರು ಕುಂತಲ್ಲಿ, ನಿಂತಲ್ಲಿ ಬಿಸ್ಲರಿ ವಾಟರ್ ಸಿಗುತ್ತಿದೆ. ಅವರ ಜೊತೆ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ತಮ್ಮ ವ್ಯಾಪ್ತಿಗೇ ಈ ಸಮಸ್ಯೆ ಬರುವುದಿಲ್ಲ ಎಂದು ಅದೇ ಬಿಸ್ಲರಿ ವಾಟರ್ ಕುಡಿಯುತ್ತಾ ದಸರಾದಲ್ಲಿ ಮಗ್ನರಾಗಿದ್ದಾರೆ.

ಇನ್ನು ಈ ಸಮಸ್ಯೆ ಬಗೆಹರಿಸುವವರು ಯಾರು? ಕೊಳಕು ನೀರು ಕುದಿಸಿ, ಆರಿಸಿ ಕುಡಿಯಲು ಹೋದರೂ ನೀರಿನ ಕೊಳಕು ಬಣ್ಣ ನೋಡಿ ಜನ ಕಂಗಾಲಾಗುತ್ತಿದ್ದಾರೆ.ಕೊಳಕಾತಿ ಕೊಳಕು ನೀರಲ್ಲೇ ದಸರಾ ಮುಗಿಯುತ್ತಿದೆ. ಇನ್ನು, ರೋಗಗಳಿಗೆ ಬಲಿಯಾಗುವುದಷ್ಟೇ ಬಾಕಿ.

ಮಾಜಿ ಸಂಸದರೂ ಆಗಿರುವ ಕಾಂಗ್ರೆಸ್ಸಿನ ರಾಜ್ಯ ವಕ್ತಾರರಾದ ಆಯನೂರು ಮಂಜುನಾಥ್ ರವರು ಶಿವಮೊಗ್ಗ ಜನತೆಗೆ ವಿಶೇಷ ರೀತಿಯಲ್ಲೇ ಶುಭಾಶಯಗಳನ್ನು ಕೋರುತ್ತಾ ನೀರಿನ ಕುರಿತು ಗಮನ ಸೆಳೆದಿದ್ದಾರೆ. ಶಾಸಕರಿಗೂ ಆಯುಕ್ತರಿಗೂ ಮಾತಾಡಿದ್ದಾರೆ.

ಆದರೆ…ನೀರು ಹಾಗೇ ಕೊಳಕಾತಿ ಕೊಳಕಾಗಿಯೇ ಸರಬರಾಜಾಗುತ್ತಿರುವುದು ನಿಂತಿಲ್ಲ…

– *ಶಿ.ಜು.ಪಾಶ*
ಪ್ರಧಾನ ಕಾರ್ಯದರ್ಶಿ
ಜಿಲ್ಲಾ ಕಾಂಗ್ರೆಸ್ ಸಮಿತಿ
ಶಿವಮೊಗ್ಗ
ಮೊ- 8050112067