ಕವಿಸಾಲು

*ಕವಿಸಾಲು*

1.
ನಾಲ್ಕು ಜನ
ನಲವತ್ತು ಮಾತು
ನಾಲ್ಕು ಸಾವಿರ
ಗಾಳಿ ಸುದ್ದಿ;

ಗಮನ
ಕೊಡುವಿಯಾದರೇ
ನಿನ್ನೊಳಗಿನ
ಮಾತಿಗೆ ಕೊಡು…

2.
ದುಷ್ಕೃತ್ಯ
ದುರ್ಗಂಧ
ಬೀರುವುದಿಲ್ಲ;

ಬೀರಿದ್ದರೆ
ಜಗತ್ತಿಡೀ
ನಾರುತ್ತಿತ್ತು!

3.
ನಾನು
ನಿನ್ನನ್ನು
ಹುಡುಕುತ್ತಿದ್ದೆ;
ನೀನೋ
ಇನ್ನೊಬ್ಬರಲ್ಲಿ…

ನೀ
ನನಗೆ ಸಿಗಲಿಲ್ಲ
ನಾ
ನಿನಗೂ ಸಿಗಲಿಲ್ಲ…

4.
ಮತ್ತೊಬ್ಬರಿಗಾಗಿಯೇ
ಬದುಕಿಬಿಟ್ಟೆ;

ನಾನ್ಯಾರೆಂದು
ಅವರಿಗೆ ಕೇಳಿದರೆ…

ಗೊತ್ತೇ ಇಲ್ಲ
ಎಂದರು!

5.
ಹಾಳು
ಮಾಡಿ ಎಲ್ಲರನ್ನು
ಎಲ್ಲಿ ಬಚ್ಚಿಟ್ಟುಕೊಳ್ಳುವೆ;
ಭೂಮಿ ಆಕಾಶ ಪಾತಾಳಗಳೆಲ್ಲ
ಒಳ್ಳೆಯವರಿಂದ
ತುಂಬಿ ಹೋಗಿವೆ…

ನಿನ್ನ ಕರ್ಮಕ್ಕೆ ನರಕವೂ
ದಕ್ಕುವುದಿಲ್ಲ
ನರಳಲು…

6.
ಅದೊಂದು ದಿನ
ಎಲ್ಲದೂ
ಮುಗಿದೇ ಹೋಗುತ್ತದೆ;

ಪ್ರೀತಿಸು

ನಾವಿಬ್ಬರಷ್ಟೇ
ಉಳಿಯಲು
ಪ್ರಯತ್ನಿಸೋಣ!

7.
ನನ್ನೊಳಗೊಬ್ಬ
ನಿನ್ನ ಥರ;

ಯಾರೆಂದು
ಗೊತ್ತಾಗುತ್ತಿಲ್ಲ!

ನೀನಲ್ಲ‌
ತಾನೇ?!

– *ಶಿ.ಜು.ಪಾಶ*
8050112067