ಪೊಲೀಸ್ ಹುತಾತ್ಮ ದಿನಾಚರಣೆ; ಏನೆಲ್ಲಾ ನಡೆಯಿತು?
ಪೊಲೀಸ್ ಹುತಾತ್ಮ ದಿನಾಚರಣೆ;
ಏನೆಲ್ಲಾ ನಡೆಯಿತು?
ಇಂದು ಬೆಳಿಗ್ಗೆ *ಪೊಲೀಸ್ ಹುತಾತ್ಮರ ದಿನಾಚರಣೆಯ ಅಂಗವಾಗಿ* ಶಿವಮೊಗ್ಗದ ಜಿಲ್ಲಾ ಸಶಸ್ತ್ರ ಪೊಲೀಸ್ ಕವಾಯತು ಮೈದಾನದಲ್ಲಿ *ಕರ್ತವ್ಯದಲ್ಲಿ ಹುತಾತ್ಮರಾದ ಪೋಲಿಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನಮನವನ್ನು* ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದಿನಾಂಕ:21-10-1959 ರಂದು ಕೇಂದ್ರ ಮೀಸಲು ಪೊಲೀಸ್ ಪಡೆಯ ಡಿ.ಎಸ್.ಪಿ. ರವರಾದ ಕರಣ್ ಸಿಂಗ್ ನೇತೃತ್ವದ 20 ಜನರ ತಂಡ ಭಾರತ ಮತ್ತು ಚೀನಾ ದೇಶದ ಗಡಿ ಪ್ರದೇಶದ *ಲಡಾಕ್ ನ ಹಾಟ್ ಸ್ಟಿಂಗ್* ಎಂಬ ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವಾಗ *ಚೀನಾ ದೇಶದ ಸೈನಿಕರು ಹಠಾತ್ತನೆ ಆಕ್ರಮಣ ಮಾಡಿ ಶ್ರೀ.ಕರಣ್ ಸಿಂಗ್ ಮತ್ತು ಇತರೆ 09 ಸಿಬ್ಬಂದಿಗಳನ್ನು ಹತ್ಯೆ ಮಾಡಿದ್ದು,* ಹುತಾತ್ಮರ ದೇಹಗಳನ್ನು 28-11-1959 ರಂದು ಭಾರತಕ್ಕೆ ಹಸ್ತಾಂತರಿಸಲಾಗಿದ್ದು, *ಸಕಲ ಪೊಲೀಸ್ ಗೌರವಗಳೊಂದಿಗೆ ಅಂತಿಮ ಸಂಸ್ಕಾರ* ಮಾಡಲಾಗಿತ್ತು.
ಈ ದಾರುಣ ಘಟನೆಯಲ್ಲಿ ಪ್ರಾಣ ತ್ಯಾಗ ಮಾಡಿದವರ ನೆನಪಿನಲ್ಲಿ *ರಾಷ್ಟ್ರಾದ್ಯಾಂತ ಪ್ರತಿ ವರ್ಷ ಅಕ್ಟೋಬರ್ 21 ನೇ ತಾರೀಖಿನಂದು ಪೊಲೀಸ್ ಹುತಾತ್ಮ ದಿನಾಚರಣೆಯನ್ನಾಗಿ* ಆಚರಿಸಿಕೊಂಡು ಬರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಪ್ರತಿ ವರ್ಷದ 21ನೇ ಅಕ್ಟೊಬರ್ ನಂದು *ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಾಗ, ರಾಷ್ಟ್ರ ರಕ್ಷಣೆ ಮಾಡುವಾಗ ಮತ್ತು ಇತರೆ ಕರ್ತವ್ಯ ನಿರತ ಅವಧಿಯಲ್ಲಿ ಪ್ರಾಣ ತ್ಯಾಗ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿರವರನ್ನು ಗೌರವ ಪೂರ್ವಕವಾಗಿ ಸ್ಮರಿಸಲಾಗತ್ತಿದೆ.*
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ ನಾಯಕ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗರವರು ವಹಿಸಿದ್ದು, ಮುಖ್ಯ ಆಹ್ವಾನಿತರಾಗಿ *ಹೇಮಂತ್ ಎನ್,ಐಎಎಸ್* ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಶಿವಮೊಗ್ಗ ರವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಿ ಕೆ ಮಿಥುನ್ ಕುಮಾರ್ ಐಪಿಎಸ್* ರವರು ಮಾತನಾಡಿ, ಹುತಾತ್ಮ ಯೋಧರ *ಸೇವೆಯನ್ನು ಸ್ಮರಿಸಿ, ಸಮಾಜದ ರಕ್ಷಣಾ ಕರ್ತವ್ಯ ಪರಿಪಾಲನೆಯಲ್ಲಿ ದಿನಾಂಕ: 01-09-2023 ರಿಂದ 31-08-2024 ರ ಅವಧಿಯಲ್ಲಿ ಭಾರತ ದೇಶದಲ್ಲಿ ಒಟ್ಟು 213 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ರವರು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ, ಮೃತಪಟ್ಟಿರುತ್ತಾರೆ, ಇದರಲ್ಲಿ ಕರ್ನಾಟಕ ರಾಜ್ಯದ 6 ಪೊಲೀಸ್ ಅಧಿಕಾರಿ / ಸಿಬ್ಬಂದಿರವರು ಮೃತಪಟ್ಟಿದ್ದು* ಇವರುಗಳ ಹೆಸರನ್ನು ವಾಚಿಸಿ, ಹುತಾತ್ಮರ ಸ್ತಂಭಕ್ಕೆ ಹೂ ಗುಚ್ಛವನ್ನು ಅರ್ಪಿಸುವ ಮೂಲಕ ನಮನಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ * ಅನಿಲ್ ಕುಮಾರ್ ಭೂಮರೆಡ್ಡಿ* ಹೆಚ್ಚುವರಿ ಪೋಲಿಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, * ಯುವಕುಮಾರ್ ಎಸ್* ಕಮಾಂಡೆಂಟ್ 8ನೇ ಪಡೆ ಕೆ.ಎಸ್.ಆರ್.ಪಿ ಮಾಚೇನಹಳ್ಳಿ, ಶಿವಮೊಗ್ಗ, ಮಂಜುನಾಥ್ ಅಣಜಿ* ಡೆಪ್ಯುಟಿ ಕಮಾಂಡೆಂಟ್, 2ನೇ ಪಡೆ ಕೆ.ಎಸ್.ಐ.ಎಸ್.ಎಫ್, ಶಿವಮೊಗ್ಗ, ಬಾಬು ಆಂಜನಪ್ಪ* ಪೋಲಿಸ್ ಉಪಾಧೀಕ್ಷಕರು ಶಿವಮೊಗ್ಗ-ಎ ಉಪ ವಿಭಾಗ, ಸುರೇಶ್ ಎಂ* ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ-ಬಿ ಉಪ ವಿಭಾಗ, ಕೃಷ್ಣಮೂರ್ತಿ* ಪೋಲಿಸ್ ಉಪಾಧೀಕ್ಷಕರು ಡಿಎಆರ್ ಶಿವಮೊಗ್ಗ, ಗಜಾನನ ವಾಮನಸುತರ* ಪೋಲಿಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪ ವಿಭಾಗ, ಕೇಶವ್,* ಪೋಲಿಸ್ ಉಪಾಧೀಕ್ಷಕರು ಶಿಕಾರಿಪುರ ಉಪವಿಭಾಗ, ನಾಗರಾಜ್* ಪೋಲಿಸ್ ಉಪಾಧೀಕ್ಷಕರು ಭದ್ರಾವತಿ ಉಪವಿಭಾಗ, ಸಂಜೀವ್ ಕುಮಾರ್* ಸಹಾಯಕ ನಿರ್ದೇಶಕರು, ರಾಜ್ಯ ಗುಪ್ತ ವಾರ್ತೆ, ಶಿವಮೊಗ್ಗ ಮತ್ತು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.