ಕವಿಸಾಲು

*ಕವಿಸಾಲು*

1.
ನಗು
ನನ್ನದಾದರೇನು?
ನಿನ್ನದಾದರೇನು?

ನಗು
ನಗುವೇ…

ನಾನು- ನೀನೆಂಬ
ಭೇದ-ಭಾವ ತೋರಿಸು?

ಸಾಧ್ಯವೇ ಆಗದ
ಕೆಲಸಗಳಲ್ಲಿ
ಇದೂ ಒಂದು!

2.
ಜಗತ್ತು
ಬಹಳ ಅದ್ಭುತವಾಗಿದೆ;
ಆದರೆ,
ಜನ
ಮಾಯೆಗೊಳಗಾಗಿದ್ದಾರೆ;
ನೀನು
ಆ ಮಾಯೆಯ
ಛಾಯೆ!

3.
ನಿನಗಾಗಿ
ಸಮಯವಿಲ್ಲದಿದ್ದರೆ
ಅವರ ಬಳಿ

ತೊಂದರೆ ಕೊಡುವೆ ಏಕೆ?

ಅವರ ಬಳಿ
ನಿನಗೆ ತೂಗುವ
ತಕ್ಕಡಿ ಇಲ್ಲ;

ಅವರೇ
ತೂಗುವವರೆಗೆ
ನಿನ್ನ ಮೌಲ್ಯ
ಅರ್ಥವಾದೀತು ಹೇಗೆ?

4.
ನೀನು
ಜೀವಂತವಿರುವವರೆಗಷ್ಟೇ
ನಿನ್ನ ಹೆಸರು;

ಆ ನಂತರ
ಹೆಚ್ಚಿಗೇನೂ ಇಲ್ಲ-

ನೀನೊಂದು ಶವವೇ…

5.
ಮುಖ, ಮೈ, ಆತ್ಮ
ಎಲ್ಲದೂ
ಬಾಡಿಗೆಗೆ
ಪಡೆದುಕೊಂಡದ್ದೇ…

ಮಾಲೀಕ ಬಂದು ಕೇಳಿದೊಡೆ
ಕೊಡಲೇಬೇಕು
ಸದ್ದಿಲ್ಲದೇ…

– *ಶಿ.ಜು.ಪಾಶ*
8050112067