ಕವಿಸಾಲು

*ಕವಿಸಾಲು*

1.
ಹೃದಯಕ್ಕೆ
ತೀರಾ ಹತ್ತಿರ
ನಿನಗೆ ಯಾರಿದ್ದಾರೆಂದು ಕೇಳಿದರು;

ನಾನು
ನಿನ್ನ ತೋರಿಸಿದೆ…

2.

ಕೇಳಿದ್ದೆ…

ಪ್ರತಿ ಪ್ರಶ್ನೆಗೂ
ಉತ್ತರ
ನಿನ್ನ ಬಳಿ ಇದೆ ಎಂದು;

ಈಗ
ಅರ್ಥವಾಗುತ್ತಿದೆ…

ನೀನೊಂದು
ಉತ್ತರ ಪತ್ರಿಕೆ!

3.
ನಿನ್ನ
ದರ್ಶನವಾಗಿಬಿಟ್ಟರೆ
ಈ ಕಣ್ಣುಗಳಿಗೆ

ಅವತ್ತು
ಏನೇ ಇದ್ದರೂ

ಹಬ್ಬವೇ…

4.
ನಿನ್ನ
ಮರೆತು ಬಿಡಬಹುದು
ಸುಲಭವಾಗಿ;

ಆದರೆ,
ನೀನು

ನೀನು
ಮಾತ್ರ ಆಗಿ
ಉಳಿದಿಲ್ಲ ಈಗ!

– *ಶಿ.ಜು.ಪಾಶ*
8050112067