ಕವಿಸಾಲು

Gm ಶುಭೋದಯ💐

*ಕವಿಸಾಲು*
1.
ನೋವೇ
ನಮಗೆ
ನಲಿವು

ಬೇವೇ
ನಮಗೆ
ಸಿಹಿಯು…

2.
ಹತ್ತಿರದ
ಸುಖವನ್ನು

ದೂರ

ಎಂಬುದು
ಕಲಿಸುತ್ತಲ್ಲ
ಹೃದಯವೇ…

3.
ಬಾಡಿಗೆಯ
ಮೇಲೆ ಸಿಕ್ಕಿದೆ
ಈ ಬದುಕು…

ನೋಂದಣಿ
ಮಾಡಿಸಿಕೊಳ್ಳುವ
ಪ್ರಯತ್ನವಂತೂ
ವ್ಯರ್ಥವೇ…

4.
ನನ್ನ
ಒಳ್ಳೆಯ ಕಾಲ
ನಾನು ಏನೆಂಬುದನ್ನು
ಜಗತ್ತಿಗೆ ತಿಳಿಸಿತು…

ನನ್ನ
ಕೆಟ್ಟ ಕಾಲ
ಜಗತ್ತೇನೆಂಬುದನ್ನು
ನನಗೆ ತಿಳಿಸಿತು!

5
ಪ್ರೇಮವೆಂಬುದು
ಅರಳಿಮರದ
ಬೀಜ;
ಎಲ್ಲಿ
ಹುಟ್ಟಲು ಸಾಧ್ಯವಿಲ್ಲವೋ
ಅಲ್ಲಿ
ಅರಳಿ
ನರಳಿ
ನಳನಳಿಸುತ್ತೆ!

– *ಶಿ.ಜು.ಪಾಶ*
8050112067
(8/12/24)