ಹಳೇಮುಗಳಗೆರೆ ಗ್ರಾಮದಲ್ಲಿ ಕೃಷಿ ಮಾಹಿತಿ ಕೇಂದ್ರ ,ಬೆಳೆ ಸಂಗ್ರಹಾಲಯ ಉದ್ಘಾಟನೆ ” -ಹರಿದು ಬಂದ ಜನಸಾಗರ ಗ್ರಾಮ ಮಟ್ಟದ ಕೃಷಿ ಮೇಳದಂತೆ ಕಂಡುಬಂದ ಕಾರ್ಯಕ್ರಮಮಿನಿ ಕೃಷಿ ಮೇಳ ಎಂದ ಗಣ್ಯರು…

ಹಳೇಮುಗಳಗೆರೆ ಗ್ರಾಮದಲ್ಲಿ ಕೃಷಿ ಮಾಹಿತಿ ಕೇಂದ್ರ ,ಬೆಳೆ ಸಂಗ್ರಹಾಲಯ ಉದ್ಘಾಟನೆ “

-ಹರಿದು ಬಂದ ಜನಸಾಗರ

ಗ್ರಾಮ ಮಟ್ಟದ ಕೃಷಿ ಮೇಳದಂತೆ ಕಂಡುಬಂದ ಕಾರ್ಯಕ್ರಮ

ಮಿನಿ ಕೃಷಿ ಮೇಳ ಎಂದ ಗಣ್ಯರು…

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಳೇ ಮುಗಳಗೆರೆ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಪ್ರಮುಖ ಘಟ್ಟ ವಾದ ಮಾಹಿತಿ ಕೇಂದ್ರ , ಬೆಳೆ ಸಂಗ್ರಹಾಲಯ ಮತ್ತು ಸಸ್ಯ ಆರೋಗ್ಯ ಚಿಕಿತ್ಸಾಲಯದ ಉದ್ಘಾಟನೆ ನಡೆಯಿತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ತಿಪ್ಪಾಯಿಕೊಪ್ಪ ಮಹಸ್ವಾಮಿಗಳಾದ ಶ್ರೀ ಶ್ರೀ ಶ್ರೀ ಮ ನಿ ಪ್ರ ಮಹಾಂತ ಮಹಾ ಸ್ವಾಮಿಗಳು ವಿಶ್ವವಿದ್ಯಾಲಯ ಕುಲಸಚಿವರು ಮತ್ತು ವಿಶೇಷ ಅಧಿಕಾರಿಗಳಾದ ಕೆ ಸಿ ಶಶಿಧರ್ ಸರ್ ಆಗಮಿಸಿದ್ದರು ಕಾರ್ಯಕ್ರಮ ಉದ್ಘಾಟಕರಾಗಿ ಕೃಷಿ ವಿಸ್ತರಣಾಧಿಕಾರಿಗಳಾದ ಕೆ ಟಿ ಗುರುಮೂರ್ತಿ ಸರ್ ಉಪಸ್ಥಿತರಿದ್ದರು. ಆಂಜನೇಯ ದೇವಾಲಯ ಮುಂಭಾಗದಿಂದ ಮೆರವಣಿಗೆ ಪ್ರಾರಂಭವಾಯಿತು ಮೆರವಣಿಗೆಯಲ್ಲಿ ಊರಿನ ಅನೇಕ ಮಹಿಳೆಯರು ಕುಂಭ ಹೊತ್ತು ನಡೆದರು, ಡೊಳ್ಳು ಮುಂದೆ ನಂತರ ಹೋರಿ ಹಬ್ಬದಲ್ಲಿ ಹೆಸರು ಮಾಡಿದ ಹೋರಿಗಳಾದ ಅರಶಿನಗೆರೆ ಗೂಳಿ, ಹಂಟರ್ ಕಲ್ಲೇಶ,ಹೈ ಸ್ಪೀಡ್ ಭಗವತಿ, ಕಂಸ, ವೀರಭದ್ರ, ಶಿವನಂದಿ, ಹುಲಿಬೆಂಕಿ, ಹೈ ಸ್ಪೀಡ್ ದೇವರಮಗ, ಜೈ ಹನುಮ, ಚಿನ್ನ, ಶ್ರೀ ನಂದಿ ಇನ್ನು ಪ್ರಮುಖ ಹೋರಿಗಳು ಮೆರವಣಿಗೆಯಲ್ಲಿ ಅದ್ದೂರಿ ಮೆರಗು ತಂದವು. ಎತ್ತಿನಗಾಡಿಯಲ್ಲಿ ಗಣ್ಯರು ಆಗಮಿಸಿ ಬೆಳೆ ಸಂಗ್ರಹಾಲಯ, ಮಾಹಿತಿ ಕೇಂದ್ರ ಮತ್ತು ಸಸ್ಯ ಆರೋಗ್ಯ ಚಿಕಿತ್ಸಾಲಯದ ಉದ್ಘಾಟನೆ ಮಾಡಿದರು. ಕೃಷಿಯ ಯಂತ್ರೋಪಕರಣಗಳ ಪ್ರದರ್ಶನ, ವಿವಿಧ ತಳಿಗಳ ರಾಸುಗಳ ಪ್ರದರ್ಶನ ಮತ್ತು ಬೆಳೆ ಸಂಗ್ರಹಾಲಯದಲ್ಲಿ ವಿವಿಧ ತಳಿಗಳ ಬೆಳೆಗಳನ್ನು ಪ್ರದರ್ಶಿಸಲಾಯಿತು, ಸಮಗ್ರ ಕೃಷಿ ಪದ್ಧತಿ, ಸಾವಯುವ ಕೃಷಿ, ಅಡಕೆಯಲ್ಲಿ ಅಂತರ ಬೆಳೆ, ಪುರಾತನತಳಿ ಚಿನ್ನಿ ಪೊನ್ನಿ, ವಿದೇಶಿ ತಳಿಗಳ ತರಕಾರಿ ಮತ್ತು ಹೂವಿನ ಬೆಳೆ ,ಕಾರಂಜಿ, ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ, ಅಜೋಲ್ಲ ಕೃಷಿ, ಮೇವು ಬೆಳೆ ಪ್ರಮುಖ ಆಕರ್ಷಣೆಗಳಾಗಿದ್ದವು. ಮಾಹಿತಿ ಕೇಂದ್ರದಲ್ಲಿ ಊರಿನ ಕೃಷಿ ಮತ್ತು ರೈತರಿಗೆ ಬೇಕಾಗುವ ಸಂಪೂರ್ಣ ಮಾಹಿತಿ ತಾಣ ಮಾಡಲಾಗಿತ್ತು, ಸಸ್ಯ ಆರೋಗ್ಯ ಚಿಕಿತ್ಸಾಲಯದಲ್ಲಿ ಈ ಭಾಗದ ಪ್ರಮುಖ ರೋಗ ಮತ್ತು ಕೀಟಗಳ ಮಾದರಿಗಳನ್ನು ಇಡಲಾಗಿತ್ತು .ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿತ್ತು. ಹೋರಿ ಮಾಲೀಕರಿಗೆ ಗಣ್ಯರು ಸನ್ಮಾನಿಸಿದರು. ಕುಲಸಚಿವರು ವಿದ್ಯಾರ್ಥಿಗಳಿಗೆ ನನ್ನ 32 ವರ್ಷದ ಅನುಭವದಲ್ಲಿ ಇಂತಹ ಗ್ರಾಮೀಣ ಕೃಷಿ ಕಾರ್ಯಾನುಭ ಕಾರ್ಯಕ್ರಮ ನೋಡಿಲ್ಲ ತುಂಬಾ ಚೆನ್ನಾಗಿ ಮಾಡಿದ್ದೀರಿ ಎಂದರು. ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.ಕಾರ್ಯಕ್ರಮದ ಸಂಯೋಜಕರಾದ ಡಾ ಅರುಣ್ ಕುಮಾರ್ ಸರ್, ಮಣ್ಣು ವಿಜ್ಞಾನಿಗಳಾದ ಡಾ ಗಣಪತಿ ಸರ್ ರೋಗಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ನರಸಿಂಹ ಮೂರ್ತಿ ಸರ್ ಮತ್ತು ಅರಣ್ಯ ಸಹಾಯಕ ಪ್ರಾಧ್ಯಾಪಕ ಸೂರಜ್ ಸರ್ ಇನ್ನು ಪ್ರಮುಖರು ಇದ್ದರು ಕಾರ್ಯಕ್ರಮದಲ್ಲಿ ಸುತ್ತ ಮುತ್ತಲಿನ ರೈತರು ಅನೇಕರು ಪಾಲ್ಗೊಂಡಿದ್ದರು ಸುಮಾರು 700-800 ಜನ ಕಾರ್ಯಕ್ರಮದ ಭಾಗವಾಗಿ ಅದ್ದೂರಿಯಾಗಿ ಕಾರ್ಯಕ್ರಮ ನೆರವೇರಿಸಿದರು ಕಾರ್ಯನುಭವ