ಭದ್ರಾವತಿಯಲ್ಲಿ ಬಾಯ್ಲರ್ ಸ್ಫೋಟ; ಗಂಭೀರ ಸ್ಥಿತಿಯಲ್ಲಿ 7 ಜನ…ಅವನೊಬ್ಬ ಕಣ್ಮರೆ!ಅವನ ಹುಡುಕಾಟದಲ್ಲಿ ಪೊಲೀಸರು!!

ಭದ್ರಾವತಿಯಲ್ಲಿ ಬಾಯ್ಲರ್ ಸ್ಫೋಟ; ಗಂಭೀರ ಸ್ಥಿತಿಯಲ್ಲಿ 7 ಜನ…

ಅವನೊಬ್ಬ ಕಣ್ಮರೆ!ಅವನ ಹುಡುಕಾಟದಲ್ಲಿ ಪೊಲೀಸರು!!

ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ 7 ಜನರು ಗಾಯಗೊಂಡಿದ್ದು, ಭೀಕರತೆಯಿಂದ ಪಾರಾಗಿದ್ದಾರೆ.

ಜೀವಕ್ಕೆ ಹಾನಿ ಇಲ್ಲದಿದ್ದರೂ ಗಾಯಗಳಿಂದ ನರಳುತ್ತಿರುವ ಏಳು ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಲಾಗಿದೆ.

ಆದರೆ, ಈ ಘಟನೆಯಲ್ಲಿ ರಘು ಎಂಬಾತ ಕಣ್ಮರೆಯಾಗಿದ್ದು, ಪೊಲೀಸರು ಅವನನ್ನು ಆತಂಕದಿಂದಲೇ ಹುಡುಕುವಂತಾಗಿದೆ. ಅಗ್ನಿಶಾಮಕ ದಳ, ಆಂಬ್ಯುಲೆನ್ಸ್, ಮೆಸ್ಕಾಂ, ನಗರಪಾಲಿಕೆ, ಕಂದಾಯ ಇಲಾಖೆ ಮತ್ತಿತರೆ ಅಧಿಕಾರಿಗಳು ಸ್ಥಳದಲ್ಲಿದ್ದು, ಘಟನೆಯ ಗಂಭೀರತೆಯ ತನಿಖೆ ನಡೆಸುತ್ತಿದ್ದಾರೆಂದು ಎಸ್ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.