ATTENTION!!! ATTENTION!!!… ATTENTIONಆಲ್ಕೊಳದ ಸರ್ ಎಂ.ವಿ.ಕಾಲೇಜಿನ ಕಾನೂನುಬಾಹಿರ ಕೃತ್ಯಕ್ಕೆ ಡಿಡಿಪಿಯು ಚಂದ್ರಪ್ಪ ಫುಲ್ ಸ್ಟಾಪ್ ಹಾಕುವರೇ?ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಈಗಲೇ ಗಾಳ ಬೀಸುತ್ತಿರುವ ಸರ್ ಎಂ.ವಿ.ಕಾಲೇಜು; ವಿದ್ಯಾರ್ಥಿಗಳೇ ಹುಷಾರ್!!!!

ATTENTION!!! ATTENTION!!!… ATTENTION

ಆಲ್ಕೊಳದ ಸರ್ ಎಂ.ವಿ.ಕಾಲೇಜಿನ ಕಾನೂನುಬಾಹಿರ ಕೃತ್ಯಕ್ಕೆ ಡಿಡಿಪಿಯು ಚಂದ್ರಪ್ಪ ಫುಲ್ ಸ್ಟಾಪ್ ಹಾಕುವರೇ?

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಈಗಲೇ ಗಾಳ ಬೀಸುತ್ತಿರುವ ಸರ್ ಎಂ.ವಿ.ಕಾಲೇಜು; ವಿದ್ಯಾರ್ಥಿಗಳೇ ಹುಷಾರ್!!!!

ಶಿವಮೊಗ್ಗದ ಸಾಗರ ರಸ್ತೆ ಶರಾವತಿ ಡೆಂಟಲ್ ಕಾಲೇಜಿನ ಬಳಿ ಇರುವ ಸರ್ ಎಂ.ವಿ.ಪಿಯು ಕಾಲೇಜು ಆಡಳಿತ ಮಂಡಳಿ ಒಂದು ಕಡೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು, ಮತ್ತೊಂದು ಕಡೆ ಪದವಿ ಪೂರ್ವ ಇಲಾಖೆ ಅಧಿಕಾರಿಗಳನ್ನು, ಇನ್ನೊಂದು ಕಡೆ ಸರ್ಕಾರವನ್ನು ದಾರಿ ತಪ್ಪಿಸಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದೆಯೇ?

ಶಿವಮೊಗ್ಗದ ಸ್ಥಳೀಯ ಪತ್ರಿಕೆಯೊಂದರಲ್ಲಿ ದೊಡ್ಡ ಜಾಹಿರಾತೊಂದನ್ನು ನೀಡಿ Attention! 10th std.students… scan QR code for 1st PU admission enquiry- 2025-26( ಪ್ರಥಮ ಪಿಯು ಕಾಲೇಜಿಗೆ ಪ್ರವೇಶ ವಿಚಾರಣೆ) ಎಂದು ಪ್ರಕಟ ಪಡಿಸಿದೆ.
ಈ ಪ್ರವೇಶ ವಿಚಾರಣಾ ಕಾರ್ಯಕ್ರಮವನ್ನು ಡಿಸೆಂಬರ್ 29, 2024 ರಂದು ನಿಗದಿ ಪಡಿಸಿದೆ. ಈ ಅಡ್ಮಿಷನ್ ಎನ್ ಕ್ವೈರಿಗಳು ಸರ್ ಎಂ.ವಿ.ಗ್ರೂಪ್ ಆಫ್ ಇನ್ಸ್ ಟಿಟ್ಯೂಷನ್ಸ್ ನ ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ವಿಭಾಗದ ಕೇಂದ್ರಗಳಲ್ಲಿ ನಡೆಯಲಿದೆ ಎಂದು ತನಗೆ ತಾನೇ ಅಕ್ರಮವನ್ನು ಬಯಲುಗೊಳಿಸಿಕೊಂಡಿದೆ.

ರಾಜ್ಯ ಸರ್ಕಾರದ ಯಾವುದೇ ಆದೇಶವಿಲ್ಲದಿದ್ದರೂ ಅನಧಿಕೃತವಾಗಿ, ಕಾನೂನು ಬಾಹಿರವಾಗಿ ಎಸ್ ಎಸ್ ಎಲ್ ಸಿ ಮಕ್ಕಳನ್ನು ಅಡ್ಮಿಷನ್ ಹೆಸರಲ್ಲಿ ಬಲಿಪೀಠಕ್ಕೇರಿಸುತ್ತಿದ್ದರೂ ಶಿವಮೊಗ್ಗ ಜಿಲ್ಲಾ ಪಿಯು ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಚಂದ್ರಪ್ಪ ಎಲ್.ಗುಂಡಪಲ್ಲಿ ಈ ಕ್ಷಣಕ್ಕೂ ಮೌನವಹಿಸಿರುವುದು ಬಹಳಷ್ಟು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ.

ಇಂಥದಕ್ಕೆಲ್ಲ ಪರ್ಮೀಷನ್ ಕೊಡುವುದಕ್ಕೆ ಬರೋದಿಲ್ಲ. ಸರ್ಕಾರ ಈಗಲೇ ಪ್ರವೇಶ ಅವಕಾಶಗಳ ಆದೇಶ ಹೊರಡಿಸುವುದೂ ಇಲ್ಲ. ಸರ್ಕಾರದ ಆದೇಶವಿಲ್ಲದೇ ಪ್ರವೇಶಾತಿ ಕುರಿತ ಇಂಥ ಕೆಲಸಗಳು ಕಾನೂನುಬಾಹಿರ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವೆ ಎಂದು ಡಿಡಿಪಿಯು ಚಂದ್ರಪ್ಪ ಎಸ್.ಗುಂಡಪಲ್ಲಿ ಮಲೆನಾಡು ಎಕ್ಸ್ ಪ್ರೆಸ್ ಪತ್ರಿಕೆಗೆ ದೂರವಾಣಿ ಮಾಡಿದಾಗ ಭರವಸೆಯನ್ನೇನೋ ನೀಡಿದ್ದಾರೆ. ಅದರ ಧ್ವನಿ ಮುದ್ರಿಕೆ ಕೂಡ ದಾಖಲೆಯ ರೂಪದಲ್ಲಿ ಪತ್ರಿಕೆಯ ಬಳಿ ಇದೆ.

ಡಿ.29, 2024 ರಂದು ನಡೆಯುವ ವಿದ್ಯಾರ್ಥಿಗಳ ಪ್ರವೇಶ ಕುರಿತ ಈ ಕೆಲಸಕ್ಕೆ ಡಿಡಿಪಿಯು ಬ್ರೇಕ್ ಹಾಕದಿದ್ದರೆ, ಆ ಕೆಲಸದಲ್ಲಿ ಡಿಡಿಪಿಯು ಕೂಡ ಸಾಥ್ ನೀಡುತ್ತಿದ್ದಾರೆಂದೇ ಅರ್ಥೈಸಿಕೊಳ್ಳಬೇಕಾಗುತ್ತೆ. ಉಳಿದಂತೆ, ಭ್ರಷ್ಟರ ವಿರುದ್ಧ ಯಾವ ಯಾವ ಹೋರಾಟ ಮಾಡಬಹುದೋ ಅದಕ್ಕೆಲ್ಲ ಇಲ್ಲಿಂದಲೇ ಮುನ್ನುಡಿ ಬರೆದಂತಾಗುತ್ತದೆ. ಡಿಡಿಪಿಯು ಚಂದ್ರಪ್ಪ ಇಂಥ ಲಾಬಿಗಳಿಗೆ ಬಲಿಯಾಗದಿರಲಿ. ನಾಳೆ ನಡೆಯುವ ಸರ್ ಎಂ.ವಿ. ಹಮ್ಮಿಕೊಂಡ ಪ್ರವೇಶ ಕಾರ್ಯಕ್ಕೆ ಕೆಂಪು ಧ್ವಜ ತೋರಿಸಲಿ…