ಶ್ರೀಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ಸುದ್ದಿಗೋಷ್ಠಿಸರ್ವಧರ್ಮ ಭಾವೈಕ್ಯ ಸಾರುವ ಬೆಕ್ಕಿನ ಕಲ್ಮಠಗುರುಬಸವ ಶ್ರೀ ಪ್ರಶಸ್ತಿ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣರಿಗೆ, ಅಕ್ಕ ಮಹಾದೇವಿ ಪ್ರಶಸ್ತಿ ವೈದ್ಯ ಸಾಹಿತಿ ಡಾ.ಎಚ್.ಎಸ್.ಅನುಪಮರಿಗೆ ಅಲ್ಲಮ ಪ್ರಭು ಪ್ರಶಸ್ತಿ ನಿವೃತ್ತ ಪ್ರಾಧ್ಯಾಪಕ ಡಾ.ವೀರಣ್ಣ ರಾಜೂರರಿಗೆ…ಜ.16,17 ಮತ್ತು 18 ರಂದು ಶಿವಮೊಗ್ಗದ ಶ್ರೀ ಬೆಕ್ಕಿನ ಕಲ್ಮಠದ ಶ್ರೀಗುರುಬಸವ ಭವನದಲ್ಲಿ ಅನುಭಾವ ಸಮ್ಮೇಳನ, ಶರಣ ಸಾಹಿತ್ಯ ಸಮ್ಮೇಳನ, ಭಾವೈಕ್ಯ ಸಮ್ಮೇಳನ, ಪ್ರಶಸ್ತಿ ಪ್ರದಾನ ಸಮ್ಮೇಳನ
ಶ್ರೀಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ಸುದ್ದಿಗೋಷ್ಠಿ
ಸರ್ವಧರ್ಮ ಭಾವೈಕ್ಯ ಸಾರುವ ಬೆಕ್ಕಿನ ಕಲ್ಮಠ
ಗುರುಬಸವ ಶ್ರೀ ಪ್ರಶಸ್ತಿ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣರಿಗೆ, ಅಕ್ಕ ಮಹಾದೇವಿ ಪ್ರಶಸ್ತಿ ವೈದ್ಯ ಸಾಹಿತಿ ಡಾ.ಎಚ್.ಎಸ್.ಅನುಪಮರಿಗೆ ಅಲ್ಲಮ ಪ್ರಭು ಪ್ರಶಸ್ತಿ ನಿವೃತ್ತ ಪ್ರಾಧ್ಯಾಪಕ ಡಾ.ವೀರಣ್ಣ ರಾಜೂರರಿಗೆ…
ಜ.16,17 ಮತ್ತು 18 ರಂದು ಶಿವಮೊಗ್ಗದ ಶ್ರೀ ಬೆಕ್ಕಿನ ಕಲ್ಮಠದ ಶ್ರೀಗುರುಬಸವ ಭವನದಲ್ಲಿ ಅನುಭಾವ ಸಮ್ಮೇಳನ, ಶರಣ ಸಾಹಿತ್ಯ ಸಮ್ಮೇಳನ, ಭಾವೈಕ್ಯ ಸಮ್ಮೇಳನ, ಪ್ರಶಸ್ತಿ ಪ್ರದಾನ ಸಮ್ಮೇಳನ
ಶಿವಮೊಗ್ಗದ ಶ್ರೀ ಬೆಕ್ಕಿನ ಕಲ್ಮಠದ ಗುರುಬಸವ ಅಧ್ಯಯನ ಪೀಠ, ಶ್ರೀ ಮುರುಘರಾಜೇಂದ್ರ ಮಹಾ ಸಂಸ್ಥಾನ ಮಠ ಟ್ರಸ್ಟ್ ಜ.16,17 ಮತ್ತು 18 ರಂದು ಮೂರು ದಿನಗಳ ಕಾಲ ಲಿಂಗೈಕ್ಯ ಜಗದ್ಗುರು ಶ್ರೀಗುರುಬಸವ ಮಹಾಸ್ವಾಮಿಗಳ 113 ನೇ ಪುಣ್ಯ ಸ್ಮರಣೋತ್ಸವ, ಅನುಭಾವ ಸಮ್ಮೇಳನ, ಶರಣ ಸಾಹಿತ್ಯ ಸಮ್ಮೇಳನ ಹಾಗೂ ಭಾವೈಕ್ಯ ಸಮ್ಮೇಳನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ಬೆಕ್ಕಿನ ಕಲ್ಮಠದ ಶ್ರೀ ಗುರುಬಸವ ಭವನದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ, ಗುರುಬಸವ ಶ್ರೀ ಪ್ರಶಸ್ತಿಯನ್ನು ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣರಿಗೆ, ಅಕ್ಕ ಮಹಾದೇವಿ ಪ್ರಶಸ್ತಿಯನ್ನು ವೈದ್ಯ ಸಾಹಿತಿ ಡಾ.ಎಚ್.ಎಸ್.ಅನುಪಮರಿಗೆ ಹಾಗೂ ಅಲ್ಲಮ ಪ್ರಭು ಪ್ರಶಸ್ತಿಯನ್ನು ನಿವೃತ್ತ ಪ್ರಾಧ್ಯಾಪಕ ಡಾ.ವೀರಣ್ಣ ರಾಜೂರರಿಗೆ ಪ್ರದಾನ ಮಾಡಲಾಗುತ್ತಿದೆ.
ಮೂರೂ ದಿನಗಳ ಈ ಸಮ್ಮೇಳನದಲ್ಲಿ ಜ.16 ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಸಾಂಸ್ಕೃತಿಕ ವಚನ ಗಾಯನ ಸ್ಪರ್ಧೆಗಳು ನಡೆಯಲಿವೆ. ಬೆಳಿಗ್ಗೆ 10 ಕ್ಕೆ ಚಿಕ್ಕಮಗಳೂರಿನ ಶ್ರೀ ಬಸವತತ್ವ ಪೀಠದ ಶ್ರೀ ಡಾ.ಬಸವ ಮರುಳಸಿದ್ಧ ಮಹಾಸ್ವಾಮಿಗಳು ಉದ್ಘಾಟಿಸುವರು.
ಅದೇ ದಿನ ಸಂಜೆ 5 ಕ್ಕೆ 544ನೇ ಅನುಭಾವ ಸಮ್ಮೇಳನ ಹಾಗೂ ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸುವರು.
ಜ.17 ರಂದು ಬೆಳಿಗ್ಗೆ 10ಕ್ಕೆ ಸಾಂಸ್ಕೃತಿಕ ರಂಗೋಲಿ ಹಾಗೂ ಜಾನಪದ ಗೀತೆಗಳ ಸ್ಪರ್ಧೆಗಳು ನಡೆಯಲಿದ್ದು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಉದ್ಘಾಟಿಸುವರು.
ಸಂಜೆ 5ಕ್ಕೆ ಶರಣ ಸಾಹಿತ್ಯ ಸಮ್ಮೇಳನ ಹಾಗೂ ಅಲ್ಲಮ ಪ್ರಭು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಸಚಿವ ಎಂ.ಬಿ.ಪಾಟೀಲ್ ಉದ್ಘಾಟಿಸುವರು. ದಿನದರ್ಶಿಕೆಯನ್ನು ಸಚಿವ ಮಧು ಬಂಗಾರಪ್ಪ ಬಿಡುಗಡೆ ಮಾಡುವರು.
ಜ.18 ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಮಟ್ಟದ ಭಜನೆ ಹಾಗೂ ಆನ್ ಲೈನ್ ಪ್ರಶ್ನೋತ್ತರ ಸ್ಪರ್ಧೆಗಳು ನಡೆಯಲಿವೆ. ಎಸ್ ಪಿ ಮಿಥುನ್ ಕುಮಾರ್ ಉದ್ಘಾಟಿಸಲಿದ್ದಾರೆ. ಇದಕ್ಕಿಂತ ಮುಂಚೆ ಬೆಳಿಗ್ಗೆ 8ಕ್ಕೆ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ಜಗದ್ಗುರುಗಳವರ ಶೂನ್ಯ ಪೀಠಾರೋಹಣ ನಡೆಯಲಿದೆ.
ಸಂಜೆ 4 ರಿಂದ 5-10 ವರ್ಷದ ಮಕ್ಕಳಿಗೆ ಸರ್ವಧರ್ಮ ಮಹಾಪುರುಷರ ವೇಷಭೂಷಣ ಸ್ಪರ್ಧೆ ನಡೆಯಲಿದೆ.
ಸಂಜೆ 5 ಕ್ಕೆ ಭಾವೈಕ್ಯ ಸಮ್ಮೇಳನ ಹಾಗೂ ಗುರುಬಸವ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಲಿದ್ದಾರೆ.