21,84,660 ರೂ.,ಗಳ ಮೌಲ್ಯದ ಗಾಂಜಾ ನಾಶ ಮಾಡಿದ ಪೊಲೀಸ್ ಇಲಾಖೆ…
21,84,660 ರೂ.,ಗಳ ಮೌಲ್ಯದ ಗಾಂಜಾ ನಾಶ ಮಾಡಿದ ಪೊಲೀಸ್ ಇಲಾಖೆ…
ಶಿವಮೊಗ್ಗ ಜಿಲ್ಲೆಯಾದ್ಯಂತ ಮಾದಕ ವಸ್ತು ಗಾಂಜಾ ಮಾರಾಟ, ಸಾಗಟ, ಸಂಗ್ರಹಣೆ ಮತ್ತು ಬೆಳೆಯುವವರ ವಿರುದ್ಧ ನಿರ್ದಾಕ್ಷಿಣ್ಯ ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ದಾಖಲಾದ ಒಟ್ಟು 43 NDPS ಪ್ರಕರಣಗಳಲ್ಲಿ ಅಮಾನತ್ತು ಪಡಿಸಿಕೊಳ್ಳಲಾದ ಅಂದಾಜು ಮೌಲ್ಯ 21,84,660/-* ರೂಗಳ ಒಟ್ಟು 56 ಕೆಜಿ 740 ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನು, ಗುರುವಾರದಂದು ಬೆಳಗ್ಗೆ ಮೇ|| ಶುಶ್ರುತ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್ ಮೆಂಟ್ ಸೊಸೈಟಿ (ರಿ) ಕೈಗಾರಿಕಾ ಪ್ರದೇಶ ಮಾಚೇನಹಳ್ಳಿಯಲ್ಲಿ ಶಿವಮೊಗ್ಗ ಜಿಲ್ಲಾ ಮಾದಕ ವಸ್ತು ವಿಲೇವಾರಿ ಸಮಿತಿಯ ಅಧ್ಯಕ್ಷರಾದ ಎಸ್ ಪಿ ಮಿಥುನ್ ಕುಮಾರ್ ಜಿ.ಕೆ ರವರ ಸಮ್ಮುಖದಲ್ಲಿ ನಾಶ ಪಡಿಸಲಾಯಿತು.
ಈ ಸಂದರ್ಭದಲ್ಲಿ ಎ. ಜಿ. ಕಾರ್ಯಪ್ಪ (ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2) ಶೇಖರ್, (ಸಂಸ್ಥಾಪಕರು, ಮೇ|| ಶುಶ್ರುತ ಬಯೋ ಮೆಡಿಕಲ್ ಪ್ರೈವೇಟ್ ಲಿಮಿಟೆಡ್ ಸೊಸೈಟಿ (ರಿ),)*ಡಾ|| ಗಿರೀಶ್ ಸಿ. ಎಸ್ (ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು, ಮೇ|| ಶುಶ್ರುತ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಸೊಸೈಟಿ (ರಿ)) ರಮೇಶ್ ವಿ, (ಪರಿಸರ ಅಧಿಕಾರಿಗಳು, ಶಿವಮೊಗ್ಗ), ಬಾಬು ಆಂಜನಪ್ಪ,( ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಎ ಉಪವಿಭಾಗ) ಮತ್ತು ನಾಗರಾಜ್,(ಪೊಲೀಸ್ ಉಪಾಧೀಕ್ಷಕರು, ಭದ್ರಾವತಿ, ಉಪವಿಭಾಗ) ರವರು ಉಪಸ್ಥಿತರಿದ್ದರು.
ಮಾದಕ ವಸ್ತು ಗಾಂಜಾ ಮಾರಾಟ, ಸಾಗಾಟ, ಸಂಗ್ರಹಣೆ ಮತ್ತು ಬೆಳೆಯುವವರ ವಿರುದ್ಧ ಪೊಲೀಸ್ ಇಲಾಖೆಯಿಂದ ನಿರ್ದಾಕ್ಷಿಣ್ಯ ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಗಾಂಜಾ ಮಾರಾಟ, ಸಾಗಟ, ಸಂಗ್ರಹಣೆ ಮತ್ತು ಬೆಳೆಯುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಿಳಿದುಬಂದಲ್ಲಿ, ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡಿ ಸಹಕರಿಸಿ. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.