ಶಿವಮೊಗ್ಗ ಮಹಾನಗರ ಪಾಲಿಕೆಯ ಹಿಂದಿನ ಆಯುಕ್ತ ಮಾಯಣ್ಣ ಗೌಡರಿಗೆ ಬೆಸ್ಟ್ ಎಲೆಕ್ಟೋರಲ್ ಪ್ರಾಕ್ಟೀಸಸ್ ಸ್ಟೇಟ್ ಅವಾರ್ಡ್*

*ಶಿವಮೊಗ್ಗ ಮಹಾನಗರ ಪಾಲಿಕೆಯ ಹಿಂದಿನ ಆಯುಕ್ತ ಮಾಯಣ್ಣ ಗೌಡರಿಗೆ ಬೆಸ್ಟ್ ಎಲೆಕ್ಟೋರಲ್ ಪ್ರಾಕ್ಟೀಸಸ್ ಸ್ಟೇಟ್ ಅವಾರ್ಡ್*

2024-25 ನೇ ಸಾಲಿನಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಮತದಾರರ ನೋಂದಣಾಧಿಕಾರಿಯಾಗಿ
113- ಶಿವಮೊಗ್ಗ ವಿಧಾನಸಭಾ ಮತದಾರರ ಕ್ಷೇತ್ರದ ಹಿಂದಿನ ಆಯುಕ್ತರಾದ  ಮಾಯಣ್ಣ ಗೌಡರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು ರಾಜ್ಯ ಮುಖ್ಯ ಚುನಾವಣಾ ಆಯೋಗ ಘೋಷಿಸಿದೆ.

ಇದೇ ಜನವರಿ 25 ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ   ಪ್ರಶಸ್ತಿ ಪ್ರದಾನವಾಗಲಿದೆ.

ಇದೇ ಸಂದರ್ಭದಲ್ಲಿ ಅತ್ಯುತ್ತಮ ಬಿಎಲ್ ಓ ಆಗಿ ಅಂಗನವಾಡಿ ಶಿಕ್ಷಕಿ ಎಂ.ಸುಮಾರವರಿಗೆ ಪ್ರಶಸ್ತಿ ಘೋಷಿಸಲಾಗಿದೆ.