ಭದ್ರಾವತಿ ರಿಪಬ್ಲಿಕ್ ಒಪ್ಪಲ್ಲಕಾನೂನು ಬಾಹಿರ ಕೃತ್ಯಗಳಿಗೆ ಕಠಿಣ ಕ್ರಮ- ಸಚಿವ ಮಧು ಬಂಗಾರಪ್ಪ 

ಭದ್ರಾವತಿ ರಿಪಬ್ಲಿಕ್ ಒಪ್ಪಲ್ಲ

ಕಾನೂನು ಬಾಹಿರ ಕೃತ್ಯಗಳಿಗೆ ಕಠಿಣ ಕ್ರಮ- ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ಮೈಕ್ರೋ ಪೈನಾನ್ಸ್ ಗಳಿಂದ ಕಿರುಕುಳ ಹೆಚ್ಚಾಗುತ್ತಿದೆ ಎಂಬ ದೂರು ಕೇಳಿಬರುತ್ತಿದ್ದ, ಈ ಹಿನ್ನಲೆಯಲ್ಲಿ ಕಾನೂನು ರೂಪಿಸಲಾಗುತ್ತಿದೆ ಎಂದು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಈ ಬಗ್ಗೆ ಸಭೆ ನಡೆಸಿ ತೀರ್ಮಾನಿಸಲಿದ್ದಾರೆ. ನಾವು ಕಾನೂನು ಪಾಲಕರಾಗಿದ್ದು, ಕಾನೂನು ರೂಪಿಸಿದ ಬಳಿಕ ಕಾನೂನನ್ನು ನಾವೆಲ್ಲರು ಪಾಲಿಸೋಣ ಎಂದರು.

ಶಿವಮೊಗ್ಗದ ಫ್ರೀಡಂ ಪಾರ್ಕ್ ನ್ನು ಅಲ್ಲಮಪ್ರಭು ಮೈದಾನವೆಂದು ನಾಮಕರಣ ಮಾಡಲಾಗಿದೆ. ಅರ್ಥಪೂರ್ಣವಾಗಿ ಅಲ್ಲಮಪ್ರಭು ಮೈದಾನದಲ್ಲಿ ಸಂವಿದಾನ ಪೀಠಿಕೆ ಅನಾವರಣಗೊಳಿಸಲಾಗಿದೆ. ಸಂವಿಧಾನ ಪೀಠಿಕೆ ಎಲ್ಲರೂ ಓದಬೇಕು. ಹೀಗಾಗಿ ಇಲ್ಲಿ ಅನಾವರಣಗೊಳಿಸಿರುವುದು ಅರ್ಥಪೂರ್ಣವಾಗಿದೆ ಎಂದರು.

ಭದ್ರಾವತಿಯಲ್ಲಿ ಇಸ್ಪೀಟ್, ಬಡ್ಡಿ ಹಾಗೂ ಓಸಿ ದಂಧೆ ನಡೆಯುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಭದ್ರಾವತಿ ರಿಪಬ್ಲಿಕ್ ಅಂತಾ ನಾನು ಒಪ್ಪಿಕೊಳ್ಳುವುದಿಲ್ಲ. ಅಧಿಕಾರಿಗಳು ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸಲಿದ್ದಾರೆ ಎಂದರು.

ಕುಪ್ಪಳ್ಳಿಯಲ್ಲಿ ಅದ್ಧೂರಿ ಮದುವೆ ನಡೆದಿರುವ ವಿಚಾರ ನನ್ನ ಗಮಕ್ಕೆ ಬಂದಿಲ್ಲ. ಅದು ಸ್ವತಂತ್ರ ಸಂಸ್ಥೆಯ ಪ್ರತಿಷ್ಠಾನವಾಗಿದೆ. ಜಿಲ್ಲಾಡಳಿತದಡಿಯಲ್ಲಿ ಪ್ರತಿಷ್ಠಾನವಿದೆ. ಈ ಬಗ್ಗೆ ಪ್ರತಿಷ್ಠಾನದ ಮುಖ್ಯಸ್ಥರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು.