ಕವಿಸಾಲು

Gm ಶುಭೋದಯ💐

1.
ಹದ್ದಿನ ಥರಾ
ಹಾರಬೇಕೆಂದರೆ
ಹೃದಯವೇ…

ಪಾರಿವಾಳಗಳ
ಸಂಗ ಬಿಡಬೇಕು
ಮೊದಲು!

2.
ಪ್ರೇಮವೆಂಬುದು
ಮೆಲ್ಲಗೆ
ವಿಷವೇರಿದ ಭಾವ
ಎಂದಷ್ಟೇ
ಕೇಳಿರುವೆ
ಹೃದಯವೇ…

ನಿಜವೇ?

3.
ಗಾಯ ಮಾಡುವ ತಾಖತ್ತು
ಕತ್ತಿಗೆಲ್ಲಿತ್ತು?

ಪದೇ ಪದೇ
ನಿನ್ನ ನೆನಪುಗಳೇ
ಚುಚ್ಚಿ ಚುಚ್ಚಿ
ಕೊಂದವು!

– *ಶಿ.ಜು.ಪಾಶ*
8050112067
(3/2/25)