ಪಾಲಿಕೆಯಲ್ಲಿ ಪ್ರಾಬ್ಲಂ!**ವಾಜಪೇಯಿ ಬಡಾವಣೆ ಖಾತೆಗಳದ್ದೇನು ಕಥೆ? ಫಲಾನುಭವಿಗಳದ್ದೇನು ವ್ಯಥೆ?*

*ಪಾಲಿಕೆಯಲ್ಲಿ ಪ್ರಾಬ್ಲಂ!*

*ವಾಜಪೇಯಿ ಬಡಾವಣೆ ಖಾತೆಗಳದ್ದೇನು ಕಥೆ? ಫಲಾನುಭವಿಗಳದ್ದೇನು ವ್ಯಥೆ?*

ಶಿವಮೊಗ್ಗದ ಬಹು ವಿವಾದಿತ ಬಡಾವಣೆ ಅಟಲ್ ಬಿಹಾರಿ ವಾಜಪೇಯಿ ಲೇ ಔಟ್ ಇನ್ನೂ ವಿವಾದಗಳಿಂದ ಮುಕ್ತವಾಗಿಲ್ಲ. ಇಲ್ಲಿ ನಿವೇಶನ ಪಡೆದ ಫಲಾನುಭವಿಗಳು ಇನ್ನೂ ಕಣ್ಣೀರಲ್ಲೇ ಕೈ ತೊಳೆಯುತ್ತಿದ್ದಾರೆ.

ಶಿವಮೊಗ್ಗ ನಗರಾಭಿವೃಧ್ದಿ ಪ್ರಾಧಿಕಾರದಿಂದ ಹಸ್ತಾಂತರಗೊಂಡ ವಾರ್ಡ್ ನಂ. 35 ರಲ್ಲಿ ಬರುವ ಈ ಅಟಲ್ಲ ಬಿಹಾರಿ ವಾಜಪೇಯಿ ಲೇ ಔಟ್ ಈಗಾಗಲೇ ಶಿವಮೊಗ್ಗ ಮಹಾನಗರಪಾಲಿಕೆಗೆ ಹಸ್ತಾಂತರ ವಾಗಿದೆ.ಅದರಂತೆ, ಫಲಾನುಭವಿಗಳು ಮಹಾನಗರ ಪಾಲಿಕೆಯಲ್ಲಿ ಖಾತೆದಾರರಾಗುತ್ತಾರೆ. ಮುಂದಿನ ಕ್ರಮಗಳು ವರ್ಗಾವಣೆ ಪ್ರಕ್ರಿಯೆಗಳಿಗೊಳಪಡುತ್ತವೆ. ಆದರೆ, ಪ್ರಕರಣದಲ್ಲಿ ಈ ನಿಯಮಗಳನ್ನು ಅನುಸರಿಸಲಾಗುತ್ತಿಲ್ಲ. ಜನ ಖಾತೆ ವಿಚಾರದಲ್ಲಿ ಕಿರಿ ಕಿರಿ ಅನುಭವಿಸುತ್ತಿರುವುದು ತಪ್ಪುತ್ತಿಲ್ಲ.

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಫಲಾನುಭವಿಗಳ ಹೆಸರನ್ನು ಕೈ ಬಿಟ್ಟು ಪ್ರಾಧಿಕಾರದ ಹೆಸರಿಗೆ ಕಂದಾಯ ವಗೈರೆಗಳನ್ನು ಪಾವತಿಸಬೇಕಾಗಿದೆ. ತದನಂತರ ಖಾತೆ ನಕಲನ್ನು ಪ್ರಾಧಿಕಾರದ ಹೆಸರಿಗೆ ಪಡೆದುಕೊಂಡು ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ನೋಟರಿ ಮಾಡಿಸಿ ನಗರ ಪಾಲಿಕೆಗೆ ಸಲ್ಲಿಸಬೇಕು. ಅಂಥ ವಾತಾವರಣವನ್ನು ಸೃಷ್ಟಿಸಲಾಗಿದೆ.

ಪಾಲಿಕೆಯಿಂದ 30 ದಿನಗಳ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಯಥಾ ವಿಧಿ ಖಾತೆ ಪ್ರಕ್ರಿಯೆಗಳು ನಡೆದು ಖಾತೆ ವರ್ಗಾವಣೆಗೆ ಆದೇಶ ಆಗುತ್ತದೆ. ಇದರ ನಂತರ, ಆಸ್ತಿದಾರನು ಖಾತೆ ವರ್ಗಾವಣೆ ಹಾಗೂ ಇನ್ನಿತರೆ ಶುಲ್ಕಗಳನ್ನು ಪಾವತಿಸಿ ಖಾತೆ ವರ್ಗಾವಣೆ ಹಿಂಬರಹ ಪಡೆದುಕೊಳ್ಳಬೇಕು. ಅಲ್ಲದೇ, ಮತ್ತೊಂದು ಅರ್ಜಿ ಸಲ್ಲಿಸಿ ಇ-ಆಸ್ತಿ ಖಾತೆ ಮಾಡಿಸಿಕೊಳ್ಳಬೇಕು…

ಈ ಸಮಸ್ಯೆಯಿಂದ ವಾಜಪೇಯಿ ಬಡಾವಣೆಯ ಖಾತೆದಾರರಿಗೆ ಮುಕ್ತಿ ಯಾವಾಗ?