ಇತಿಹಾಸ ಸೃಷ್ಟಿಸಿದ ರಾಜ್ಯ ಸರ್ಕಾರಆಯೆಷಾ ಖಾನಂ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರು…ಯಾರು ಈ ಆಯೆಷಾ ಖಾನಂ? ಇವರ ಸಾಧನೆಯಾದರೂ ಏನು?

ಇತಿಹಾಸ ಸೃಷ್ಟಿಸಿದ ರಾಜ್ಯ ಸರ್ಕಾರ

ಆಯೆಷಾ ಖಾನಂ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರು…

ಯಾರು ಈ ಆಯೆಷಾ ಖಾನಂ? ಇವರ ಸಾಧನೆಯಾದರೂ ಏನು?

ಹಿರಿಯ ಪತ್ರಕರ್ತೆ ಆಯೆಷಾ ಖಾನಂರವರನ್ನು ರಾಜ್ಯ ಸರ್ಕಾರ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿ ಇತಿಹಾಸ ಸೃಷ್ಟಿಸಿದೆ.

ಈ ಮೂಲಕ ಇದೇ ಮೊದಲ ಬಾರಿಗೆ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸ್ಥಾನವನ್ನು ನಿರಂತರವಾಗಿ ವೃತ್ತಿಪರತೆ ಕಾಪಾಡಿಕೊಂಡು ಬಂದಿರುವ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮಹಿಳಾ ಪ್ರತಿನಿಧಿಯೊಬ್ಬರು ಅಲಂಕರಿಸಿದ್ದಾರೆ.
ಹಿರಿಯ ಪತ್ರಕರ್ತೆ ಮತ್ತು ಸುದ್ದಿ ನಿರೂಪಕಿಯಾಗಿರುವ ಆಯೇಷಾ ಖಾನಂ ಅವರು ದೂರದರ್ಶನ ದಕ್ಷಿಣ ಭಾರತದ ಮುಖ್ಯ ವರದಿಗಾರರಾಗಿದ್ದರು. ಜು.9ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಆಯೇಷಾ ಖಾನಂ ಅವರು 26 ವರ್ಷಗಳ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸಿದ್ದು, ಈ ಹಿಂದೆ ಏಷ್ಯನ್ ಏಜ್, ಆಜ್‌ತಕ್‌, ಸ್ಟಾರ್ ನ್ಯೂಸ್‌ನಲ್ಲಿ ಕೆಲಸ ಮಾಡಿದ್ದಾರೆ. ಅವರು ಶ್ರೀಲಂಕಾ ಸಂಘರ್ಷ, 11 ರಾಜ್ಯಗಳ ಚುನಾವಣೆ ಹಾಗೂ 5 ಸಾರ್ವತ್ರಿಕ ಲೋಕಸಭಾ ಚುನಾವಣೆಗಳಲ್ಲಿ ಪರಿಣಾಮಕಾರಿ ವರದಿಗಾರಿಗೆ ಮಾಡಿ ಖ್ಯಾತಿ ಗಳಿಸಿದ್ದಾರೆ.

ಇವರೊಂದಿಗೆ ಸದಸ್ಯರನ್ನಾಗಿ ಚಿತ್ರದುರ್ಗದ ಎಂ.ಎನ್.ಅಹೋಬಳಪತಿ, ಬೆಂಗಳೂರಿನ ಹಿರಿಯ ಛಾಯಾಗ್ರಾಹಕ ಕೆ.ವೆಂಕಟೇಶ್ ಹಾಗೂ ಗಂಗಾವತಿಯ ಕೆ.ನಿಂಗಜ್ಜರನ್ನು ನೇಮಿಸಿ ಆದೇಶಿಸಿದೆ.