ಶಿವಮೊಗ್ಗ ಸಮೀಪದಲ್ಲೇ ತುಂಗಾನದಿಯಿಂದ ಅಕ್ರಮ ಮರಳು ಮಾಫಿಯಾ…ದಿನೇಶ್ ಎಂಡ್ ಗ್ರೂಪ್ ನಿಂದ ರಾತ್ರಿಯಿಡೀ ಮರಳು ದರೋಡೆ!ಯಾಕೆ ಮೌನ ಪೊಲೀಸರು, ಜಿಲ್ಲಾಡಳಿತ, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ?ಇವತ್ತಿಂದ ನಿಲ್ಲುತ್ತಾ ಮತ್ತೂರು- ಕುಸ್ಕೂರು ಸಮೀಪದ ಭೀಮೇಶ್ವರ ದೇವಸ್ಥಾನದ ಬಳಿಯ ಅಕ್ರಮ ಮರಳು ಮಾಫಿಯಾ?
ಶಿವಮೊಗ್ಗ ಸಮೀಪದಲ್ಲೇ ತುಂಗಾನದಿಯಿಂದ ಅಕ್ರಮ ಮರಳು ಮಾಫಿಯಾ…
ದಿನೇಶ್ ಎಂಡ್ ಗ್ರೂಪ್ ನಿಂದ ರಾತ್ರಿಯಿಡೀ ಮರಳು ದರೋಡೆ!
ಯಾಕೆ ಮೌನ ಪೊಲೀಸರು, ಜಿಲ್ಲಾಡಳಿತ, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ?
ಇವತ್ತಿಂದ ನಿಲ್ಲುತ್ತಾ ಮತ್ತೂರು- ಕುಸ್ಕೂರು ಸಮೀಪದ ಭೀಮೇಶ್ವರ ದೇವಸ್ಥಾನದ ಬಳಿಯ ಅಕ್ರಮ ಮರಳು ಮಾಫಿಯಾ?
ಶಿವಮೊಗ್ಗದ ತುಂಗೆಗೆ ಮರಳು ಚೋರರ ಭೀಕರ ಶಾಪ ಇದ್ದಂತಿದೆ. ಪ್ರತಿ ರಾತ್ರಿ ಎಡೆಬಿಡದೇ ತುಂಗೆಯ ಹೊಟ್ಟೆ ಬಗೆದು ಅಕ್ರಮವಾಗಿ ನೂರಾರು ಲೋಡುಗಳಷ್ಟು ಮರಳು ಸಾಗಿಸಲಾಗುತ್ತಿದೆ.ಆದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಬಹುಮುಖ್ಯವಾಗಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಬೇಕೆಂತಲೇ ನೋಡಿಯೂ ನೋಡದಂತೆ ಮೌನವಹಿಸಿರುವುದರ ಹಿಂದೆ ಸಾಕಷ್ಟು ಪ್ರಶ್ನೆಗಳು ಮೂಡುತ್ತಿವೆ.
ಈಗಾಗಲೇ ಹಗಲು ರಾತ್ರಿಯೆನ್ನದೇ ಶಿವಮೊಗ್ಗ ಸಮೀಪದಲ್ಲಿಯೇ ಇರುವ ಮತ್ತೂರು- ಕುಸ್ಕೂರು ಸಮೀಪದ ಭೀಮೇಶ್ವರ ದೇವಸ್ಥಾನದ ಬಳಿಯಲ್ಲೇ ಈ ಅಕ್ರಮ ಮರಳು ತೆಗೆಯುವ ಅನಾಹುತಕಾರಿ ಕೆಲಸ ನಡೆಯುತ್ತಿದೆ.
ಪ್ರತಿನಿತ್ಯ ರಾತ್ರಿ ಆರಂಭವಾದ ಕೂಡಲೇ ತುಂಗೆಯ ಹೊಟ್ಟೆ ಬಗೆಯಲಾಗುತ್ತಿದೆ. ಲೋಡುಗಟ್ಟಲೆ ಅಕ್ರಮ ಮರಳನ್ನು ಇಲ್ಲಿಂದ ಸಾಗಿಸಲಾಗುತ್ತಿದೆ. ದಿನೇಶ್ ಸೇರಿದಂತೆ ಕೆಲವರು ಈ ಮಹಾ ಕುಕೃತ್ಯಕ್ಕೆ ಕೈ ಜೋಡಿಸಿದ್ದಾರೆಂಬ ಮಾಹಿತಿ ಇಲಾಖೆಗಳ ಬಳಿ ಇದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಬಹಳಷ್ಟು ಜನರ ಕೈ ಬೆಚ್ಚಗಾದ ಮಾಹಿತಿಯನ್ನು ಸ್ವತಃ ಮರಳು ಕಳ್ಳರೇ ಅಲ್ಲಲ್ಲಿ ಘೋಷಿಸಿಕೊಂಡು ಓಡಾಡುತ್ತಿದ್ದಾರೆ.
ಈಗಲಾದರೂ ಮತ್ತೂರು- ಕುಸ್ಕೂರು ಸಮೀಪದ ಭೀಮೇಶ್ವರ ದೇವಸ್ಥಾನದ ಬಳಿಯ ಅಕ್ರಮ ಮರಳು ಮಾಫಿಯಾ ಇವತ್ತಿಂದ ನಿಲ್ಲುತ್ತಾ?
ಕಾದು ನೋಡೋಣ…