ವಿಚ್ಛೇದಿತ ಮಹಿಳೆ ಶ್ವೇತಾಗೆ ವಂಚನೆ ಮಾಡಿದ ಮೂವರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್…* *ಬೆಂಗಳೂರಿನ ನಿಶಾಂತ್- ಚಂದನ, ಹೊಸನಗರದ ಸೀಮಾ ಸೆರಾವೋ ವಿರುದ್ಧ ಎಫ್ ಐ ಆರ್…* *ಏನಿದು ಘಟನೆ…?*
*ವಿಚ್ಛೇದಿತ ಮಹಿಳೆ ಶ್ವೇತಾಗೆ ವಂಚನೆ ಮಾಡಿದ ಮೂವರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್…*
*ಬೆಂಗಳೂರಿನ ನಿಶಾಂತ್- ಚಂದನ, ಹೊಸನಗರದ ಸೀಮಾ ಸೆರಾವೋ ವಿರುದ್ಧ ಎಫ್ ಐ ಆರ್…*
*ಏನಿದು ಘಟನೆ…?*
ರಿಪ್ಪನ್ ಪೇಟೆಯ ಮಹಿಳೆಯೋರ್ವರಿಗೆ ಬೆಂಗಳೂರಿನ ದಂಪತಿ ಹಾಗೂ ಹೊಸನಗರದ ಮಹಿಳೆ ವಂಚಿಸಿದ್ದಾರೆಂದು ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
35 ವರ್ಷ ವಯಸ್ಸಿನ ಮಹಿಳೆ ಶ್ವೇತಾ ರಿಪ್ಪನ್ ಪೇಟೆಯಲ್ಲಿ ಟೈಲರಿಂಗ್ ಹಾಗೂ ಫ್ಯಾಷನ್ ಡಿಸೈನಿಂಗ್ ವೃತ್ತಿ ಮಾಡುತ್ತಿದ್ದು, ಮೂವರು ತಮಗೆ ವಂಚಿಸಿದ್ದಾರೆಂದು ದೂರಿನಲ್ಲಿ ವಿವರಿಸಿದ್ದಾರೆ.
ವಿಚ್ಛೇದಿತ ಮಹಿಳೆಯಾಗಿದ್ದು, ಮತ್ತೊಂದು ವಿವಾಹಕ್ಕಾಗಿ ಮ್ಯಾಟ್ರಿಮೋನಿಯಲ್ಲಿ ವಿವರಗಳನ್ನು ಹಾಕಿದ್ದರು.ಆಗ ಬೆಂಗಳೂರಿನ ವಾಸೊಯಾದ ಸಿ.ಜೆ.ನಿಶಾಂತ್ ಪರಿಚಯವಾದರು. 9ವರ್ಷಗಳ ಹಿಂದೆ ಚಂದನ ಎಂಬುವವರಿಗೆ ಮದುವೆಯಾಗಿದ್ದು, ವಿಚ್ಛೇದಿತನಾಗಿದ್ದೇನೆ ಎಂದು ಹೇಳಿ, ದಾಖಲೆಗಳನ್ನು ತೋರಿಸು, ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿರುವ ಬಗ್ಗೆ ಹೇಳಿಕೊಂಡರು. ತಮ್ಮ ಮೆಚ್ಚುಗೆಯನ್ನು ತಿಳಿಸಿ 2022ರ ಡಿಸೆಂಬರ್ 8 ರಂದು ಕಡೂರು ತಾಲ್ಲೂಕಿನ ತರುವನಹಳ್ಳಿ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಸ್ನೇಹಿತರ ಸಮಕ್ಷಮದಲ್ಲಿ ವಿವಾಹವಾದರೆಂದು ಎಫ್ ಐ ಆರ್ ನಲ್ಲಿ ಮಹಿಳೆ ಶ್ವೇತಾ ನೀಡಿರುವ ವಿವರಗಳಿವೆ.
ಚೆನ್ನಾಗಿಯೇ ದಾಂಪತ್ಯ ಜೀವನ ನಡೆಯುತ್ತಿದ್ದಾಗ ಹೊಸ ಬ್ಯುಝಿನೆಸ್ ಆರಂಭಿಸುವುದಾಗಿ ಹೇಳಿ 17 ಲಕ್ಷ ರೂ.,ಗಳನ್ನು ಬ್ಯಾಂಕ್ ಖಾತೆಯ ಮೂಲಕವೇ ನಿಶಾಂತ್ ಪಡೆದುಕೊಂಡ. ಅಲ್ಲದೇ, 12.50 ಲಕ್ಷ ರೂ.,ಗಳನ್ನು ನಗದಾಗಿ ಪಡೆದುಕೊಂಡಿದ್ದಾನೆ.20 ಗ್ರಾಂ ಬಂಗಾರದ ಆಭರಣವನ್ನು ತನ್ನದೇ ಹೆಸರಲ್ಲಿ ಅಡವಿಟ್ಟು ಹಣ ಪಡೆದಿದ್ದಾನೆ ಎಂದು ಶ್ವೇತಾ ದೂರಿನಲ್ಲಿದೆ.
ಮದುವೆಯಾಗಿ ಒಂದೂವರೆ ವರ್ಷಗಳ ನಂತರ ನಿಶಾಂತ್ ತನ್ನ ಮೊದಲ ಹೆಂಡತಿಯಿಂದ ವಿಚ್ಛೇದನ ಪಡೆದಿಲ್ಲ ಎಂಬ ವಿಚಾರ ಗೊತ್ತಾಯಿತು. ಮೊದಲ ಹೆಂಡತಿ ಚಂದನ ಮತ್ತು ಮಗುವಿನೊಂದಿಗೆ ಸಂಸಾರ ನಡೆಸುತ್ತಿದ್ದ. ಆನಂತರ ಕೌಟುಂಬಿಕ ಜಗಳಗಳಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೂ ಆಗಿದೆ ಎಂದು ದೂರಿನಲ್ಲಿದೆ.
ಆನಂತರದಲ್ಲಿ ನಿಶಾಂತ್, ಚಂದನ ಹೊಸನಗರದ ಸೀಮಾ ಸೆರಾವೋ ರವರ ಜೊತೆ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಸೇರಿದಂತೆ ಹಲವೆಡೆ ಮಾನಸಿಕ ಹಿಂಸೆ ನೀಡಿದ್ದಾರೆ. ಸಾಮಾಜಿಕವಾಗಿ ಮಾನ ತೆಗೆದಿದ್ದಾರೆ. ಅವಾಚ್ಯವಾಗಿ ಬೈದಿದ್ದಾರೆ. ನೀಡಿದ ಹಣ ವಾಪಸ್ ಕೇಳಿದರೆ ಕೊಲೆ ಮಾಡುವುದಾಗಿ ಹೆದರಿಸಿದ್ದಾರೆ. ಹಾಗಾಗಿ, ತಮಗೆ ರಕ್ಷಣೆಯ ಜೊತೆಗೆ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ನ್ಯಾಯವೊದಗಿಸಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಮಹಿಳಾ ಠಾಣೆ ಪೊಲೀಸರು ಫೆ. ರಂದು 19/25 ರಂತೆ ಫೆ.2 ರಂದು ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.