ಬುರ್ಖಾ ಧರಿಸಿ ಬಂದ ಇಬ್ಬರು ಮಹಿಳೆಯರು ಕಿರಣ್ ಷಾ ಬಂಗಾರದಂಗಡಿಯಲ್ಲಿ ಮಾಡಿದ್ದೇನು?* *ಬಂಗಾರದ ಸರವಿಟ್ಟು ಅಸಲಿ ಎಗರಿಸಲು ಹೊರಟು ಸಿಕ್ಕಿಬಿದ್ದ ಆರ್ ಎಂ ಎಲ್ ನಗರದ ನಿಗಾರ್ ಸುಲ್ತಾನ- ನೂರೈನ್ ಪರಿ*
*ಬುರ್ಖಾ ಧರಿಸಿ ಬಂದ ಇಬ್ಬರು ಮಹಿಳೆಯರು ಕಿರಣ್ ಷಾ ಬಂಗಾರದಂಗಡಿಯಲ್ಲಿ ಮಾಡಿದ್ದೇನು?*
*ಬಂಗಾರದ ಸರವಿಟ್ಟು ಅಸಲಿ ಎಗರಿಸಲು ಹೊರಟು ಸಿಕ್ಕಿಬಿದ್ದ ಆರ್ ಎಂ ಎಲ್ ನಗರದ ನಿಗಾರ್ ಸುಲ್ತಾನ- ನೂರೈನ್ ಪರಿ*


ಬುರ್ಖಾ ಧರಿಸಿ ಬಂದ ಇಬ್ಬರು ಕಳ್ಳಿಯರ ವಿರುದ್ಧ ಗಾಂಧಿ ಬಜಾರಿನ ಷಾ ಸದಾಜೀ ಸೋಗ್ ಮಲ್ ಜಿ ಅಂಗಡಿಯ ಮಾಲೀಕ ಕಿರಣ್ ಷಾ ನಕಲಿ ಬಂಗಾರದ ಸರವಿಟ್ಟು ಅಸಲಿ ಬಂಗಾರದ ಸರ ಕದ್ದೊಯ್ದಿರುವ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶಿವಮೊಗ್ಗದ ಗಾಂಧಿ ಬಜಾರ್ ಮುಖ್ಯರಸ್ತೆಯಲ್ಲಿರುವ ಬಂಗಾರದ ಅಂಗಡಿಗೆ ಫೆ.18ರ ಶನಿವಾರ ಮಧ್ಯಾಹ್ನ ಬಂದ ಬುರ್ಖಾಧಾರಿ ಇಬ್ಬರು ಮಹಿಳೆಯರು ಬಂಗಾರ ಖರೀದಿಗಾಗಿ 15-20 ಗ್ರಾಂ ಸರಗಳನ್ನು ತೋರಿಸಲು ಹೇಳಿದ್ದಾರೆ.
ಆಗ 1.12 ಲಕ್ಷ ರೂ.,ಗಳ ಮೌಲ್ಯದ ಬಂಗಾರದ ಸರಗಳನ್ನು ತೋರಿಸಲಾಯಿತು. ಆಗ ಆ ಇಬ್ಬರು ತಾವು ತಂದಿದ್ದ ನಕಲಿ ಬಂಗಾರದ ಸರ ಇಟ್ಟು ಅಸಲಿ ಬಂಗಾರದ ಸರವನ್ನು ಬುರ್ಖಾದ ತೋಳಿನಲ್ಲಿ ಸೇರಿಸಿಕೊಂಡರು.
ಈ ಇಬ್ಬರ ಬಗ್ಗೆ ಅನುಮಾನ ಬಂದು ಇದ್ದ ಸಿ ಸಿ ಕ್ಯಾಮರಾ ಪರಿಶೀಲಿಸಿದಾಗ ಸತ್ಯ ಹೊರಬಿತ್ತು. ಇಬ್ಬರನ್ನು ಕೂರಿಸಿಕೊಂಡು ವಿಚಾರಿಸಿದಾಗ ಈ ಇಬ್ಬರು, ತಾವು ಆರ್ ಎಂ ಎಲ್ ನಗರದ ನಿವಾಸಿಗಳೆಂದೂ ತಮ್ಮ ಹೆಸರು ನಿಗಾರ್ ಸುಲ್ತಾನ ಮತ್ತು ನೂರೈನ್ ಪರಿ ಎಂದು ಹೇಳಿಕೊಂಡಿದ್ದಾರೆ.
ಕೂಡಲೇ ಅಂಗಡಿ ಮಾಲೀಕ ಕಿರಣ್ ಷಾ ಕೋಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು 38/25 ರಂತೆ ಎಫ್ ಐ ಆರ್ ದಾಖಲಿಸಿಕೊಂಡಿದ್ದು, ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ.