*ಕುತೂಹಲಕಾರಿ ಘಟ್ಟದಲ್ಲಿ ಶ್ರೀಕಾಂತಣ್ಣ ಕಪ್ ಸೀಸನ್-2 ಕ್ರಿಕೆಟ್ ಪಂದ್ಯಾವಳಿ;* *ಸುನಿಲ್ ರವರಿಗೆ ಸನ್ಮಾನಿಸಿದ್ದು ಯಾಕೆ ಆಯೋಜಕರು?*

*ಕುತೂಹಲಕಾರಿ ಘಟ್ಟದಲ್ಲಿ ಶ್ರೀಕಾಂತಣ್ಣ ಕಪ್ ಸೀಸನ್-2 ಕ್ರಿಕೆಟ್ ಪಂದ್ಯಾವಳಿ;*

*ಸುನಿಲ್ ರವರಿಗೆ ಸನ್ಮಾನಿಸಿದ್ದು ಯಾಕೆ ಆಯೋಜಕರು?*

ಶಿವಮೊಗ್ಗದಲ್ಲಿ ಫೆಬ್ರವರಿ 22 ರಿಂದ ಎರಡು ದಿನಗಳ ಕಾಲ ನಡೆಯುತ್ತಿರುವ  *“ಶ್ರೀಕಾಂತಣ್ಣ ಕಪ್ ಸೀಸನ್ – 2” ಕ್ರಿಕೆಟ್ ಪಂದ್ಯಾವಳಿ* ಯಲ್ಲಿ ಇಂದು ಸೂಡಾ ಮಾಜಿ ಸದಸ್ಯರೂ ಕಾಂಗ್ರೆಸ್ ಮುಖಂಡರೂ ಆದ ಎ.ಸುನಿಲ್ ರವರನ್ನು ಆಯೋಜಕರೆಲ್ಲ ಸೇರಿ ಸನ್ಮಾನಿಸಿ ಅಭಿನಂದಿಸಿದರು.

ವಿನಯ್ ತಾಂಡ್ಲೆ ಅಧ್ಯಕ್ಷರಾಗಿರುವ ಆಯೋಜಕ ತಂಡ( ಮಧು, ಅಶೋಕ, ಶಬರಿ, ಕಿರಣ್ ಮತ್ತಿತರರು) ಸುನಿಲ್ ರವರನ್ನು ಸನ್ಮಾನಿಸಿತು.

ಈ ವೇಳೆ ಶ್ರೀಕಾಂತಣ್ಣ ಕಪ್ ಕ್ರಿಕೆಟ್  ಪಂದ್ಯಾವಳಿಯಲ್ಲಿ 12 ತಂಡಗಳು ಪಾಲ್ಗೊಂಡು ಆಡುತ್ತಿವೆ.

ಕಾರ್ಯಕ್ರಮದಲ್ಲಿ ಆಯೋಜಕರಾದ ವಿನಯ್ ತಾಂದ್ಲೆ ಹಾಗೂ ಮಂಜುನಾಥ್ ಬೇದ್ರೆ ಇವರು ಪಂದ್ಯಾವಳಿಯಲ್ಲಿ ಪಾಲ್ಗೊಂಡವರಿಗೆ ಹುರಿದುಂಬಿಸುತ್ತಿರುವ ದೃಶ್ಯ ಕಂಡು ಬಂತು.

ಶಿವಮೊಗ್ಗದ ATNCC ಕಾಲೇಜು ಕ್ರೀಡಾಂಗಣದಲ್ಲಿ  ಶ್ರೀಕಾಂತಣ್ಣ ಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ. 12 ತಂಡಗಳ ಲೀಗ್ ಹಂತದ 6 ಓವರ್ ಗಳ ಪಂದ್ಯಗಳಾಗಿರುತ್ತದೆ. ಈ ಪಂದ್ಯಾವಳಿಯ ಪ್ರಥಮ ಬಹುಮಾನ 30,000 ರೂ. ಹಾಗೂ ಆಕರ್ಷಕ ಟ್ರೋಫಿ ದ್ವಿತೀಯ ಬಹುಮಾನ 15,000 ರೂ. ಹಾಗೂ ಆಕರ್ಷಕ  ಟ್ರೋಫಿ. ಈ ಕ್ರಿಕೆಟ್ ಪಂದ್ಯಾವಳಿ ಗಲ್ಲಿ ಕ್ರಿಕೆಟ್ ಯುಟ್ಯೂಬ್ ಚಾನೆಲ್ ನಲ್ಲಿ ಲೈವ್ ಇದೆ.

MBC ಇವರ ನೇತೃತ್ವದಲ್ಲಿ ಈ ಪಂದ್ಯಾವಳಿ ನಡೆಯುತ್ತಿದೆ.