ಫೆ.24 ರ ಇಂದು ಉದ್ಯೋಗ ಮೇಳ; ನಿರುದ್ಯೋಗಿ ಯುವಕ- ಯುವತಿಯರೇ ಪಾಲ್ಗೊಳ್ಳಿ* ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ರವರು ಕರೆ
*ಫೆ.24 ರ ಇಂದು ಉದ್ಯೋಗ ಮೇಳ; ನಿರುದ್ಯೋಗಿ ಯುವಕ- ಯುವತಿಯರೇ ಪಾಲ್ಗೊಳ್ಳಿ*
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ರವರು ಕರೆ
ವಿದ್ಯಾರ್ಹತೆಗೆ ತಕ್ಕ ಉದ್ಯೋಗವನ್ನು ಪಡೆಯಲು ನಿರುದ್ಯೋಗ ಯುವಕ-ಯುವತಿಯರು ಮತ್ತು ಯುವನಿಧಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಎ.ಟಿ.ಎನ್.ಸಿ. ಕಾಲೇಜು, ಶಿವಮೊಗ್ಗ ಇಲ್ಲಿ ಫೆ.24 ಇಂದು ಹಮ್ಮಿಕೊಂಡಿರುವ ” ಉದ್ಯೋಗ ಮೇಳ” ದಲ್ಲಿ ಭಾಗವಹಿಸಬೇಕೆಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ರವರು ಕರೆ ನೀಡಿದ್ದಾರೆ.
ಕರ್ನಾಟಕ ಸರ್ಕಾರದ ಸರ್ವರಿಗೂ ಉದ್ಯೋಗ ಯೋಜನೆಯಡಿ ಕೌಶಲ್ಯಾಭಿವೃದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಗ್ಯಾರಂಟಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಉದ್ಯೋಗ ಮೇಳವನ್ನು ದಿನಾಂಕ: 24-02-2025 ರಂದು ಸೋಮವಾರ ಎ.ಟಿ.ಎನ್.ಸಿ. ಕಾಲೇಜು ಶಿವಮೊಗ್ಗ ಇಲ್ಲಿ ಬೆಳಿಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ.
ಇಂಜಿನಿಯರಿAಗ್ ಪದವಿ, ಸ್ನಾತಕೋತ್ತರ ಪದವಿ, ಎಲ್ಲಾ ಪದವಿ/ಡಿಪ್ಲೋಮ/ಐ.ಟಿ.ಐ/ಸೇರಿದಂತೆ ಪಿ.ಯು.ಸಿ. ಎಸ್.ಎಸ್.ಎಲ್.ಸಿ. ಹಾಗು 7ನೇ ತರಗತಿ ಉತ್ತೀರ್ಣ ಹೊಂದಿರುವ ನಿರುದ್ಯೋಗ ಯುವಕರು ಮತ್ತು ಯುವತಿಯರು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಎಲ್ಲರಿಗೂ ಪ್ರವೇಶ ಉಚಿತವಾಗಿದ್ದು ನಿರುದ್ಯೋಗಸ್ಥರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಲಾಗಿದೆ.
ರಾಜ್ಯದಲ್ಲಿರುವ ಪ್ರತಿಷ್ಠಿತ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ನೋಂದಾಯಿತ ನಿರುದ್ಯೋಗಸ್ಥರ ಜೊತೆಗೆ ನೇರ ಸಂದರ್ಶನವನ್ನು ನಡೆಸುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ನೀಡಲಾಗುವುದು. 18 ರಿಂದ 35 ವರ್ಷ ವಯೋಮಿತಿ ಹೊಂದಿರುವ ಉದ್ಯೋಗಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿ ತಮಗೆ ಸೂಕ್ತವಾದ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಸಂದರ್ಶನ ನಡೆಸಲು ಪ್ರತಿಯೊಂದು ಕಂಪನಿಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.
ಉದ್ಯೋಗ ಮೇಳಕ್ಕೆ ಆಗಮಿಸುವ ಯುವಕ ಯುವತಿಯರು ಕಡ್ಡಾಯವಾಗಿ ಬೆಳಿಗ್ಗೆ 9 ಗಂಟೆಗೆ ಹಾಜರಿರತಕ್ಕದ್ದು ಜೊತೆಯಲ್ಲಿ ಅಗತ್ಯ ದಾಖಲಾತಿಗಳಾದ ತಮ್ಮ ವಿಧ್ಯಾಭ್ಯಾಸದ ಅಂಕಪಟ್ಟಿಯ ಪ್ರತಿ, ಆಧಾರ ಕಾರ್ಡ್, ಅನುಭವ ಪ್ರಮಾಣ ಪತ್ರ (ಇದ್ದರೆ), ಸಂಕ್ಷಿಪ್ತ ವ್ಯಕ್ತಿ ಪರಿಚಯ ಪತ್ರ (ರೆಸ್ಯುಮ್) ತರಬೇಕು.
ನೋಂದಾಯಿತ ನಿರುದ್ಯೋಗಿಗಗಳು ಎಷ್ಟು ಸಂದರ್ಶನಕ್ಕೆ ಹಾಜರಾಗುತ್ತಾರೋ ಉದಾಹರಣೆಗೆ 1 ರಿಂದ 10 ಕಂಪನಿಗಳಿಗೆ ಸಂದರ್ಶನ ನೀಡಿದಲ್ಲಿ 10 ಸೆಟ್ ಗಳಲ್ಲಿ ದಾಖಲಾತಿಯ ಜೆರಾಕ್ಸ್ ಪ್ರತಿಗಳನ್ನು ತರತಕ್ಕದ್ದು. ಉದ್ಯೋಗದಾತ ಸಂಸ್ಥೆಗಳ ಆಯ್ಕೆಯು ಅಂತಿಮವಾಗಿರುತ್ತದೆ.
ಆಸಕ್ತ ಅಭ್ಯರ್ಥಿಗಳು ಮುಂಚಿತವಾಗಿ ಅಥವಾ ಸ್ಥಳದಲ್ಲಿ ಆನ್‌ಲೈನ್ ಲಿಂಕ್‌ನಲ್ಲಿ ನೋಂದಾಯಿಸಿಕೊAಡು ಉದ್ಯೋಗ ಮೇಳದಲ್ಲಿ ಭಾಗವಹಿಸಿ ನಿರೋದ್ಯೋಗಿ ಯುವಕ ಯುವತಿಯರು ಉದ್ಯೋಗಸ್ಥರಾಗಿ ಹೊರಹೊಮ್ಮಲು ಈ ಸುವರ್ಣ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.