ಭದ್ರಾವತಿಯಲ್ಲಿ ಮತ್ತೆ ಪೊಲೀಸ್ ಶೂಟೌಟ್… 12 ಪ್ರಕರಣದ ಆರೋಪಿ ಶಾಹಿದ್ ಕಾಲಿಗೆ ಖಾಕಿ ಗುಂಡು ಪೇಪರ್ ಟೌನ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ

ಭದ್ರಾವತಿಯಲ್ಲಿ ಮತ್ತೆ ಪೊಲೀಸ್ ಶೂಟೌಟ್…

12 ಪ್ರಕರಣದ ಆರೋಪಿ ಶಾಹಿದ್ ಕಾಲಿಗೆ ಖಾಕಿ ಗುಂಡು

ಪೇಪರ್ ಟೌನ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ

ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಗುಂಡಿನ ದಾಳಿ ನಡೆದಿದೆ.

ಆರೋಪಿ ಶಾಹಿದ್ ವಿರುದ್ಧ 12 ಪ್ರಕರಣಗಳು ದಾಖಲಾಗಿದ್ದು, ಪೊಲೀಸರ ಮೇಲಿನ ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ ರೌಡಿ ಶೀಟರ್ ಪರಾರಿಯಾಗಿದ್ದ.

ಮಂಗಳವಾರ ಬೆಳಿಗ್ಗೆ ಭದ್ರತೆ ನೀಡುವಾಗ ನಮ್ಮ ಸಿಬ್ಬಂದಿ ನಾಗರಾಜ್ ಮತ್ತು ಪೈ ನಾಗಮ್ಮ ಮೇಲೆ ಹಲ್ಲೆ ನಡೆಸಲು ಶಾಹಿದ್ ಯತ್ನಿಸಿದ್ದಾನೆ.

ಪೊಲೀಸರು ಕೂಡಲೇ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದಾರೆ.