ಶಾಸಕ ಎಸ್. ಎನ್. ಚನ್ನಬಸಪ್ಪ(ಚೆನ್ನಿ) ಪತ್ರಿಕಾಗೋಷ್ಠಿಯಲ್ಲಿ… ಇನ್ನೊಂದು ವರ್ಷದಲ್ಲಿ ಉಳಿದ 574 ಆಶ್ರಯ ಮನೆ ವಿತರಣೆ ಮರಳು ಮಾಫಿಯಾ- ಡ್ರಗ್ ಮಾಫಿಯಾ ಕೈಬಿಟ್ಟು ಹಿಂದೂ ನಾಯಕರನ್ನು ಅವಮಾನಿಸುತ್ತಿರುವ ಎಸ್ ಪಿ ಯಾರ ಒತ್ತಡಕ್ಕೆ ಮಣಿಯುತ್ತಿದ್ದಾರೆ? ಪುಸ್ತಕ ಬಿಡುಗಡೆಗೆಂದು ಬರುತ್ತಿದ್ದ ಪ್ರಮೋದ್ ಮುತಾಲಿಕ್ ಗೆ ಶಿವಮೊಗ್ಗ ಪ್ರವೇಶ ನಿಷೇಧದ ಬಗ್ಗೆ ಕೆಂಡ ಕಾರಿದ ಶಾಸಕ ಚೆನ್ನಿಯವರು ಹೇಳಿದ್ದೇನು? ವಿಶ್ವಗುರು ಆಗುವತ್ತ ಭಾರತಕ್ಕೆ ಕುಂಭಮೇಳ ಸಾಕ್ಷಿ
ಶಾಸಕ ಎಸ್. ಎನ್. ಚನ್ನಬಸಪ್ಪ(ಚೆನ್ನಿ) ಪತ್ರಿಕಾಗೋಷ್ಠಿಯಲ್ಲಿ…
ಇನ್ನೊಂದು ವರ್ಷದಲ್ಲಿ ಉಳಿದ 574 ಆಶ್ರಯ ಮನೆ ವಿತರಣೆ
ಮರಳು ಮಾಫಿಯಾ- ಡ್ರಗ್ ಮಾಫಿಯಾ ಕೈಬಿಟ್ಟು ಹಿಂದೂ ನಾಯಕರನ್ನು ಅವಮಾನಿಸುತ್ತಿರುವ ಎಸ್ ಪಿ ಯಾರ ಒತ್ತಡಕ್ಕೆ ಮಣಿಯುತ್ತಿದ್ದಾರೆ?
ಪುಸ್ತಕ ಬಿಡುಗಡೆಗೆಂದು ಬರುತ್ತಿದ್ದ ಪ್ರಮೋದ್ ಮುತಾಲಿಕ್ ಗೆ ಶಿವಮೊಗ್ಗ ಪ್ರವೇಶ ನಿಷೇಧದ ಬಗ್ಗೆ ಕೆಂಡ ಕಾರಿದ ಶಾಸಕ ಚೆನ್ನಿಯವರು ಹೇಳಿದ್ದೇನು?
ವಿಶ್ವಗುರು ಆಗುವತ್ತ ಭಾರತಕ್ಕೆ ಕುಂಭಮೇಳ ಸಾಕ್ಷಿ
45 ದಿನಗಳ ಕುಂಭಮೇಳ ಅತ್ಯಂತ ಯಶಸ್ವಿ. ಇಡೀ ದೇಶ ಸಂಭ್ರಮಿಸಿದೆ. 66 ಕೋಟಿಗಿಂತ ಹೆಚ್ಚು ಜನ ವೀಕ್ಷಿಸಿದ್ದಾರೆ. ಪ್ರತ್ಯಕ್ಷ ಭಾಗವಹಿಸಿದ್ದೆ. ವ್ಯವಸ್ಥಿತ ವ್ಯವಸ್ಥೆ. ಹಿಂದೂ ಧರ್ಮಕ್ಕೆ ಚೈತನ್ಯ ತುಂಬಿದ ಪ್ರಯಾಗರಾಜ್. ಆಶ್ಚರ್ಯದಿಂದ ನೋಡುವಂಥ ಕುಂಭಮೇಳ.ವಿದೇಶಿಗರ ಗಮನವೂ ಸೆಳೆದಿದೆ.ವಿಶ್ವಗುರು ಭಾರತ ಎಂಬುದಕ್ಕೆ ಇದೊಂದು ಸಾಕ್ಷಿ. ಎಲ್ಲರೂ ಒಂದೇ ಎಂಬ ಭಾವ ಜೋಡಿಸಿದ ಕುಂಭಮೇಳ. ಯಶಸ್ಸಿಗೆ ಉತ್ತರ ಪ್ರದೇಶದ ಆದಿತ್ಯ ನಾಥರ ತಂಡ ಕಾರಣ. ತಾಯಿ ಹೃದಯದಿಂದ ಕೆಲಸ ಮಾಡಲಾಗಿದೆ. ವಿಶೇಷ ಮಾರ್ಗದರ್ಶನ ಪ್ರಧಾನಿ ಮೋದಿಯವರದ್ದು. ಸಮಸ್ತ ಹಿಂದೂ ಸಮಾಜದ ಪರವಾಗಿ ಅಭಿನಂದನೆಗಳು.
ನೀರು, ಆಹಾರ, ನೈರ್ಮಲ್ಯದ ತೊಂದರೆ ಆಗಲೇ ಇಲ್ಲ. ಪ್ರಶ್ನಿಸುವುದೇ ಮಹಾಪಾಪ. ಪ್ರಶ್ನಿಸುವವರು ಹೋಗಿ ಬರಬೇಕಿತ್ತು. ನದಿಯ ನೀರಿನ ತಿಳಿ ಅರ್ಥವಾಗುತ್ತಿತ್ತು.
ರಕ್ಷಣಾ, ಪೌರ ಕಾರ್ಮಿಕರು, ನಾಗರೀಕ ಸಮಾಜದ ಕೊಡುಗೆ ಮರೆಯುವಂತಿಲ್ಲ.
ನಮ್ಮ ರಾಜ್ಯ ಸರ್ಕಾರ ಗಡಿ ನಿರ್ಬಂಧ ಕೆಲವರಿಗೆ ಹಾಕಿರುವುದು ದುರ್ದೈವದ ಸಂಗತಿ. ಅಕ್ಷಮ್ಯ. ಪ್ರಮೋದ್ ಮುತಾಲಿಕ್ ಏನು ತಾನೇ ಅಪರಾಧ ಮಾಡಿದ್ದಾರೆ. ಒಂದೂ ಶಿಕ್ಷೆ ಆಗದಿದ್ದರೂ ತಡೆದಿದ್ದಾರೆ. ಮಧ್ಯ ರಸ್ತೆಯಲ್ಲಿ ನಿಲ್ಲಿಸಿ ಎಳೆದಾಡ್ತೀರಿ. ಶಿವಮೊಗ್ಗಕ್ಕೆ ಬಂದ ಕೂಡಲೇ ರಾಗಿಗುಡ್ಡದ ಬಳಿ ತಡೆಯಲಾಗಿದೆ. ಪುಸ್ತಕ ಬಿಡುಗಡೆಗೆ ಬಂದಿದ್ರು. ಅದನ್ನು ತಡೆಯಲಾಗಿದೆ.ಲವ್ ಜಿಹಾದ್ ಪುಸ್ತಕ ಬಿಡುಗಡೆ ಮಾಡೋದು ಅಪರಾಧಾನಾ? ರಕ್ಷಣಾಧಿಕಾರಿಗಳು ಯಾರ ಮಾತು ಕೇಳ್ತಿದ್ದಾರೆ? ಬೆಂಕಿ ಹಚ್ಚೋಕೆ ನಾವೂ ಬಿಡೋಲ್ಲ.
ಕಠಿಣ ಕ್ರಮ ಯಾವುದರ ವಿರುದ್ಧ ತೆಗೆದುಕೊಂಡಿದ್ದೀರಿ? ಮರಳು ಮಾಫಿಯಾ, ಡ್ರಗ್ ಮಾಫಿಯಾದವರನ್ನ ಕೈ ಬಿಡ್ತೀರಿ. ಪುಸ್ತಕ ಬಿಡುಗಡೆ ಮಾಡಲು ಬಂದ ಹಿಂದೂ ನಾಯಕರ ವಿರುದ್ಧದ ದುರ್ವರ್ತನೆಗೆ ಖಂಡಿಸ್ತೇನೆ. ಒತ್ತಡಕ್ಕೆ ಮಣಿದಿದ್ದಾರೆ ರಕ್ಷಣಾಧಿಕಾರಿಗಳು.
ಪತ್ರಕರ್ತರ ಪ್ರಶಸ್ತಿಗೆ ಅಭಿನಂದನೆಗಳು.
ವಿನಾಯಕ ಬಾಯರಿ ನಿಧನಕ್ಕೆ ಸಂತಾಪ.
ಆಶ್ರಯ ನಿವೇಶನದ ಹೆಸರಲ್ಲಿ ಹಣ ಎತ್ತಿರೋರು ಪಾಪದ ಕೃತ್ಯ ಎಸಗಿದ್ದಾರೆ. ಜೂನ್ ಒಳಗೆ ಮೂಲಭೂತ ಸೌಲಭ್ಯ. 3000 ಮನೆಗಳಿಗೆ ಬೇಕಾದ ವಿದ್ಯುತ್ ಗೆ ಸೂಕ್ತ ಕ್ರಮ. ಉಳಿದ 574 ಮನೆಗಳು ಮೂರ್ನಾಲ್ಕು ತಿಂಗಳಲ್ಲಿ ಪೂರ್ಣ. ಒಂದು ವರ್ಷದಲ್ಲಿ ಸಂಪೂರ್ಣ ಮನೆಗಳ ವಿತರಣೆ.