ಶಿವಮೊಗ್ಗ ಜಿಲ್ಲಾ ವಕ್ಫ್ ಅಧಿಕಾರಿ ಮೆಹತಾಬ್ ಬದಲಾವಣೆಗೆ ಒತ್ತಾಯಿಸಿ ಪ್ರತಿಭಟನೆ

ಶಿವಮೊಗ್ಗ ಜಿಲ್ಲಾ ವಕ್ಫ್ ಅಧಿಕಾರಿ ಮೆಹತಾಬ್ ಬದಲಾವಣೆಗೆ ಒತ್ತಾಯಿಸಿ ಪ್ರತಿಭಟನೆ

ಶಿವಮೊಗ್ಗ ಜಿ

ಲ್ಲಾ ವಕ್ಪ್ ಕಚೇರಿಯ ಎಫ್.ಡಿ.ಎ. ಅವರನ್ನು ವರ್ಗಾವಣೆಗೊಳಿಸಬೇಕು ಎಂದು ಆಗ್ರಹಿಸಿ ಮುಸ್ಲಿಂ ಸಮುದಾಯದವರು ಇಂದು ಮುಸ್ಲಿಂ ಹಾಸ್ಟೆಲ್ ಮುಂಭಾಗ ವಕ್ಫ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾ ವಕ್ಫ್ ಕಚೇರಿಯಲ್ಲಿ ಎಫ್.ಡಿ.ಎ. ಆಗಿರುವ ಮೆಹತಾಬ್ ಅವರು ಹಂಗಾಮಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜನರಿಗೆ ಸ್ಪಂದನೆ ನೀಡುತ್ತಿಲ್ಲ. ಸಾರ್ವಜನಿಕರ ಕೆಲಸಗಳು ಸಮಯಕ್ಕೆ ಸರಿಯಾಗಿ ನಡೆಯುತ್ತಿಲ್ಲ. ಅಧಿಕಾರಿ ತನ್ನ ಜವಾಬ್ದಾರಿಯನ್ನೇ ಮರೆತಿದ್ದಾರೆ. ಆದ್ದರಿಂದ ಇವರನ್ನು ವರ್ಗಾವಣೆಗೊಳಿಸಿ ಕಚೇರಿಗೆ ಕಾಯಂ ಆಗಿ ಪ್ರಾಮಾಣಿಕ ಅಧಿಕಾರಿ ನೇಮಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ವಕ್ಫ್ ಮಂಡಳಿ ಮಾಜಿ ಉಪಾಧ್ಯಕ್ಷ ರೆಹಮತ್ ಉಲ್ಲಾ ರೆಹಮತಿ, ಮುಸ್ಲಿಂ ಹಾಸ್ಟೆಲ್ ಮಾಜಿ ಅಧ್ಯಕ್ಷ ಮೊಹಮ್ಮದ್ ಆರೀಫ್ ವುಲ್ಲಾ, ಪ್ರಮುಖರಾದ ಮೊಹಮ್ಮದ್, ಸಲೀಂ, ನಾಸೀರ್ ಇದ್ದರು