12 ಮನೆಗಳ್ಳತನ ಪ್ರಕರಣ ಬೇಧಿಸಿದ ಆನಂದಪುರಂ ಪೊಲೀಸರು* *32,23,688₹ ಮೌಲ್ಯದ ಮಾಲು ವಶಕ್ಕೆ* *ಆನಂದಪುರಂ- ಸಾಗರ- ರಿಪ್ಪನ್ ಪೇಟೆ- ಹೊಸನಗರ- ಮಾಳೂರಿನ ಮನೆಗಳಲ್ಲಿ ಕಳ್ಳತನ ಪ್ರಕರಣಗಳು*
*12 ಮನೆಗಳ್ಳತನ ಪ್ರಕರಣ ಬೇಧಿಸಿದ ಆನಂದಪುರಂ ಪೊಲೀಸರು*
*32,23,688₹ ಮೌಲ್ಯದ ಮಾಲು ವಶಕ್ಕೆ*
*ಆನಂದಪುರಂ- ಸಾಗರ- ರಿಪ್ಪನ್ ಪೇಟೆ- ಹೊಸನಗರ- ಮಾಳೂರಿನ ಮನೆಗಳಲ್ಲಿ ಕಳ್ಳತನ ಪ್ರಕರಣಗಳು*

ಆನಂದಪುರಂ ಮನೆಗಳ್ಳರಿಬ್ಬರನ್ನು ಪೊಲೀಸರು ಬಂಧಿಸಿದ್ದು, ಒಟ್ಟು 12 ಮನೆಗಳ್ಳತನ ಪ್ರಕರಣಗಳನ್ನು ಬೇಧಿಸಿ 30.96 ಲಕ್ಷ ₹ ಗಳ ಮೌಲ್ಯದ ಚಿನ್ನ, 27,688 ₹ ಗಳ ಮೌಲ್ಯದ ಬೆಳ್ಳಿ, ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
*ಆನಂದಪುರ* ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ *ಮನೆಗಳ್ಳತನ* ಪ್ರಕರಣಗಳಲ್ಲಿ, *ಆರೋಪಿತರು ಹಾಗೂ ಮಾಲು* ಪತ್ತೆಗಾಗಿ ಮಿಥುನ್ ಕುಮಾರ್ ಜಿ. ಕೆ. ಐ.ಪಿ.ಎಸ್* ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಅನಿಲ್ ಕುಮಾರ್ ಭೂಮರೆಡ್ಡಿ* ಹೆಚ್ಚುವರಿ ಪೊಲೀಸ್ ಅಧೀಕ್ಷಕರು 1 ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ. ಜಿ.* ಹೆಚ್ಚುವರಿ ಪೊಲೀಸ್ ಅಧೀಕ್ಷಕರು 2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಗೋಪಾಲಕೃಷ್ಣ ಟಿ ನಾಯ್ಕ* ಪೊಲೀಸ್ ಉಪಾಧೀಕ್ಷಕರು ಸಾಗರ ಉಪವಿಭಾಗರವರ ಮೇಲ್ವಿಚಾರಣೆಯಲ್ಲಿ, ಸಂತೋಷ್ ಶೆಟ್ಟಿ,* ಸಿಪಿಐ, ಸಾಗರ ಗ್ರಾಮಾಂತರ ವೃತ್ತ ರವರ ನೇತೃತ್ವದಲ್ಲಿ ಯುವರಾಜ. ಕೆ* ಪಿಎಸ್ಐ ಆನಂದಪುರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳಾದ ಸಿ.ಹೆಚ್.ಸಿ ಅಶೋಕ್, ಪರಶುರಾಮ, ಸಿಪಿಸಿ ಉಮೇಶ್ ಲಮಾಣಿ, ಸಂತೋಷಕುಮಾರ, ನೂತನ್, ನಿರಂಜನ್,
ಸುಬ್ರಮಣ್ಯ.ಎಸ್, ಭರತ್ ಕುಮಾರ್ ಹಾಗೂ ಶಿವಮೊಗ್ಗ *ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ* ಸಿಬ್ಬಂದಿಯಾದ ಇಂದ್ರೇಶ್, ವಿಜಯ್ ಕುಮಾರ್, ಮತ್ತು ಚಾಲಕರಾದ ಎ.ಆರ್.ಎಸ್.ಐ ನರಸಿಂಹಸ್ವಾಮಿ ಮತ್ತು ಎ.ಹೆಚ್.ಸಿ ಸತೀಶ್ ರವರುಗಳನ್ನು ಒಳಗೊಂಡ *ವಿಶೇಷ ತನಿಖಾತಂಡವನ್ನು* ರಚಿಸಲಾಗಿತ್ತು.
ಈ ತನಿಖಾ ತಂಡವು ಪ್ರಕರಣದ ಆರೋಪಿ ಅಶೋಕ ಕೆ, 42 ವರ್ಷ, ವ್ಯವಸಾಯ ಕೆಲಸ, ಬಸವಾಪುರ ಗ್ರಾಮ, ಹಾರೋಹಿತ್ಲು ಹೊಸನಗರ ಮತ್ತು ಚಂದ್ರ @ ಚಂದ್ರಹಾಸ, 33 ವರ್ಷ, ಚಿನ್ನಬೆಳ್ಳಿ ತಯಾರಿಕಾ ಕೆಲಸ, ಹಾರ್ನಳ್ಳಿ ಗ್ರಾಮ, ಶಿವಮೊಗ್ಗ* ಇವರುಗಳನ್ನು ದಸ್ತಗಿರಿ ಮಾಡಿ, ಆರೋಪಿತರನ್ನು ವಿಚಾರಣೆಗೆ ಓಳಪಡಿಸಿದಾಗ *ಆರೋಪಿ ಅಶೋಕ ಕೆ* ಈತನು ತಾನು ಕಳ್ಳತನ ಮಾಡಿದ ಬೆಳ್ಳಿ ಹಾಗೂ ಬಂಗಾರದ ಆಭರಣಗಳಲ್ಲಿ ಕೆಲವು ಆಭರಣಗಳನ್ನು *ಆರೋಪಿ ಚಂದ್ರ @ ಚಂದ್ರಹಾಸ ಈತನಿಗೆ ಮಾರಾಟ* ಮಾಡಿದ್ದು, ಬಾಕಿ ಉಳಿದ ಆಭರಣಗಳನ್ನು *ಬ್ಯಾಂಕಿನಲ್ಲಿ ಅಡಮಾನ ಇಟ್ಟಿರುವುದು* ಕಂಡುಬಂದಿದ್ದು, ನಂತರ ಸದರಿ ಆರೋಪಿತರಿಂದ *ಆನಂದಪುರ* ಪೊಲೀಸ್ ಠಾಣೆಯ 4, *ಸಾಗರ ಪೇಟೆ* ಪೊಲೀಸ್ ಠಾಣೆಯ 1
*ರಿಪ್ಪನ್‌ಪೇಟೆ* ಪೊಲೀಸ್ ಠಾಣೆಯ 5, *ಹೊಸನಗರ* ಪೊಲೀಸ್ ಠಾಣೆಯ 1 ಮತ್ತು *ಮಾಳೂರು* ಪೊಲೀಸ್ ಠಾಣೆಯ 1 ಪ್ರಕರಣ ಸೇರಿ *ಒಟ್ಟು 12 ಮನೆಗಳ್ಳತನ* ಪ್ರಕರಣಗಳಿಗೆ ಸಂಬಂಧಿಸಿದ *ಅಂದಾಜು ಮೌಲ್ಯ 30,96,000/- ರೂಗಳ 387 ಗ್ರಾಂ ಚಿನ್ನದ* ಆಭರಣ, *ಅಂದಾಜು ಮೌಲ್ಯ 27,688/- ರೂಗಳ 384 ಗ್ರಾಂ ಬೆಳ್ಳಿ* ಆಭರಣ ಹಾಗೂ *ಅಂದಾಜು ಮೌಲ್ಯ 1,00,000/- ರೂ ಗಳ ಕೃತ್ಯಕ್ಕೆ ಬಳಸಿದ 2 ಬೈಕ್ ಗಳು* ಸೇರಿ *ಒಟ್ಟು 32,23,688/- ರೂಗಳ* ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
*ತನಿಖಾ ತಂಡದ ಉತ್ತಮವಾದ* ಕಾರ್ಯವನ್ನು * ಪೋಲಿಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆಯವರು ಪ್ರಶಂಸಿಸಿ ಅಭಿನಂದಿಸಿದ್ದಾರೆ.