ಹೈಕೋರ್ಟ್ ಆದೇಶ ಉಲ್ಲಂಘಿಸಿ ಮುಸ್ಲೀಮರ ಪ್ರತಿಭಟನೆ;* *ಕೂಡಲೇ ಮುಸ್ಲಿಂ ಮುಖಂಡರ ವಿರುದ್ಧ ಎಫ್ ಐ ಆರ್ ದಾಖಲಿಸಲು ಎಸ್ ಪಿ ಗೆ ಭೇಟಿ ಮಾಡಿದ ಬಿಜೆಪಿ* *ಯಾರ ಯಾರ ವಿರುದ್ಧ ಎಫ್ ಐ ಆರ್ ಗೆ ಒತ್ತಾಯ? ಇಲ್ಲಿದೆ ಸಂಪೂರ್ಣ ವಿವರ…*
*ಹೈಕೋರ್ಟ್ ಆದೇಶ ಉಲ್ಲಂಘಿಸಿ ಮುಸ್ಲೀಮರ ಪ್ರತಿಭಟನೆ;*
*ಕೂಡಲೇ ಮುಸ್ಲಿಂ ಮುಖಂಡರ ವಿರುದ್ಧ ಎಫ್ ಐ ಆರ್ ದಾಖಲಿಸಲು ಎಸ್ ಪಿ ಗೆ ಭೇಟಿ ಮಾಡಿದ ಬಿಜೆಪಿ*
*ಯಾರ ಯಾರ ವಿರುದ್ಧ ಎಫ್ ಐ ಆರ್ ಗೆ ಒತ್ತಾಯ? ಇಲ್ಲಿದೆ ಸಂಪೂರ್ಣ ವಿವರ…*
ಜಿಲ್ಲಾಧಿಕಾರಿಗಳ ಕಚೇರಿ ಎದುರು ಇರುವ ಮಹಾನಗರ ಪಾಲಿಕೆ ವ್ಯಾಪ್ತಿಯ ಜಾಗದಲ್ಲಿ, 03 ಮೇ 2025ರಂದು, ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಮತ್ತು ಉಚ್ಚ ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಿ, ಸರ್ಕಾರದ ಅನುಮತಿ ಇಲ್ಲದೆ ಕಾನೂನುಬಾಹಿರವಾಗಿ ಪ್ರತಿಭಟನೆ ನಡೆಸಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನದವರೆಗೆ ಸಾರ್ವಜನಿಕ ಓಡಾಟಕ್ಕೆ ಅಡ್ಡ ಪಡಿಸಿದ್ದಲ್ಲದೇ ಪ್ರಚೋದನಾತ್ಮಕ ಭಾಷಣಗಳ ಮೂಲಕ ಸಾರ್ವಜನಿಕ ಶಾಂತಿಗೆ ಭಂಗ ತರುವ ರೀತಿಯಲ್ಲಿ ನಡೆದಿರುವುದು ಗಂಭೀರ ವಿಷಯವಾಗಿದೆ. ಕೂಡಲೇ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಶಿವಮೊಗ್ಗ ನಗರ ಬಿಜೆಪಿ ಜಿಲ್ಲಾರಕ್ಷಣಾಧಿಕಾರಿಗಳಿಗೆ ಭೇಟಿ ಮಾಡಿ ಒತ್ತಾಯಿಸಿದೆ.
ಕಾನೂನುಬಾಹಿರವಾಗಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿ ನಾರ್ವಜನಿಕ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಾ ಪ್ರಚೋದನಾ ಭಾಷಣಗಳನ್ನು ಮಾಡಿದ್ದು, ಆ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳು ಸಹ ಈ ಪ್ರತಿಭಟನೆಯನ್ನು ತಡೆಯದೇ ಪರೋಕ್ಷವಾಗಿ ಸರ್ಕಾರವು ಪ್ರತಿಭಟನೆಗೆ ಅವಕಾಶ ಕಲ್ಪಿಸಿಕೊಟ್ಟು ಪ್ರತಿಭಟನಾಕಾರರಿಗೆ ರಕ್ಷಣೆಯನ್ನು ನೀಡಿದೆ ಎಂದು ದೂರಿನಲ್ಲಿದೆ.
ಈ ಬಗ್ಗೆ ಕೂಡಲೇ ತಪ್ಪಿತಸ್ಥರೆಲ್ಲರ ವಿರುದ್ಧವಾಗಿ ಎಫ್ ಐ. ಆರ್ ದಾಖಲಿಸಿ ಕ್ರಿಮಿನಲ್ ಮೊಕದ್ದಮೆಯನ್ನು ಹೂಡುವಂತೆ ಆಗ್ರಹಪಡಿಸಿದರು.
ಈ ಬಗ್ಗೆ ಯಾವುದೇ ಕ್ರಮವನ್ನು ಜರುಗಿಸದಿದ್ದಲ್ಲಿ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಬಗ್ಗೆ ಇರುವ ನಂಬಿಕೆ ಹೊರಟು ಹೋಗುತ್ತದೆ. ನ್ಯಾಯಾಲಯದ ಆದೇಶ ಗಾಳಿಗೆ ತೂರುವ ಈ ವ್ಯಕ್ತಿಗಳ ವಿರುದ್ಧ ಕ್ರಮ ಅಗತ್ಯವಾಗಿದೆ. ಆದ ಕಾರಣ, ಈ ಪ್ರತಿಭಟನೆಯಲ್ಲಿ ಭಾಗವಾಹಿಸಿದ ಎಸ್ ವೈ ಓ ಕಾರ್ಯದರ್ಶಿ ಶಾಹುಲ್ ಹಮೀದ್ ಮುಸ್ಲಿಯಾರ್, ಜಾಮಿಯಾ ಮಸೀದಿ ಮೌಲ್ವಿ ಮುಫ್ತಿ ಅಖ್ವಿಲ್ ರಝೂ, ಎಬಿಸಿಆರ್ ರಾಜ್ಯಾಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ, ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು, ಮಾರ್ಕಜೆ ಸುನ್ನೀ ಜಮಾಯತ್ ಮಸೀದಿಯ ಉಪಾಧ್ಯಕ್ಷ ಮೊಹಮ್ಮದ್ ಇರ್ಫಾನ್ ಖಾನ್, ಸುನ್ನಿ ಜಮಾತ್ ಉಲಮಾ ಕಮಿಟಿ ಕಾರ್ಯದರ್ಶಿ ಏಜಾಜ್ ಪಾಷಾ, ಮುಜಹರ್ ಉಲ್ ಉಲೂಮ್‌ನ ಮುಫ್ತಿ ಸಯ್ಯದ್ ಮಜೀಬುಲ್ಲಾ, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ಮುಫ್ತಿ ಮೊಹಮ್ಮದ್ ಶಫಿಯುಲ್ಲಾ ಖಾಸ್ಮಿ, ಜಮಾತ್ ಆಹ್ಲೆ ಹದೀಸ್‌ನ ಶೇಖ್ ಆಲಿ, ಜಮಾತ್ ಇಸ್ಲಾಮಿ ಹಿಂದ್‌ನ ಶಿವಮೊಗ್ಗದ ಕಾರ್ಯದರ್ಶಿ ಮೌಲಾನಾ ಹಾಮಿದ್ ಉಮರಿ, ಮರ್ಕಝ್ ಸ ಅದನ ಪ್ರಾಂಶುಪಾಲ ಮೌಲಾನಾ ಅಬ್ದುಲ್ ಜಬ್ಬಾರ್ ಸಾದಿ, ಇವರುಗಳ ವಿರುದ್ಧ ಕೂಡಲೇ ಎಫ್‌ಐಆರ್ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ದೂರನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಜಗದೀಶ್ ಕೆ.ಏನ್, ನಗರಾಧ್ಯಕ್ಷರಾದ ಮೋಹನ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹರಿಕೃಷ್ಣ, ನಗರ ಪ್ರಧಾನ ಕಾರ್ಯದರ್ಶಿಗಳಾದ ದೀನ್ ದಯಾಳ್ ಹಾಗೂ ಮಂಜುನಾಥ್ ನವಲೆ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.