ಲಂಚಕ್ಕೆ ಕೈಯೊಡ್ಡಿ ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಕುಮಾರ ನಾಯ್ಕ ಲೋಕಾಯುಕ್ತ ಖೆಡ್ಡಾಕ್ಕೆ…* 3 ಸಾವಿರಕ್ಕೆ ಬಲಿಬಿದ್ದ ಕಾರ್ಯದರ್ಶಿ

*ಲಂಚಕ್ಕೆ ಕೈಯೊಡ್ಡಿ ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಕುಮಾರ ನಾಯ್ಕ ಲೋಕಾಯುಕ್ತ ಖೆಡ್ಡಾಕ್ಕೆ…*

3 ಸಾವಿರಕ್ಕೆ ಬಲಿಬಿದ್ದ ಕಾರ್ಯದರ್ಶಿ

ಶಿವಮೊಗ್ಗದ ಶ್ರೀರಾಮಪುರ ಗ್ರಾಮದ ವಿನೋದ ಬಿ. ಬಿನ್ ನೀಡಿದ ದೂರಿನ ಮೇರೆಗೆ ದಾಳಿ ಮಾಡಿದ ಲೋಕಾಯುಕ್ತ ಮುದ್ದಿನ ಕೊಪ್ಪ ಗ್ರಾಮ ಪಂಚಾಯ್ತಿಯ ಕಾರ್ಯದರ್ಶಿ ಕುಮಾರ ನಾಯ್ಕನನ್ನು ಖೆಡ್ಡಾಕ್ಕೆ ಕೆಡವಿ ಜೈಲಿನ ದಾರಿ ತೋರಿಸಿದ ಘಟನೆ ನಡೆದಿದೆ.

ಶಿವಮೊಗ್ಗ ತಾಲ್ಲೂಕು ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶ್ರೀರಾಮಪುರ ಗ್ರಾಮದ 1ನೇ ಕ್ರಾಸ್‌ನಲ್ಲಿ ತನ್ನ ತಾಯಿಯಾದ ಶ್ರೀಮತಿ ಶಂಕರಿರವರ ಹೆಸರಿನಲ್ಲಿನ 30X50 ಅಳತೆಯ ಸೈಟಿನಲ್ಲಿ 23X38 ಅಡಿ ಅಳತೆಯಲ್ಲಿ ಆರ್.ಸಿ.ಸಿ.ಮನೆಯನ್ನು ಕಟ್ಟದ್ದು, ಸದರಿ ಮನೆಯ ಇ-ಸ್ವತ್ತು ಮಾಡಿಸಲು ದೂರುದಾರನ ತಾಯಿಯವರು ದಿನಾಂಕ:- 28-11-2024 ರಂದು ಶಿವಮೊಗ್ಗ ತಾಲ್ಲೂಕು ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ಕಛೇರಿಗೆ ಹೋಗಿ ಅರ್ಜಿಯನ್ನು ಸಲ್ಲಿಸಿದ್ದರು

ಈ ಬಗ್ಗೆ ದೂರುದಾರರು ಇ-ಸ್ವತ್ತು ಮಾಡಿಕೊಡುವಂತೆ ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯವರಾದ ಕುಮಾರನಾಯ್ಕ ರವರ ಬಳಿ ಹಲವು ಬಾರಿ ಹೋದಾಗ ಕುಮಾರನಾಯ್ಕ ರವರು ಇ-ಸ್ವತ್ತು ಮಾಡಿಕೊಡದೆ ಓಡಾಡಿಸುತ್ತಿದ್ದು ನಂತರ ರೂ 3000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು ಸಂಭಾಷಣೆಯನ್ನು ಪಿರ್ಯಾದುದಾರರು ವಾಯ್ಸ್ ರೆಕಾರ್ಡ್ ಅನ್ನು ಮಾಡಿಕೊಂಡಿರುತ್ತಾರೆ ಮತ್ತು ಪಿರ್ಯಾದುದಾರರಿಗೆ ಲಂಚದ ಹಣವನ್ನು ಕೊಡಲು ಇಷ್ಟವಿಲ್ಲದೆ ಇರುವುದರಿಂದ ಸದರಿ ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಕುಮಾರನಾಯ್ಕ ರವರ ವಿರುದ್ಧ ಕಾನೂನು ಕ್ರಮಕ್ಕೆ ದೂರು ನೀಡಿದ ಮೇರೆಗೆ ಕಲಂ 7(೩) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ ಕಾಯ್ದೆ-2018) ರೀತ್ಯಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇಂದು ಮದ್ಯಾಹ್ನ 02-10 ಗಂಟೆ ಸಮಯದಲ್ಲಿ ಅಪಾದಿತರಾದ ಕುಮಾರನಾಯ್ಕ, ಗ್ರಾಮ ಪಂಚಾಯ್ತಿ ಕಾರ್ಯದರ್ಶಿ, ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ರವರು ಪಿರ್ಯಾದಿಯವರಿಂದ ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯವರ ಕೊಠಡಿಯಲ್ಲಿ ರೂ 3000/- ಲಂಚದ ಹಣವನ್ನು ತೆಗೆದುಕೊಂಡಿದ್ದು, ಈ ಸಮಯದಲ್ಲಿ ಟ್ರ್ಯಾಪ್ ಮಾಡಲಾಗಿದೆ. ಲಂಚದ ಹಣವನ್ನು ಜಪ್ತಿ ಪಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾದಿತ ಸರ್ಕಾರಿ ನೌಕರನಾದ ಕುಮಾರನಾಯ್ಕನನ್ನು ವಶಕ್ಕೆ ಪಡೆದು ಪ್ರಕರಣದ ತನಿಖೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಗುರುರಾಜ್ ಎನ್ ಮೈಲಾರ ಪೊಲೀಸ್ ನಿರೀಕ್ಷಕರು ಕೈಗೊಂಡಿದ್ದಾರೆ.

ಈ ಟ್ರ್ಯಾಪ್‌ ಕಾರ್ಯಚರಣೆಯನ್ನು ಮಂಜುನಾಥ ಚೌದರಿ ಎಂ.ಹೆಚ್. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ ಬಿ.ಪಿ ಚಂದ್ರಶೇಖರ್, ಪೊಲೀಸ್ ಉಪಾಧೀಕ್ಷಕರು, ಗುರುರಾಜ್ ಎನ್ ಮೈಲಾರ್ ಪೊಲೀಸ್ ನಿರೀಕ್ಷಕರು ಕಾರ್ಯಚರಣೆಯನ್ನು ನಡೆಸಿದ್ದು, ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ರುದ್ರೇಶ್ ಕೆ.ಪಿ ಪೊಲೀಸ್ ಇನ್ಸ್ಪೆಕ್ಟರ್, ಪೊಲೀಸ್ ಸಿಬ್ಬಂದಿಯವರಾದ ಯೋಗೇಶ್, ಸಿ.ಹೆಚ್.ಸಿ, ಟೀಕಪ್ಪ ಸಿ.ಹೆಚ್.ಸಿ ಸುರೇಂದ್ರ ಸಿ.ಹೆಚ್.ಸಿ. ಮಂಜುನಾಥ್ ಸಿ.ಹೆಚ್.ಸಿ. ಬಿ.ಟಿ ಚನ್ನೇಶ್, ಸಿ.ಪಿ.ಸಿ, ದೇವರಾಜ್, ಸಿ.ಪಿ.ಸಿ ಪ್ರಕಾಶ್ ಬಾರಿದಮರ, ಸಿ.ಪಿ.ಸಿ. ಅರುಣ್ ಕುಮಾರ್ ಯು.ಬಿ ಸಿ.ಪಿ.ಬಿ ಅಂಜಲಿ ಮ.ಪಿ.ಸಿ, ಚಂದ್ರಿಬಾಯಿ ಮ.ಪಿ.ಸಿ ಗೋಪಿ ಎ.ಪಿ.ಸಿ , ಪ್ರದೀಪ್ ಎ.ಹೆಚ್.ಸಿ ಜಯಂತ್ ಎ.ಪಿ.ಸಿ ರವರುಗಳು ಹಾಜರಿದ್ದರು.