*ಆ.3 ರಂದು ಉದ್ಘಾಟನೆಗೊಳ್ಳಲಿದೆ ಸಕರ್ಣ ಸ್ಪೀಚ್ ಅಂಡ್ ಹಿಯರಿಂಗ್ ಸೆಂಟರ್*

*ಆ.3 ರಂದು ಉದ್ಘಾಟನೆಗೊಳ್ಳಲಿದೆ ಸಕರ್ಣ ಸ್ಪೀಚ್ ಅಂಡ್ ಹಿಯರಿಂಗ್ ಸೆಂಟರ್*

ಸಕರ್ಣ ಸ್ಪೀಚ್ ಅಂಡ್ ಹಿಯರಿಂಗ್ ಸೆಂಟರ್ ಸಕರ್ಣ ವಾಕ್ ಮತ್ತು ಶ್ರವಣ ಕೇಂದ್ರದ ಉದ್ಘಾಟನೆಯನ್ನು ಆ.3 ರಂದು ಹಮ್ಮಿಕೊಂಡಿದ್ದೇವೆಂದು ವೆಂಕಟೇಶ್ ನಾಯಕ್ ಮತ್ತು ಶ್ರೀಮತಿ ಸಾಧನಾ ಮಲ್ಲಿಕಾರ್ಜುನ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಶ್ರವಣ ಮತ್ತು ಮಾತಿನ ಸಮಸ್ಯೆಗಳಿಗೆ ಹೊಸ ಆಶಾಕಿರಣ ಇದಾಗಲಿದೆ ಎಂದರು.

ಶ್ರವಣ ಮತ್ತು ಮಾತಿನ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಉತ್ತಮ ಗುಣಮಟ್ಟದ ಸೇವೆ ನೀಡುವ ಉದ್ದೇಶದಿಂದ, ಸಕರ್ಣ ವಾಕ್ ಮತ್ತು ಶ್ರವಣ ಕೇಂದ್ರವನ್ನು ಆ. 3ರಂದು ಹೆಚ್ ಸಿ.ಕಾಳಪ್ಪ ಕಾಂಪೌಂಡ್, ಡಾ|| ಸಿ.ಎಲ್. ರಾಮಣ್ಣ ರಸ್ತೆ, ಶಿವಮೊಗದಲ್ಲಿ ಉದ್ಘಾಟಿಸಲಾಗುವುದು. ಸಕರ್ಣ ವಾಕ್ ಮತ್ತು ಶ್ರವಣ ಕೇಂದ್ರವು ಶ್ರವಣದೋಷ, ಮಾತಿನ ತೊಂದರೆಗಳು, ನುಂಗುವ ಸಮಸ್ಯೆಗಳು, ಮತ್ತು ಇತರ ಸಂಬಂಧಿತ ಸಮಸ್ಯೆಗಳಿಗೆ ನಿಖರವಾದ ರೋಗನಿರ್ಣಯ ಮತ್ತು ಸಮಗ್ರ ಚಿಕಿತ್ಸೆ ನೀಡಲು ಮೀಸಲಾಗಿದೆ.

ಈ ಕೇಂದ್ರವು ಆಧುನಿಕ ತಂತ್ರಜ್ಞಾನ ಮತ್ತು ನುರಿತ ವಾಕ್ ಮತ್ತು ಶ್ರವಣ ತಜ್ಞರನ್ನು ಒಳಗೊಂಡಿದೆ.

ಕೇಂದ್ರದ ಉದ್ಘಾಟನೆಯನ್ನು ಬಿ. ವೈ. ರಾಘವೇಂದ್ರ (ಲೋಕಸಭಾ ಸದಸ್ಯರು, ಶಿವಮೊಗು ರವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್.ಎನ್.ಚನ್ನಬಸಪ್ಪ (ಚೆನ್ನಿ) ( ವಿಧಾನ ಸಭಾ ಸದಸ್ಯರು, ಶಿವಮೊಗ್ಗ ನಗರ) ಹಾಗೂ ಡಾ|| ಧನಂಜಯ ಸರ್ಜಿ ( ವಿಧಾನ ಪರಿಷತ್ ಸದಸ್ಯರು) ಆಗಮಿಸಲಿದ್ದಾರೆ.

ಸಕರ್ಣ ವಾಕ್ ಮತ್ತು ಪುವಣ ಕೇಂದ್ರದಲ್ಲಿ ಲಭ್ಯವಿರುವ ಸೇವೆಗಳು:

1. ಎಲ್ಲಾ ವಯಸ್ಸಿನವರಿಗೆ ಶ್ರವಣ ಪರೀಕ್ಷೆ (ನಿಂಗ್ ಮತ್ತು ಡಯಾಗೋಸ್ಟಿಕ್) – ನವಜಾತ ಶಿಶುವಿನಿಂದ ವಯಸ್ಕರವರೆಗೆ.

2. ಶ್ರವಣ ಸಾಧನ ಪ್ರಯೋಗ

3. ಶ್ರವಣ ಸಾಧನ ಅಳವಡಿಕೆ

4. ಶ್ರವಣ ಸಾಧನ ಮೂಲಕ ಆಲಿಸಲು ತರಬೇತಿ

5. ವೆಸ್ಟಿಬುಲಾರ್ ಸಮಸ್ಯೆಗಳಿಗೆ ಚಿಕಿತ್ಸೆ

6. ಮಕ್ಕಳು ಮತ್ತು ವಯಸ್ಕರಲ್ಲಿನ ಮಾತಿನ ಸಮಸ್ಯೆಗಳ ಮೌಲ್ಯಮಾಪನ ಮತ್ತು ಚಿಕಿತ್ಸೆ ಉಚ್ಚಾರ ಸಮಸ್ಯೆ లాగువిశ…

7. ಧ್ವನಿ ಮೌಲ್ಯಮಾಪನ ಮತ್ತು ಚಿಕಿತ್ಸೆ

8. ಡಿಸ್ಸೇಜಿಯಾ ಮೌಲ್ಯಮಾಪನ ಮತ್ತು ಚಿಕಿತ್ಸೆ
ಪರಿಚಯ:

*ವೆಂಕಟೇಶ್ ನಾಯಕ್, ಎಂಎಸ್ಸಿ, ಎಂಎಲ್‌ಟಿ. ವ್ಯವಸ್ಥಾಪಕ ನಿರ್ದೇಶಕರು, ಸಕರ್ಣ ವಾಕ್ ಮತ್ತು ಶ್ರವಣ ಕೇಂದ್ರ*

ಅನುಭವ: ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞರಾಗಿ (Medical Laboratory Technologist)13 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಆ ಅನುಭವದಲ್ಲಿ, 11 ವರ್ಷಗಳ ಕಾಲ ಅವರು ದುಬೈನಲ್ಲಿ ಕೆಲಸ ನಿರ್ವಹಿಸಿದ್ದಾರೆ.

*ಸಾಧನಾ ಎಸ್ ಮಲ್ಲಿಕಾರ್ಜುನ, MASLP, ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ರೆಜ್ ಪ್ಯಾಥಾಲಜಿಸ್ಟ್*

ಅನುಭವ: 11 ವರ್ಷಗಳ ಕಾಲ ವಿವಿಧ ವಲಯಗಳಲ್ಲಿ ಆಡಿಯಾಲಜಿಸ್ಟ್ ಮತ್ತು ಸ್ಪೀಚ್ ಲ್ಯಾಂಗ್ರೆಜ್ ವ್ಯಾಥಾಲಜಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಅವರು ಬೆಂಗಳೂರಿನ ಖಾಸಗಿ ಶ್ರವಣ ಚಿಕಿತ್ಸಾಲಯ, ದಕ್ಷಿಣ ಕನ್ನಡದ ಜಿಲ್ಲಾ ಅಂಗವೈಕಲ್ಯ ಪುನರ್ವಸತಿ ಕೇಂದ್ರದಲ್ಲಿ ಕೆಲಸ ಮಾಡಿದ್ದಾರೆ. 8 ವರ್ಷಗಳ ಕಾಲ ಅವರು ದುಬೈನ ಆಸ್ಮ‌ರ್ ಆಸ್ಪತ್ರೆ ಮತ್ತು ಡಾ.ಸುಲೈಮಾನ್ ಅಲ್ ಹಬೀಬ್ ಆಸ್ಪತ್ರೆಯಲ್ಲಿ ಆಡಿಯಾಲಜಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಜುಲೈ, 2024 ರಿಂದ ಏಪ್ರಿಲ್ 2025 ರವರೆಗೆ ಅವರು ಸುಬ್ಬಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆಡಿಯಾಲಜಿಸ್ಟ್ ಮತ್ತು ಸ್ಪೀಚ್ ಲ್ಯಾಂಗ್ರೇಜ್ ಪ್ರಾಥಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು.

ಶಿವಮೊಗ್ಗ ಹಾಗೂ ಸುತ್ತಲಿನ ಜನತೆಗೆ ಉತ್ತಮ ಗುಣಮಟ್ಟದ ವಾಕ್ ಮತ್ತು ಶ್ರವಣ ಚಿಕಿತ್ಸೆ ನೀಡುವ ಉದ್ದೇಶದಿಂದ ಸಕರ್ಣ ವಾಕ್ ಮತ್ತು ಶ್ರವಣ ಕೇಂದ್ರವನ್ನು ಪ್ರಾರಂಭಿಸುತ್ತಿದ್ದೇವೆ ಎಂದರು.

ಹೆಚ್ಚಿನ ಮಾಹಿತಿಗಾಗಿ, ಸಕರ್ಣ ಸ್ಪೀಚ್ ಅಂಡ್ ಹಿಯರಿಂಗ್ ಸೆಂಟರ್ ಅನ್ನು ದೂರವಾಣಿ ಸಂಖ್ಯೆ 7676554125 ಮೂಲಕ ಸಂಪರ್ಕಿಸಬಹುದು.

*ಸಂವರ್ಕ ಮಾಹಿತಿ;*
ವೆಂಕಟೇಶ್ ನಾಯಕ್, ವ್ಯವಸ್ಥಾಪಕ ನಿರ್ದೇಶಕರು, ಸಕರ್ಣ ಸ್ಪೀಚ್ ಅಂಡ್ ಹಿಯರಿಂಗ್ ಸೆಂಟರ್
(Mob: 9611976121)

ಸುದ್ದಿಗೋಷ್ಠಿಯಲ್ಲಿ ಶಾಸಕ ಚನ್ನಬಸಪ್ಪ ಸೇರಿದಂತೆ ಹಲವರಿದ್ದರು.