ಸೀಮೆಎಣ್ಣೆಯನ್ನು ವಿತರಿಸದೆ ಅನ್ಯಾಯ; ಕೇಂದ್ರದ ವಿರುದ್ಧ ಕಿಡಿ ಕಾರಿದ ಕಲ್ಲೂರು ಮೇಘರಾಜ್*
*ಸೀಮೆಎಣ್ಣೆಯನ್ನು ವಿತರಿಸದೆ ಅನ್ಯಾಯ; ಕೇಂದ್ರದ ವಿರುದ್ಧ ಕಿಡಿ ಕಾರಿದ ಕಲ್ಲೂರು ಮೇಘರಾಜ್*
ದೇಶದ 28 ರಾಜ್ಯಗಳು ಹಾಗೂ 8 ಶೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ನೇತೃತ್ವದ ಎನ್.ಡಿ.ಎ. ಸರ್ಕಾರ ಕಳೆದ 4-5 ವರ್ಷಗಳಿಂದ ಮುಕ್ತ ಮಾರುಕಟ್ಟೆಯಲ್ಲಿ ಚಿಲ್ಲರೆ ಹಾಗೂ ಹೋಲ್‌ಸೇಲ್ ವ್ಯಾಪಾರದ ಮೂಲಕ ಜನಸಾಮಾನ್ಯರಿಗೆ ವಿಶೇಷವಾಗಿ ಪರಿಶಿಷ್ಟ ವರ್ಗ. ಅಲೆಮಾರಿಗಳಿಗೆ ಮತ್ತು ಮತ್ತು ಗುಳೇ ಹೋಗುವ ಕಾರ್ಮಿಕರಿಗೆ ಹಾಗೂ ಗುಡ್ಡಗಾಡುಗಳಲ್ಲಿ ನೆಲೆಸಿರುವ ಕುಟುಂಬಗಳಿಗೆ ಅಗತ್ಯ ಬೀಳುವ ಸೀಮೆಎಣ್ಣೆಯನ್ನು ವಿತರಿಸದೆ ಅನ್ಯಾಯ ಮಾಡುತ್ತಿದೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಪತ್ರಿಕಾಗೋಷ್ಠಿಯಲ್ಲಿ ಕಿಡಿ ಕಾರಿದರು.
ಎನ್.ಡಿ.ಎ ನೇತೃತ್ವದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಸರ್ಕಾರ ದೇಶದಲ್ಲಿ ಉಜ್ವಲ ಯೋಜನೆಯ ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸುವ ಘೋಷಣೆಯಲ್ಲಿ ಜನಸಾಮಾನ್ಯರಿಗೆ ಅಗತ್ಯವಿರುವ ಅಂದರೆ ಅಡುಗೆಗೆ ರಾತ್ರಿ ಸಮಯದಲ್ಲಿ ದೀಪ ಹೊತ್ತಿಸಿ ಬೆಳಕು ಕಾಣಲು ಸೀಮೆ ಎಣ್ಣೆಯನ್ನು ಸರಬರಾಜು ಮಾಡುವುದನ್ನೇ ನಿಲ್ಲಿಸಿ ಅಮಾಯಕ ಅಲೆಮಾರಿ ಜನಾಂಗವಾದ ಹಸಲರು, ಗೊಂಡರು. ಹಕ್ಕಿಪಿಕ್ಕಿಗಳು, ವಾಲ್ಮೀಕಿ ನಾಯಕರು, ಮೇದಾರರ ಮೇಲೆ ಸೀಮೆಎಣ್ಣೆ ಮುಕ್ತ ದೇಶ ಎನ್ನುವ ಘೋಷಣೆಯಲ್ಲಿ ಕಳೆದ 4-5 ವರ್ಷಗಳಿಂದ ಗಧಾಪ್ರಹಾರ ನಡೆಸಿದೆ ಎಂದರು.
ಇದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲಿ ಹಾಗೂ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಕರೆಯಿಸಿಕೊಳ್ಳುವ ಜನತೆಗೆ ಇದೇ ರೀತಿ ಸೀಮೆ ಎಣ್ಣೆಯನ್ನ ಪೂರೈಸದೆ ಅನ್ಯಾಯ ಮಾಡುತ್ತದೆ ಎಂದು ಹೇಳಿದರು.
ರಾಜ್ಯದಿಂದ ರಾಜ್ಯಕ್ಕೆ ಜಿಲ್ಲೆಯಿಂದ ಜಿಲ್ಲೆಗೆ, ತಾಲ್ಲೂಕಿನಿಂದ ತಾಲ್ಲೂಕಿಗೆ ಕೂಲಿಗಾಗಿ ಗುಳೇ ಹೋಗುವ ಶಾಶ್ವತ ನೆಲೆ ಇಲ್ಲದ ಹಾಗೂ ಆಧಾರ್ ಕಾರ್ಡ್, ಪಡಿತರ ಚೀಟಿ. ವೋಟರ್ ಐ.ಡಿ. ವಿದ್ಯುತ್ ಸಂಪರ್ಕವಿಲ್ಲದ ಅಸಂಘಟಿತ ಗುಳೇಹೋಗುವ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಸೀಮೆಎಣ್ಣೆ ಮುಕ್ತ ದೇಶ ಎಂದು ಘೋಷಣೆ ಮಾಡಿಕೊಳ್ಳಲು ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಸೀಮೆಎಣ್ಣೆ ಮುಕ್ತ ದೇಶವೆಂದು ಬಿರುದು ಪಡೆಯಲು ಈ ಜನವಿರೋಧಿ ನಿಲುವನ್ನು ಕಳೆದ ಸುಮಾರು 4-5 ವರ್ಷಗಳಿಂದ ತಳೆದಿದೆ.
ಗುಡ್ಡಗಾಡಿನಲ್ಲಿ ನೆಲೆಸಿರುವ ಅಮಾಯಕ ಕುಟುಂಬಗಳಿಗೆ. ಗುಳೇ ಹೋಗುವ ಕಾರ್ಮಿಕರಿಗೆ, ಅಲೆಮಾರಿ ಜನಾಂಗದವರಿಗೆ ತಮ್ಮ ಬದುಕಿನ ಭಾಗವಾಗಿರುವ ಸೀಮೆಎಣ್ಣೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಸಿಗುವಂತೆ ಪ್ರಧಾನಮಂತ್ರಿ ಗಳಾದ ನರೇಂದ್ರಮೋದಿಯವರ ಎನ್.ಡಿ.ಎ. ನೇತೃತ್ವದ ಕೇಂದ್ರ ಸರ್ಕಾರ ಕೂಡಲೇ ದೇಶಾದ್ಯಂತ ಸೀಮೆಎಣ್ಣೆಯು ಸುಲಭವಾಗಿ ದೊರಕುವಂತೆ ಮಾಡಬೇಕೆಂದು ಸಂಘಟನೆಯು ಪ್ರಧಾನ ಮಂತ್ರಿಗಳಿಗೆ ಇ-ಮೇಲ್ ಕಳಿಸಿ ಒತ್ತಾಯಿಸಿದೆ.