ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿ ಖಾತಾ ಅವಧಿ 6 ತಿಂಗಳು ವಿಸ್ತರಿಸಿ* ನಗರಾಭಿವೃದ್ಧಿ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಎನ್.ಕೆ.ಶ್ಯಾಮಸುಂದರ್ ಮನವಿ*

*ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿ ಖಾತಾ ಅವಧಿ 6 ತಿಂಗಳು ವಿಸ್ತರಿಸಿ*

ನಗರಾಭಿವೃದ್ಧಿ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಎನ್.ಕೆ.ಶ್ಯಾಮಸುಂದರ್ ಮನವಿ*

ರಾಜ್ಯಾದ್ಯಂತ ನೊಂದಣಿಯಾದ ರೆವಿನ್ಯೂ ನಿವೇಶನ ಹಾಗೂ ರೆವಿನ್ಯೂ ನಿವೇಶನಗಳಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿರುವ ಬಡವರಿಗೆ ಬಿ ಖಾತಾ ಮಾಡಿಕೊಳ್ಳಲು ಅರ್ಜಿ ಸಲ್ಲಿಸಲು ಇದೇ ತಿಂಗಳು ಆಗಸ್ಟ್ 8 (8/8/2025) ಕೊನೆಯ ದಿನಾಂಕ ಎಂದು ಸರ್ಕಾರ ಆದೇಶ ಮಾಡಿರುತ್ತಾರೆ.

ಶಿವಮೊಗ್ಗ ತಾಲ್ಲೂಕು ಕಚೇರಿಯಲ್ಲಿ ಪೌತಿ ಖಾತೆ ಅದಾಲತ್ ನಡೆಯುತ್ತಿದೆ. ಕೆಲವು ಆಸ್ತಿಗಳಿಗೆ ಆರ್ ಟಿ ಸಿ. ಎಮ್ ಆರ್ ಗಳು ದಾಖಲಾಗಿರುವುದಿಲ್ಲ. ದಾಖಲೆ ಒದಗಿಸಲು ವಿಳಂಬವಾಗುತ್ತಿದೆ. ಇಂಥ ಪ್ರಕರಣಗಳು ಪಾಲಿಕೆಯ ಅಧಿಕಾರಿಗಳಿಗೆ. ನೌಕರರಿಗೆ ಖಾತೆ ಮಾಡಲು ಗೊಂದಲದಲ್ಲಿದ್ದಾರೆ.

ಪಾಲಿಕೆಯಿಂದ ಬಿ ಖಾತದ ಅನುಕೂಲಗಳನ್ನು ಸಾರ್ವಜನಿಕರಿಗೆ ಹೆಚ್ಚಿನ ರೀತಿಯಲ್ಲಿ ಮನವರಿಕೆ ಮಾಡುವಲ್ಲಿ ಹಿಂದೆ ಬಿದ್ದಿರುತ್ತದೆ. ತೆರಿಗೆ ಕಟ್ಟುವ ಒಂದೇ ಉದ್ದೇಶ ಎಂದು ತಿಳಿದಿರುತ್ತಾರೆ. ಬಿ ಖಾತೆ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಈ ಹಿಂದೆ ಅರ್ಜಿ ಹಾಕಿದವರ ಖಾತೆಗಳು ಸರಿಯಾಗಿ ಆಗುತ್ತಿಲ್ಲ. ಸರ್ವರ್ ಸಮಸ್ಯೆ. ಸಾಫ್ಟ್ವೇರ್ ಅಪ್ಡೇಟ್ ಸಮಸ್ಯೆ. ಇಂಟರ್ನೆಟ್ ಸಮಸ್ಯೆ. ಇಂದೂ ಸಹ ಬಿ ಖಾತದ ಲಾಗಿನ್ ಓಪನ್ ಆಗುತ್ತಿಲ್ಲ ಎಂಬ ಉತ್ತರ ಅಧಿಕಾರಿಗಳಲ್ಲಿ ನಾನೇ ಸ್ವತಃ ಕೇಳಿದ್ದೇನೆ.

ಹೀಗೆ ಹಲವಾರು ಅಡೆತಡೆಗಳು ಆಗುತ್ತಿದೆ. ಮಲೆನಾಡು ಪ್ರದೇಶವಾದ್ದರಿಂದ ಮಳೆಯೂ ಸಹ ಹೆಚ್ಚಿಗೆ ಇರುವುದರಿಂದ ಈ ಸಮಸ್ಯೆ ಹೆಚ್ಚು ಆಗಿದೆ. ಇನ್ನು ಹಲವಾರು ಜನರು ಸಹ ಅರ್ಜಿ ಹಾಕಲು ದಾಖಲೆಗಳನ್ನು ಜೋಡಿಸಿಕೊಳ್ಳುತ್ತಿದ್ದಾರೆ. ವಿಸ್ತರಣೆ ಮಾಡಿಸಲು ಕೋರಿಕೊಳ್ಳುತ್ತಿದ್ದಾರೆ.

ಆದ್ದರಿಂದ ರಾಜ್ಯ ಸರ್ಕಾರ ಬಿ ಖಾತಾ ಅವಧಿಯನ್ನು ಇನ್ನು 6 (ಆರು) ತಿಂಗಳ ಕಾಲ ವಿಸ್ತರಿಸಬೇಕೆಂದು ಶಿವಮೊಗ್ಗ ನಗರದ ಆಸ್ತಿದಾರರ ಪರವಾಗಿ ವಿನಂತಿಸುತ್ತೇನೆ ಎಂದಿದ್ದಾರೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ನಗರಸಭೆ ಮಾಜಿ ಸದಸ್ಯ ಎನ್.ಕೆ.ಶ್ಯಾಮಸುಂದರ್.