ಮಹಾನಗರ ಪಾಲಿಕೆ ಚುನಾವಣೆಗೆ ಕೆ.ಬಿ.ಪ್ರಸನ್ನ ಕುಮಾರ್ ಒತ್ತಾಯ

*ಮಾಜಿ ಶಾಸಕರೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷರೂ ಆಗಿರುವ ಕೆ.ಬಿ.ಪ್ರಸನ್ನ ಕುಮಾರ್ ರವರ ಪತ್ರಿಕಾಗೋಷ್ಠಿ*

ಶಿವಮೊಗ್ಗ ಮಹಾನಗರ ಪಾಲಿಕೆ ಅವಧಿ ಮುಗಿದು ನಾಲ್ಕು ತಿಂಗಳಾದರೂ ಸರ್ಕಾರ ಗಮನ ಹರಿಸ್ತಿಲ್ಲ

ಶುಗರ್ ಫ್ಯಾಕ್ಟರಿ ಮಾಲೀಕತ್ವದ ಜಮೀನಲ್ಲಿನ ಕೃಷಿಕರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಲಕ್ಷಾಂತರ ರೂ ವಸೂಲಿ ನಡೀತಿದೆ. ಜಿಲ್ಲಾಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕು.

ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶಗಳನ್ನ ಕಳೆದ 20 ವರ್ಷಗಳ ಹಿಂದೆಯೇ ಸೇರಿಸಿಕೊಂಡಿದ್ದರೂ ಯಾವುದೇ ಅಭಿವೃದ್ಧಿ ಆಗಿಲ್ಲ

ಸೋಗಾನೆ, ಗೋವಿಂದಾಪುರ, ಅನುಪಿನಕಟ್ಟೆ ಗ್ರಾಮ ಪಂಚಾಯ್ತಿಗಳನ್ನು ಸೇರಿಸಿಕೊಳ್ಳಲು ಆಯುಕ್ರಿಗೆ ಸರ್ಕಾರದಿಂದ ಪತ್ರ ಬಂದಿದೆ. ಈ ಹಿಂದೆ ಸೇರಿಸಿಕೊಂಡ ಪ್ರದೇಶಗಳ ಅಭಿವೃದ್ಧಿ ಪ್ಯಾಕೇಜ್ ಮೊದಲು ಸರ್ಕಾರ ಘೋಷಿಸಬೇಕು.

ಶುದ್ಧವಿರಲಿ, ಕುಡಿಯೋ ನೀರನ್ನೇ ನಗರದ ಜನತೆಗೆ ನೀಡಲು ಸಾಧ್ಯವಾಗಿಲ್ಲ. ಅಷ್ಟೇ ಕಂದಾಯ ಕಟ್ಟುತ್ತಿದ್ದರೂ ಅಭಿವೃದ್ಧಿ ಇಲ್ಲ.

ಆದಷ್ಟು ಬೇಗ ಪಾಲಿಕೆ ಚುನಾವಣೆ ಮಾಡಬೇಕು.ಕಸವಿಲೇವಾರಿ ಸಮಸ್ಯೆಗಳಾಗ್ತಿವೆ.ಕಂಟೈನರ್ ಗಳ ಸಮಸ್ಯೆ ಹೆಚ್ಚಾಗಿದೆ.ದೊಡ್ಡಮಟ್ಟದ ಹಣ ಖರ್ಚು ಮಾಡಿರುವುದು ದಂಡವಾಗ್ತಿದೆ. ಕಂಟೈನರ್ ಗಳ ಸಮಸ್ಯೆ ಹೆಚ್ಚಾಗಿದೆ. ಆಟೋ ಟಿಪ್ಪರ್ ಗಳಲ್ಲಿ ಕಸ ವಿಲೇವಾರಿ ಅಸಮರ್ಪಕವಾಗಿ ನಡೆಯುತ್ತಿದೆ. ಇದರಿಂದ ಸೊಳ್ಳೆಗಳ‌ ಹಾವಳಿ, ಆರೋಗ್ಯ ಸಮಸ್ಯೆಗಳಾಗ್ತಿವೆ. ಜನಪ್ರತಿನಿಧಿಗಳಿದ್ದರೆ ಈ ಸಮಸ್ಯೆಗಳನ್ನು ಬಗೆಹರಿಸಬಹುದು. ಹಾಗಾಗಿ, ಪಾಲಿಕೆ ಚುನಾವಣೆ ಬೇಗ ಆಗಲಿ…

ಶುಗರ್ ಫ್ಯಾಕ್ಟರಿ ಜಮೀನುಗಳಲ್ಲಿ ಕೃಷಿ ಕಾರ್ಮಿಕರ ಮೇಲೆ ಹೈಕೋರ್ಟ್ ಆದೇಶದ ನೆಪದಲ್ಲಿ ದೌರ್ಜನ್ಯ ನಡೆಯುತ್ತಿದೆ. ಮಧ್ಯವರ್ತಿಗಳು ಜಾಗ ಉಳಿಸಿಕೊಡುವ ಮಾತು ಹೇಳಿ ಲಕ್ಷಾಂತರ ರೂ.ಗಳನ್ನು ವಸೂಲು ಮಾಡಲಾಗುತ್ತಿದೆ.

ಭೂ ಸುಧಾರಣೆ ಕಾನೂನನ್ನು ಇಲ್ಲಿ ಜಾರಿಗೊಳಿಸಿ ಈ ಕೃಷಿಕರಿಗೆ ಸರ್ಕಾರ ಜಮೀನು ಉಳಿಸಿಕೊಡಬೇಕು..