ಸುಮಾರು 8 ಲಕ್ಷ ಮೌಲ್ಯದ ಆಭರಣ ಕದ್ದಿದ್ದ ಕಳ್ಳ- ಕಳ್ಳಿ;* *ಬೇಟೆಯಾಡಿ ಮಾಲು ಸಮೇತ ಬಂಧಿಸಿದ ಭದ್ರಾವತಿ ಪೊಲೀಸರು*
*ಸುಮಾರು 8 ಲಕ್ಷ ಮೌಲ್ಯದ ಆಭರಣ ಕದ್ದಿದ್ದ ಕಳ್ಳ- ಕಳ್ಳಿ;*
*ಬೇಟೆಯಾಡಿ ಮಾಲು ಸಮೇತ ಬಂಧಿಸಿದ ಭದ್ರಾವತಿ ಪೊಲೀಸರು*
ಬಂಗಾರದ ಆಭರಣಗಳನ್ನು ಕದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಪೇಪರ್ ಟೌನ್ ಪೊಲೀಸರು ಬೆಂಗಳೂರು ಮೂಲದ ಒಬ್ಬ ಕಳ್ಳ, ಒಬ್ಬ ಕಳ್ಳಿಯನ್ನು ಬಂಧಿಸಿದ್ದು, ಅವರಿಂದ ಕದ್ದ ಆಭರಣ ವಶಕ್ಕೆ ಪಡೆದಿದ್ದಾರೆ.
ಕಳೆದ ಆ. 18 ರಂದು ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ 5ನೇ ವಾರ್ಡ್ ನಲ್ಲಿ ವಾಸವಾಗಿರುವ ಚಂದ್ರಮ್ಮ ರವರ ವಾಸದ ಮನೆಯ ಬೀರುವಿನಲ್ಲಿದ್ದ 95 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ* ಮಾಡಿಕೊಂಡು ಹೋಗಿದ್ದರು.
ಈ ಸಂಬಂಧ ನೀಡಿದ ದೂರಿನ ಮೇರೆಗೆ ಠಾಣಾ ಗುನ್ನೆ ಸಂಖ್ಯೆ : 0086/2025 ಕಲಂ 305(a) BNS ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು.
ನಂತರ ಈ ಪ್ರಕರಣದಲ್ಲಿ ಆರೋಪಿಗಳನ್ನು ಮತ್ತು ಮಾಲು ಪತ್ತೆಗಾಗಿ ಎಸ್.ಪಿ. ಮಿಥುನ್ ಕುಮಾರ್ ಜಿ. ಕೆ. ಮತ್ತು ಕಾರಿಯಪ್ಪ ಎ ಜಿ,(ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ, ಜಿಲ್ಲೆ,), ರಮೇಶ್ ಕುಮಾರ್ ಎಸ್,(ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ,) ರವರ ಮಾರ್ಗದರ್ಶನದಲ್ಲಿ ಭದ್ರಾವತಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಕೆ ಆರ್ ನಾಗರಾಜ ರವರ ಮೇಲ್ವಿಚಾರಣೆಯಲ್ಲಿ, *ಶ್ರೀಮತಿ ನಾಗಮ್ಮ ಕೆ* (ಪೊಲೀಸ್ ನಿರೀಕ್ಷಕರು ಪೇಪರ್ ಟೌನ್ ಪೊಲೀಸ್ ಠಾಣೆ) ರವರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಗಳಾದ ರತ್ನಾಕರ್ ಎ ಎಸ್ ಐ, ಸಿಹೆಚ್ ಸಿ 89 ಪ್ರಕಾಶ, ಸಿಹೆಚ್ ಸಿ 372 ಅರುಣ್, ಸಿಹೆಚ್ಸಿ 16 ನಾಗರಾಜ ಎಂ ಸಿಪಿಸಿ 1276, ಸಿಪಿಸಿ 1460 ಹನುಮಂತ, ಮಪಿಸಿ 1640 ಆಸ್ಮಾ, ಮಪಿಸಿ 1771 ಸ್ವೀಕೃತ, ಮಪಿಸಿ 1829 ಅನುರೂಪ ಇವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.
ಈ ತನಿಖಾ ತಂಡವು ಆ.30 ರಂದು ಪ್ರಕರಣದ ಆರೋಪಿತರುಗಳಾದ 1) ಮಂಜುಳಾ ಆರ್, (21 ವರ್ಷ, ವಾಸ ಕೆಂಗೇರಿ ಬೆಂಗಳೂರು.) 2) ಸುಜೈನ್ ಖಾನ್, (24 ವರ್ಷ, ವಾಸ ಕೆಂಗೇರಿ ಬೆಂಗಳೂರು) ರವರುಗಳನ್ನು ವಶಕ್ಕೆ ಪಡೆದು, ಕಳ್ಳತನ ಮಾಡಿದ್ದ ಅಂದಾಜು 7,82,000/- ರೂ ಮೌಲ್ಯದ 83 ಗ್ರಾಂ ತೂಕದ ಮಾಂಗಲ್ಯ ಸರವನ್ನು* ಅಮಾನತ್ತುಪಡಿಸಿಕೊಂಡಿದ್ದಾರೆ.
ಈ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಎಸ್ ಪಿ ಮಿಥುನ್ ಕುಮಾರ್ ರವರು ಪ್ರಶಂಸಿಸಿ ಅಭಿನಂದಿಸಿದ್ದಾರೆ.