*ಸೆ.6 ರ ಶಿವಮೊಗ್ಗ ಹಿಂದೂ ಮಹಾಸಭಾ ಮೆರವಣಿಗೆ ವೇಳೆ 10 ಸಾವಿರ ಭಕ್ತರಿಗೆ ಅನ್ನ ಬಡಿಸಲಿದ್ದಾರೆ ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್* *ಆರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ ಸುಂದರೇಶ್ ಅನ್ನ ದಾಸೋಹ*
*ಸೆ.6 ರ ಶಿವಮೊಗ್ಗ ಹಿಂದೂ ಮಹಾಸಭಾ ಮೆರವಣಿಗೆ ವೇಳೆ 10 ಸಾವಿರ ಭಕ್ತರಿಗೆ ಅನ್ನ ಬಡಿಸಲಿದ್ದಾರೆ ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್*
*ಆರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ ಸುಂದರೇಶ್ ಅನ್ನ ದಾಸೋಹ*

ಶಿವಮೊಗ್ಗದ ಹಿಂದೂ ಮಹಾಸಭಾ ಮೆರವಣಿಗೆ ಎಂದ ಮೇಲೆ ಅಲ್ಲಿ ಹಾಲಿ ಸೂಡಾ ಅಧ್ಯಕ್ಷರೂ, ಕಾಂಗ್ರೆಸ್ ನ ಮಾಜಿ ಜಿಲ್ಲಾಧ್ಯಕ್ಷರೂ ಆದ ಹೆಚ್.ಎಸ್.ಸುಂದರೇಶ್ ನೆನಪಾಗದಿದ್ದರೆ ಹೇಗೆ?
ಕಳೆದ 6 ವರ್ಷಗಳಿಂದಲೂ ಸುಂದರೇಶ್ ಮತ್ತು ಅವರ ಅಭಿಮಾನಿಗಳು ಪ್ರತಿ ವರ್ಷವೂ ತಪ್ಪಿಸದೇ 10 ಸಾವಿರ ಜನ ಭಕ್ತಾಧಿಗಳಿಗೆ ಉಚಿತ ಊಟದ ವ್ಯವಸ್ಥೆ ಮಾಡುತ್ತಾ ಬಂದಿದ್ದಾರೆ. ಈ ಮೂಲಕ ಹಿಂದೂ ಮಹಾಸಭಾ ಮೆರವಣಿಗೆಯಲ್ಲಿ ತಮ್ಮದೇ ಛಾಪು ಮೂಡಿಸುತ್ತಾ ಬಂದಿದ್ದಾರೆ.
ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅವರು ಜನಮುಖಿ ಆಡಳಿತಗಾರರೆಂದೇ ಹೆಸರು ಮಾಡುತ್ತಿದ್ದಾರೆ.
ಅಲ್ಲದೇ, ಸಮಾಜ ಸೇವೆಯಲ್ಲೂ ತೊಡಗಿಕೊಂಡಿರುವ ಸುಂದರೇಶ್ ರವರು, ತಮ್ಮ ಪ್ರೀತಿ ಪಾತ್ರರ ಜೊತೆ ನಿಂತು ಈ ವರ್ಷವೂ ಸೆಪ್ಟೆಂಬರ್ 6 ರ ಶನಿವಾರದಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಬೆಳಿಗ್ಗೆಯಿಂದಲೇ ಶಿವಮೊಗ್ಗದ ಗಾಂಧಿ ಬಜಾರಿನ ಶ್ರೀ ಬಸವೇಶ್ವರ ದೇವಸ್ಥಾನದ ಮುಂಭಾಗ ಉಚಿತ ಅನ್ನ ಸಂತರ್ಪಣೆ ಮಾಡಲಿದ್ದಾರೆ.