ರಿಪ್ಪನ್ ಪೇಟೆಯಲ್ಲಿ ಹಾಡಹಗಲೇ ಬ್ಯೂಟಿ ಪಾರ್ಲರಿಗೆ ನುಗ್ಗಿ ದರೋಡೆ!* *ಹಣ, ಬಂಗಾರ ದೋಚಿದವರ ಮೇಲೆ ಪೊಲೀಸರು ದಾಖಲಿಸಿದ್ರು ದರೋಡೆ ಪ್ರಕರಣ*

*ರಿಪ್ಪನ್ ಪೇಟೆಯಲ್ಲಿ ಹಾಡಹಗಲೇ ಬ್ಯೂಟಿ ಪಾರ್ಲರಿಗೆ ನುಗ್ಗಿ ದರೋಡೆ!*

*ಹಣ, ಬಂಗಾರ ದೋಚಿದವರ ಮೇಲೆ ಪೊಲೀಸರು ದಾಖಲಿಸಿದ್ರು ದರೋಡೆ ಪ್ರಕರಣ*

ಗಾರ್ಮೆಂಟ್ಸ್ ಹಾಗೂ ಬ್ಯೂಟಿ ಪಾರ್ಲರ್ ಅಂಗಡಿಗೆ ನುಗ್ಗಿದ ನಾಲ್ವರು, ಅಲ್ಲಿದ್ದವರನ್ನು ಬೆದರಿಸಿ,ಹೆದರಿಸಿ ಹಣ ಮತ್ತು ಚಿನ್ನದ ಆಭರಣಗಳನ್ನು ದೋಚಿದ್ದಾರೆಂದು ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ರಿಪ್ಪನ್ ಪೇಟೆಯ ನ್ಯೂ ಶ್ವೇತಾ ಶ್ರೀ ಗಾರ್ಮೆಂಟ್ಸ್ ಮತ್ತು ಬ್ಯೂಟಿ ಪಾರ್ಲರಿಗೆ ಹಗಲಲ್ಲೇ ನಾಲ್ವರು ದಾಳಿ ಮಾಡಿ 3.50 ಲಕ್ಷ ರೂ.,ನಗದು, 37ಗ್ರಾಂ ತೂಕದ ಮಾಂಗಲ್ಯ ಸರ, 6 ಗ್ರಾಂ ಸರ, 5 ಗ್ರಾಂ ಮತ್ತು 3 ಗ್ರಾಂ ತೂಕದ ಉಂಗುರ, ಓಲೆಯನ್ನು ಅಪಹರಿಸಿದ್ದಾರೆಂದು ಅಂಗಡಿಯ ಮಾಲೀಕೆ ಶ್ವೇತಾ ಜಿ.ಎನ್. ನೀಡಿದ ದೂರಿನ ಮೇಲೆ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.

ಅ.3 ರಂದು ಮಧ್ಯಾಹ್ನ ಹೊಸನಗರದ ಸೀಮಾ ಸೆರವೋ, ಲೇಖನ ಚಂದ್ರಾನಾಯ್ಕ, ಚಂದ್ರಾನಾಯ್ಕ ಮತ್ತು ಶಶಿಕಲಾ ಸುರೇಶ್ ರವರು ಗುಂಪು ಕಟ್ಟಿಕೊಂಡು ಅಂಗಡಿ ಮೇಲೆ ದಾಳಿ ಮಾಡಿ ದರೋಡೆ ಮಾಡಿದ್ದಾರೆಂದು ಎಫ್ ಐ ಆರ್ ನಲ್ಲಿದೆ.

ಶ್ರೀಮತಿ ಶ್ವೇತಾ ನೀಡಿದ ದೂರಿನ ಆಧಾರದ ಮೇಲೆ ರಿಪ್ಪನ್ ಪೇಟೆ ಪೊಲೀಸರು 108/25 ರಂತೆ ಬಿ ಎನ್ ಎಸ್ 2023(u/s 309(6) ನಂತೆ ದರೋಡೆ ಪ್ರಕರಣ ಸಂಬಂಧಿತ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.