ಭೀಕರ ಹಲ್ಲೆಗೊಳಗಾಗಿದ್ದ ಅಮ್ಜದ್ ಸಾವು*
*ಭೀಕರ ಹಲ್ಲೆಗೊಳಗಾಗಿದ್ದ ಅಮ್ಜದ್ ಸಾವು*

ಅಕ್ಟೋಬರ್ 2 ರ ಗಾಂಧಿ ಜಯಂತಿಯ ದಿನ ಸಂಜೆ ಶಿವಮೊಗ್ಗದ ಮಾರ್ನವಮಿ ಬೈಲ್( ಆರ್ ಎಂ ಎಲ್ ನಗರ) ನಲ್ಲಿ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆಗೊಳಗಾಗಿ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅಮ್ಜದ್(34) ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾನೆ ಎಂದು ಆಸ್ಪತ್ರೆ ಮೂಲಗಳು ದೃಢೀಕರಿಸಿವೆ.
ಚಾಕುವಿನಿಂದ ಭೀಕರ ಹಲ್ಲೆಗೊಳಗಾಗಿದ್ದ ಅಮ್ಜದ್ ನ ಕೈ ಬೆರಳುಗಳು ಕತ್ತರಿಸಲ್ಪಟ್ಟಿದ್ದವು. ಹೊಟ್ಟೆಗೆ ತಿವಿದಿದ್ದರಿಂದ ಕಿಡ್ನಿ ಮತ್ತು ಕರುಳು ಕತ್ತರಿಸಲ್ಪಟ್ಟಿತ್ತು. ವೈದ್ಯರು ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೇ ಅಮ್ಜದ್ ಕೊನೆಯುಸಿರೆಳೆದಿದ್ದಾನೆ.
ಬಿಗಿ ಪೊಲೀಸ್ ಬಂದೋಬಸ್ತ್ ಆಸ್ಪತ್ರೆಯ ಸುತ್ತ ಇದೆ.
*ಶಿವಮೊಗ್ಗದ ಅಮ್ಜದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ;*
*ಐದು ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ದೊಡ್ಡಪೇಟೆ ಪೊಲೀಸರು*
ಶಿವಮೊಗ್ಗದ ಅಮ್ಜದ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಅ.2ರ ರಾತ್ರಿ ಹಲ್ಲೆಯಾಗಿದ್ದು, ಜೀವನ್ಮರಣದ ಮಧ್ಯೆ ಇರುವ ಈತನಿಗೆ ಮ್ಯಾಕ್ಸ್ ಆಸ್ಪತ್ರೆಯಲ್ಲಿ ತೀವ್ರ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಈ ಸಂಬಂಧ ದೊಡ್ಡಪೇಟೆ ಪೊಲೀಸರು 5 ಜನರನ್ನು ಬಂಧಿಸಿದ್ದರು.
ಹಲ್ಲೆ ಮಾಡಿದವರಲ್ಲಿ ಅಪ್ರಾಪ್ತರಿದ್ದಾರೆ ಎಂದು ಹೇಳಲಾಗುತ್ತಿದ್ದು, ಕೊಲೆಗೆ ಈಗಲೂ ಕಾರಣ ತಿಳಿದು ಬಂದಿಲ್ಲ.
ಶಿವಮೊಗ್ಗದ ಆರ್ ಎಂ ಎಲ್ ನಗರದ ಭಾರತ್ ಫೌಂಡ್ರಿ ಹಿಂಭಾಗದಲ್ಲಿ ಶಾಹಿದ್ ಎಂಬಾತನ ಜೊತೆ ಅಮ್ಜದ್ ನಿಂತಿದ್ದಾಗ ನುಗ್ಗಿಬಂದ ಹಂತಕರು ಮಾರಕಾಸ್ತ್ರಗಳಿಂದ ಎಡೆಬಿಡದೇ ಹಲ್ಲೆ ಮಾಡಿದ್ದರು.
ಕೈ ಬೆರಳುಗಳು, ಮತ್ತೊಂದು ಕೈ ಕತ್ತರಿಸಲ್ಪಟ್ಟಿದ್ದು, ಹೊಟ್ಟೆಗೂ ಚಾಕು ಹಾಕಲಾಗಿತ್ತು. ಅಮ್ಜದನ ಸ್ಥಿತಿ ಗಂಭೀರವಾಗಿತ್ತು.
ಅಮ್ಜದನ ಜೊತೆ ಇದ್ದ ಶಾಹಿದನಿಗೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು.
ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.