ಕೈ ಪಾಳಯದಲ್ಲಿ ಕಾಣಿಸುತ್ತಿದೆ ತೃತೀಯ ಶಕ್ತಿ…ಡಿಕೆಶಿಗೆ ಫುಲ್ಲು ವಿಶ್ವಾಸವಿದೆ…ಬಿಜೆಪಿ ಪಾಳಯದ ಲೆಕ್ಕಾಚಾರಗಳೇನು?…ಒಲ್ಲೆ ಅಂದ್ರು ಜಾರಕಿಹೊಳಿ?…
ಕೈ ಪಾಳಯದಲ್ಲಿ ಕಾಣಿಸುತ್ತಿದೆ ತೃತೀಯ ಶಕ್ತಿ ಕಳೆದ ವಾರ ತಮಗೆ ತಲುಪಿದ ಸಂದೇಶದಿಂದ ದಿಲ್ಲಿಯ ಬಿಜೆಪಿ ನಾಯಕರು ಖುಷಿಯಾಗಿದ್ದಾರೆ.ಈ ಸಂದೇಶದ ಪ್ರಕಾರ ಕರ್ನಾಟಕದ ಕಾಂಗ್ರೆಸ್ ಪಾಳಯದಲ್ಲಿ ತೃತೀಯ ಶಕ್ತಿ ತಲೆ ಎತ್ತುತ್ತಿದೆ. ಅಂದ ಹಾಗೆ ಕರ್ನಾಟಕದ ಕಾಂಗ್ರೆಸ್ ಪಾಳಯದಲ್ಲಿ ಎರಡು ಶಕ್ತಿಗಳಿರುವುದು ರಹಸ್ಯದ ವಿಷಯವೇನಲ್ಲ.ಈ ಪೈಕಿ ಒಂದು ಶಕ್ತಿ ಸಿಎಂ ಸಿದ್ದರಾಮಯ್ಯ ಅವರ ಜತೆಗಿದ್ದರೆ,ಮತ್ತೊಂದು ಶಕ್ತಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜತೆಗಿದೆ. ಈ ಎರಡು ಶಕ್ತಿಗಳ ನಡುವೆ ಇರುವ ಭಿನ್ನಾಭಿಪ್ರಾಯವೆಂದರೆ ಅಧಿಕಾರ ಹಂಚಿಕೆಯದು.2023 ರಲ್ಲಿ ಕಾಂಗ್ರೆಸ್ ಪಕ್ಷ…