10 ಬಾರಿ ಕಚ್ಚಿ ಶವದ ಪಕ್ಕದಲ್ಲೇ ಮಲಗಿತ್ತು ಹಾವು!*
*10 ಬಾರಿ ಕಚ್ಚಿ ಶವದ ಪಕ್ಕದಲ್ಲೇ ಮಲಗಿತ್ತು ಹಾವು!* ಹಾವೊಂದು ವ್ಯಕ್ತಿಗೆ 10 ಬಾರಿ ಕಚ್ಚಿ ಸಾಯಿಸಿ, ಬೆಳಗ್ಗೆಯವರೆಗೂ ಶವದ ಪಕ್ಕದಲ್ಲೇ ಹಾವು(Snake) ಮಲಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ಸಾಮಾನ್ಯವಾಗಿ ಹಾವುಗಳು ಒಮ್ಮೆ ಕಡಿದು ಅಲ್ಲಿಂದ ಓಡಿ ಹೋಗುತ್ತವೆ. ಆದರೆ ಈ ಹಾವು 10 ಬಾರಿ ಕಡಿದಿದ್ದು, ಆತ ಸತ್ತ ಬಳಿಕವೂ ಅವನ ಪಕ್ಕದಲ್ಲೆ ಮಲಗಿರುವುದು ಸಹಜ ಎಂದೆನಿಸಿಲ್ಲ. ಬೆಳಗ್ಗೆ ಮನೆಯವರಿಗೆ ಈ ವಿಷಯ ತಿಳಿದಾಗ ಬೆಚ್ಚಿಬಿದ್ದಿದ್ದಾರೆ. ಹಾವಾಡಿಗನನ್ನು ಕರೆಸಿ ಹಾವನ್ನು ಹಿಡಿಸಲಾಗಿದೆ….