ಶಿವಮೊಗ್ಗ ಜಿ.ಪಂ. ನೂತನ ಸಿಇಓ ಆಗಿ ಹೇಮಂತ್…**ಲೋಖಂಡೆ ಬೆಂಗಳೂರಿಗೆ ವರ್ಗ*
*ಶಿವಮೊಗ್ಗ ಜಿ.ಪಂ. ನೂತನ ಸಿಇಓ ಆಗಿ ಹೇಮಂತ್…* *ಲೋಖಂಡೆ ಬೆಂಗಳೂರಿಗೆ ವರ್ಗ* ಶಿವಮೊಗ್ಗ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಲೋಖಂಡೆ ಸ್ನೇಹಲ್ ಸುಧಾಕರ್ ರವರನ್ನು ರಾಜ್ಯ ಸರ್ಕಾರ ಕೂಡಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡಿದ್ದು, ಇವರ ಜಾಗಕ್ಕೆ ಬಳ್ಳಾರಿ ಉಪ ವಿಭಾಗದ ಹಿರಿಯ ಸಹಾಯಕ ಆಯುಕ್ತ ಎನ್.ಹೇಮಂತ್ ರವರನ್ನು ವರ್ಗಾಯಿಸಿ ಆದೇಶಿಸಿದೆ. ಲೋಖಂಡೆಯವರನ್ನು ಬೆಂಗಳೂರಿನ ಕರ್ನಾಟಕ ವಿದ್ಯುತ್ ಕಾರ್ಖಾನೆ ಲಿಮಿಟೆಡ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ನೇಮಿಸಿ ಸರ್ಕಾರ ಆದೇಶಿಸಿದೆ.