ಡಾ.ಸಿ.ಎನ್.ಮಂಜುನಾಥ್ ಅವರಿಗೊಂದು ಬಹಿರಂಗ ಪತ್ರ – ಜಗದೀಶ್ ಕೊಪ್ಪ
ಡಾ.ಸಿ.ಎನ್.ಮಂಜುನಾಥ್ ಅವರಿಗೊಂದು ಬಹಿರಂಗ ಪತ್ರ – ಜಗದೀಶ್ ಕೊಪ್ಪ ಪ್ರಿಯ ಡಾಕ್ಟ್ರೇ, ಹೇಗಿದ್ದೀರಿ? ಈ ದಿನ ಪತ್ರಿಕೆಗಳಲ್ಲಿ ನೀವು ಬಿ.ಜೆ.ಪಿ. ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಕಣಕ್ಕಿಳಿಯುವ ಸುದ್ದಿಯನ್ನು ಓದಿ ನನಗೆ ಅಚ್ಚರಿ ಮಾತ್ರವಲ್ಲ, ಅಘಾತವಾಯಿತು. ನೀವು ಯಾವುದೇ ಪಕ್ಷದಿಂದ ರಾಜಕಾರಣಕ್ಕೆ ಇಳಿಯುವುದು ನನಗೆ ಮಾತ್ರವಲ್ಲ, ಈ ನೆಲದ ಸಾವಿರಾರು ಕನ್ನಡಿಗರಿಗೆ ಬೇಡವಾದ ಸಂಗತಿಯಾಗಿದೆ. ಏಕೆಂದರೆ, ನಿಮ್ಮದು ಎಲ್ಲವನ್ನು ಮತ್ತು ಎಲ್ಲರನ್ನೂ ಮೀರಿದ ವ್ಯಕ್ತಿತ್ವ. ಉತ್ತರಕರ್ನಾಟಕದ ಜನತೆ ದಿವಂಗತ ಡಾ.ನಾಗಲೋಟಿ ಮಠ ಅವರನ್ನು ಇಂದಿಗೂ ತಮ್ಮ ಎದೆಯಲ್ಲಿಟ್ಟುಕೊಂಡು ಪೂಜಿಸುತ್ತಾರೆ….