ದಿ ಆಶ್ರಮ ಶಾಲೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ*
*ದಿ ಆಶ್ರಮ ಶಾಲೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ* ಇಂದು ವಿಧಾನಸೌಧದಲ್ಲಿ ದಿ ಆಶ್ರಮ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಸಂವಾದ ನಡೆಸಿದರು. ಶಿಕ್ಷಣ ಕ್ಷೇತ್ರದ ಸುಧಾರಣೆಗಳ ಕುರಿತು, ವಿಶೇಷವಾಗಿ ಮೂರು ಪರೀಕ್ಷೆಗಳ ನೀತಿಯ ಬಗ್ಗೆ, ಹಲವು ಶೈಕ್ಷಣಿಕ ವಿಚಾರಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಕುತೂಹಲ, ಜ್ಞಾನಾಸಕ್ತಿ ಮತ್ತು ಶಿಕ್ಷಣದ ಭವಿಷ್ಯದ ಕುರಿತ ಅವರ ಚಿಂತನೆಗಳನ್ನು ನೋಡಿ ಸಚಿವರು ಅಪಾರ ಸಂತೋಷ ವ್ಯಕ್ತಪಡಿಸಿದರು….