ಶಿವಮೊಗ್ಗದ ಪತ್ರಕರ್ತ ಭರತ್ ರಾಜ್ ಸಿಂಗ್ ರವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಘೋಷಣೆ- ಮಾಧ್ಯಮ ಅಕಾಡೆಮಿ ಪ್ರಶಸ್ತಿ ಯಾರಿಗೆಲ್ಲ ಬಂದಿದೆ?…ಇಲ್ಲಿದೆ ಸಂಪೂರ್ಣ ಮಾಹಿತಿ
ಶಿವಮೊಗ್ಗದ ಪತ್ರಕರ್ತ ಭರತ್ ರಾಜ್ ಸಿಂಗ್ ರವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಘೋಷಣೆ ಶಿವಮೊಗ್ಗದ ಹಿರಿಯ ಪತ್ರಕರ್ತ, ಶಿವಮೊಗ್ಗ ಟೆಲೆಕ್ಸ್ ಕನ್ನಡ ದಿನಪತ್ರಿಕೆ ಉಪಸಂಪಾದಕರಾದ ಆರ್. ಪಿ ಭರತ್ ರಾಜ್ ಸಿಂಗ್ ೨೦೨೫ ನೇ ಸಾಲಿನ ರಾಜ್ಯ ಸರ್ಕಾರದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನಿವೃತ್ತ ಪ್ರಾಂಶುಪಾಲರಾದ ಪುಟ್ಟುಸಿಂಗ್ ಅವರ ಪುತ್ರರಾದ ಬಿ.ಎ ಪದವೀಧರ ಆರ್. ಪಿ ಭರತ್‌ರಾಜ್‌ಸಿಂಗ್ ಅವರು ಸಾಮಾಜಿಕ ಬದಲಾವಣೆಯ ಚಳವಳಿಯ ಭಾಗವಾಗಿ ೧೯೮೯ರಲ್ಲಿ ’ಶಿವಮೊಗ್ಗ ಎಕ್ಸ್ ಪ್ರೆಸ್’ ಕನ್ನಡ ದಿನಪತ್ರಿಕೆಯನ್ನು ಆರಂಭಿಸುವ…


