ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ರಸ್ತೆ ಬದಿ ಪತ್ತೆಯಾದ ಮಗು ಪೋಷಕರ ಪತ್ತೆಗಾಗಿ ಮನವಿ
ರಸ್ತೆ ಬದಿ ಪತ್ತೆಯಾದ ಮಗು ಪೋಷಕರ ಪತ್ತೆಗಾಗಿ ಮನವಿ ಭದ್ರಾವತಿ ತಾಲ್ಲೂಕು, ಮಲ್ಲಾಪುರ ಗ್ರಾಮದ ಗೇಟ್ ಹತ್ತಿರ ರಸ್ತೆ ಬದಿ ಪತ್ತೆಯಾಗಿದ್ದು ಹೊಳೆಹೊನ್ನೂರು ಪೋಲೀಸ್ ಠಾಣಾಧಿಕಾರಿಗಳು ಸಾರ್ವಜನಿಕರ ಮಾಹಿತಿ ಮೇರೆಗೆ ರಕ್ಷಿಸಿ ದಿನಾಂಕ: 16.12.2025 ರಂದು ಪೋಷಕರ ಪತ್ತೆಗಾಗಿ ದೂರು ದಾಖಲಿಸಿ ಮಕ್ಕಳ ಕಲ್ಯಾಣ ಸಮಿತಿ ಶಿವಮೊಗ್ಗ ಇಲ್ಲಿಗೆ ದಾಖಲಿಸಿರುತ್ತಾರೆ. ಮಗುವಿನ ಮುಂದಿನ ಪುನರ್ವಸತಿ ಹಿತದೃಷ್ಠಿಯಿಂದ ಮಗುವಿನ ಸಂಬಂಧಿಕರು ಯಾರಾದರೂ ಇದ್ದಲ್ಲಿ ಅಥವಾ ಪೋಷಕರ ಬಗ್ಗೆ ಮಾಹಿತಿ ದೊರೆತಲ್ಲಿ ಸೂಕ್ತ ದಾಖಲಾತಿಯೊಂದಿಗೆ ಅಧೀಕ್ಷಕರು, ಸರ್ಕಾರಿ ಬಾಲಕರ ಬಾಲಮಂದಿರ,…
ಭದ್ರಾವತಿ ಸೀಗೆಬಾಗಿಯ ಯುವತಿ ನಾಪತ್ತೆ : ಸುಳಿವು ಪತ್ತೆಗೆ ಮನವಿ*
ಭದ್ರಾವತಿ ಸೀಗೆಬಾಗಿಯ ಯುವತಿ ನಾಪತ್ತೆ : ಸುಳಿವು ಪತ್ತೆಗೆ ಮನವಿ* ಅಲ್ಮಾಸ್ ಪರ್ವೀನ್ ಎನ್ ಆರ್, 25 ವರ್ಷ ವಯಸ್ಸು ಈಕೆಯು ಭದ್ರಾವತಿಯ ಸಿಗೇಬಾಗಿಯಲ್ಲಿರುವ ರಾಜೀವ್‌ಗಾಂಧಿ ಬಿ.ಎಡ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು ಜ.06 ರಂದು ಸ್ನೇಹಿತೆಯನ್ನು ಭೇಟಿ ಮಾಡಿ ಬರುವುದಾಗಿ ಮನೆಯಿಂದ ಹೋದವಳು ಹಿಂದುರುಗಿ ಬಂದಿರುವುದಿಲ್ಲ. ಕಾಣೆಯಾದ ಅಲ್ಮಾಸ್ ಪರ್ವೀನ್ 5.4 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಉರ್ದು, ಹಿಂದಿ, ಕನ್ನಡ, ಇಂಗ್ಲೀಷ್ ಭಾಷೆ ಮಾತಾನಾಡುತ್ತಾಳೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಟಾಪ್,…
ಶಿವಮೊಗ್ಗದ ಪತ್ರಕರ್ತ ಭರತ್ ರಾಜ್ ಸಿಂಗ್ ರವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಘೋಷಣೆ- ಮಾಧ್ಯಮ ಅಕಾಡೆಮಿ ಪ್ರಶಸ್ತಿ ಯಾರಿಗೆಲ್ಲ ಬಂದಿದೆ?…ಇಲ್ಲಿದೆ ಸಂಪೂರ್ಣ ಮಾಹಿತಿ
ಶಿವಮೊಗ್ಗದ ಪತ್ರಕರ್ತ ಭರತ್ ರಾಜ್ ಸಿಂಗ್ ರವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಘೋಷಣೆ ಶಿವಮೊಗ್ಗದ ಹಿರಿಯ ಪತ್ರಕರ್ತ, ಶಿವಮೊಗ್ಗ ಟೆಲೆಕ್ಸ್ ಕನ್ನಡ ದಿನಪತ್ರಿಕೆ ಉಪಸಂಪಾದಕರಾದ ಆರ್. ಪಿ ಭರತ್ ರಾಜ್ ಸಿಂಗ್ ೨೦೨೫ ನೇ ಸಾಲಿನ ರಾಜ್ಯ ಸರ್ಕಾರದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನಿವೃತ್ತ ಪ್ರಾಂಶುಪಾಲರಾದ ಪುಟ್ಟುಸಿಂಗ್ ಅವರ ಪುತ್ರರಾದ ಬಿ.ಎ ಪದವೀಧರ ಆರ್. ಪಿ ಭರತ್‌ರಾಜ್‌ಸಿಂಗ್ ಅವರು ಸಾಮಾಜಿಕ ಬದಲಾವಣೆಯ ಚಳವಳಿಯ ಭಾಗವಾಗಿ ೧೯೮೯ರಲ್ಲಿ ’ಶಿವಮೊಗ್ಗ ಎಕ್ಸ್ ಪ್ರೆಸ್’ ಕನ್ನಡ ದಿನಪತ್ರಿಕೆಯನ್ನು ಆರಂಭಿಸುವ…
*ಮಲೆನಾಡು ತಮಿಳ್ ಯುವ ಸಂಘಂ ಸಂಘಟನಾ ಕಾರ್ಯದರ್ಶಿ ಕುಮರೇಶ್ ಸುದ್ದಿಗೋಷ್ಠಿ* *ಜ.10ಕ್ಕೆ ಪೊಂಗಲ್- ಸಂಕ್ರಾಂತಿ ಪ್ರಯುಕ್ತ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ*
*ಮಲೆನಾಡು ತಮಿಳ್ ಯುವ ಸಂಘಂ ಸಂಘಟನಾ ಕಾರ್ಯದರ್ಶಿ ಕುಮರೇಶ್ ಸುದ್ದಿಗೋಷ್ಠಿ* *ಜ.10ಕ್ಕೆ ಪೊಂಗಲ್- ಸಂಕ್ರಾಂತಿ ಪ್ರಯುಕ್ತ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ* ಶಿವಮೊಗ್ಗ: ಪೊಂಗಲ್ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಲೆನಾಡು ತಮಿಳ್ ಯುವ ಸಂಘಂ ವತಿಯಿಂದ ಜ.10 ಮತ್ತ 11 ರಂದು ಆಲ್ಕೊಳ ಸರ್ಕಲ್‌ನಲ್ಲಿರುವ ಶ್ರೀ ಅಗಮುಡಿ ಸಮುದಾಯ ಭವನದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘಟನಾ ಕಾರ್ಯದರ್ಶಿಯಾದ ಕುಮರೇಶ್ ಎಸ್ ತಿಳಿಸಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಶಬರೀಶ್…
*ಶಿವಮೊಗ್ಗ ಮಹಾನಗರ ಪಾಲಿಕೆ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ* *ಪಾಲಿಕೆ ಸಿಬ್ಬಂದಿಗಳ ಬೆವರಿಳಿಸುತ್ತಿರುವ ಲೋಕಾಯುಕ್ತ*
*ಶಿವಮೊಗ್ಗ ಮಹಾನಗರ ಪಾಲಿಕೆ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ* *ಪಾಲಿಕೆ ಸಿಬ್ಬಂದಿಗಳ ಬೆವರಿಳಿಸುತ್ತಿರುವ ಲೋಕಾಯುಕ್ತ* ಶಿವಮೊಗ್ಗ ಮಹಾನಗರ ಪಾಲಿಕೆಗೆ ಇಂದು ಲೋಕಾಯುಕ್ತ ಅಧಿಕಾರಿಗಳ ತಂಡ ಬಿಸಿ ಮುಟ್ಟಿಸಿದೆ. ಬೆಳಿಗ್ಗೆಯೇ ವಿವಿಧ ತಂಡಗಳನ್ನು ರಚಿಸಿಕೊಂಡು ಪಾಲಿಕೆಯ ಕಂದಾಯ, ಆರೋಗ್ಯ ವಿಭಾಗಗಳ ಮೇಲೆ ದಾಳಿ ಮಾಡಿರುವ ಲೋಕಾಯುಕ್ತ ಪೊಲೀಸರು ಕಡತ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದು, ನಾನಾ ಪ್ರಶ್ನೆಗಳ ಮೂಲಕ ಪಾಲಿಕೆ ಸಿಬ್ಬಂದಿಗಳ ಬೆವರಿಳಿಸುತ್ತಿದ್ದಾರೆ.
*ಎಸ್ ಪಿ ಗೆ ಮನವಿ ಸಲ್ಲಿಸಿದ ಕೆ ಎಸ್ ಈಶ್ವರಪ್ಪ ಮತ್ತು ತಂಡ* *ವಿದೇಶಿ ಬೆದರಿಕೆ ಕರೆ ಪತ್ತೆ ಹಚ್ಚಲು ಮನವಿ ಸಲ್ಲಿಸಿದ ರಾಷ್ಟ್ರಭಕ್ತರು*
*ಎಸ್ ಪಿ ಗೆ ಮನವಿ ಸಲ್ಲಿಸಿದ ಕೆ ಎಸ್ ಈಶ್ವರಪ್ಪ ಮತ್ತು ತಂಡ* *ವಿದೇಶಿ ಬೆದರಿಕೆ ಕರೆ ಪತ್ತೆ ಹಚ್ಚಲು ಮನವಿ ಸಲ್ಲಿಸಿದ ರಾಷ್ಟ್ರಭಕ್ತರು* ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ದೂರವಾಣಿಗೆ ಮೊನ್ನೆ ವಿದೇಶಿ ಮೂಲದಿಂದ ಅಂತರಾಷ್ಟ್ರೀಯ ಕರೆಯ ಮೂಲಕ ಬೆದರಿಕೆ ಹಾಕುವ ಪ್ರಯತ್ನ ನಡೆದಿದ್ದು, ಇದರ ಅಂಗವಾಗಿ ಸೂಕ್ತ ತನಿಖೆ ಕೈಗೊಂಡು ಕ್ರಮ ಜರುಗಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ರಾಷ್ಷ್ರಭಕ್ತರ ಪ್ರಮುಖರಿಂದ ಮನವಿ ಸಲ್ಲಿಸಲಾಗಿದೆ. ಸ್ವತಃ ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್ ನೇತೃತ್ವದಲ್ಲಿ ಎಸ್ ಪಿ ನಿಖಿಲ್ ರವರಿಗೆ ಮನವಿ ಸಲ್ಲಿಸಲಾಯಿತು.
*ಶಿವಮೊಗ್ಗ ಟ್ರಾಫಿಕ್ ಹೆಡ್ ಕಾನ್ಸ್ ಟೆಬಲ್ ಝಕ್ರಿಯಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!* *ಬಚಾವಾದ ಮತ್ತೋರ್ವ ಮುಖ್ಯ ಪೇದೆ ನಾಸಿರ್!!* *ಏನಿದೆ ದೂರಿನಲ್ಲಿ?*
*ಶಿವಮೊಗ್ಗ ಟ್ರಾಫಿಕ್ ಹೆಡ್ ಕಾನ್ಸ್ ಟೆಬಲ್ ಝಕ್ರಿಯಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!* *ಬಚಾವಾದ ಮತ್ತೋರ್ವ ಮುಖ್ಯ ಪೇದೆ ನಾಸಿರ್!!* *ಏನಿದೆ ದೂರಿನಲ್ಲಿ?* 55 ವರ್ಷದ ಮೊಹಮ್ಮದ್ ಝಕ್ರಿಯಾ ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದವರು ಜ.7ರ ಮಧ್ಯರಾತ್ರಿ ಠಾಣೆಯಲ್ಲಿಯೇ ನೇಣಿಗೆ ಶರಣಾಗಿರುವ ಘಟನೆ ಇಡೀ ಪೊಲೀಸ್ ಇಲಾಖೆಯನ್ನೇ ಅಲುಗಾಡಿಸಿ ಹಾಕಿತ್ತು. ಮೆಟಲ್ ನಂಬರ್ 55 ಆಗಿದ್ದ ಝಕ್ರಿಯಾ ಕಳೆದ ತಿಂಗಳಷ್ಟೇ ಎ ಎಸ್ ಐ ಆಗಿ ಬಡ್ತಿ ಹೊಂದಿ…
*ಶಿವಮೊಗ್ಗದ ಪಶ್ಚಿಮ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೊಹಮದ್ ಜಾಕೀರ್ ಅಂತ್ಯಕ್ರಿಯೆಯ ಮುನ್ನ ಏನೆಲ್ಲ ನಡೆಯಿತು? ಪೊಲೀಸರ ಅಂತಿಮ ನಮನ ಹೇಗಿರುತ್ತೆ? ಇಲ್ಲಿ ನೋಡಿ…*
*ಶಿವಮೊಗ್ಗದ ಪಶ್ಚಿಮ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೊಹಮದ್ ಜಾಕೀರ್ ಅಂತ್ಯಕ್ರಿಯೆಯ ಮುನ್ನ ಏನೆಲ್ಲ ನಡೆಯಿತು? ಪೊಲೀಸರ ಅಂತಿಮ ನಮನ ಹೇಗಿರುತ್ತೆ? ಇಲ್ಲಿ ನೋಡಿ…*
*ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರಿಗೆ ಮತ್ತೆ ವಿದೇಶೀ ಬೆದರಿಕೆ ಕರೆ*
*ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರಿಗೆ ಮತ್ತೆ ವಿದೇಶೀ ಬೆದರಿಕೆ ಕರೆ* ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರ ಭಕ್ತರ ಬಳಗದ ಮುಖಂಡರಾದ ಕೆ.ಎಸ್.ಈಶ್ವರಪ್ಪನವರಿಗೆ ಮತ್ತೆ ವಿದೇಶೀ ಬೆದರಿಕೆ ಕರೆ ಬಂದಿದೆ. ದೂರವಾಣಿಗೆ ಮೊನ್ನೆ ವಿದೇಶಿ ಮೂಲದಿಂದ ಅಂತರಾಷ್ಟ್ರೀಯ ಕರೆಯ ಮೂಲಕ ಬೆದರಿಕೆ ಹಾಕುವ ಪ್ರಯತ್ನ ನಡೆದಿದ್ದು, ಇದರ ಅಂಗವಾಗಿ ಸೂಕ್ತ ತನಿಖೆ ಕೈಗೊಂಡು ಕ್ರಮ ಜರುಗಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಸ್ವತಃ ಈಶ್ವರಪ್ಪನವರು ನಾಳೆ ಬೆಳಿಗ್ಗೆ 10:30 ಮನವಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
*ದೀರ್ಘಾವಧಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸನ್ಮಾನಿಸಿ ಅಭಿನಂದಿಸಿದ ಬಲ್ಕೀಷ್ ಬಾನು*
*ದೀರ್ಘಾವಧಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸನ್ಮಾನಿಸಿ ಅಭಿನಂದಿಸಿದ ಬಲ್ಕೀಷ್ ಬಾನು* ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರನ್ನು ರಾಜ್ಯದ ದೀರ್ಘಾವಧಿ ಮುಖ್ಯ ಮಂತ್ರಿಯಾಗಿ ಸೇವೆ ಸಲ್ಲಿಸಿದ ಕೀರ್ತಿಗೆ ಪಾತ್ರರಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕೀಷ್ ಬಾನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಹ್ಯಾರಿಸ್ ಹಾಗೂ ಪರಿಷತ್ ಸದಸ್ಯರಾದ ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್ ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿಯಾದ ಮುನಾವರ್ ರವರು ಹಾಗೂ ಶಿವಮೊಗ್ಗ ಜಿಲ್ಲಾ ಮಹಿಳಾ ಘಟಕದ ಸದಸ್ಯರು ಹಾಜರಿದ್ದರು.


